Mercury Transit 2021: ಜುಲೈ 25ಕ್ಕೆ ಕರ್ಕ ರಾಶಿಗೆ ಬುಧನ ಪ್ರವೇಶ, ಈ 5 ರಾಶಿಯವರಿಗೆ ಬಿಸ್ನೆಸ್ ಹಾಗೂ ನೌಕರಿಯಲ್ಲಿ ಲಾಭ

Mercury Transit 2021: ಬಾಹ್ಯಾಕಾಶದಲ್ಲಿರುವ ಗ್ರಹಗಳು ನಿಯಮಿತವಾಗಿ ತಮ್ಮ ರಾಶಿಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಜ್ಯೋತಿಷ್ಯಶಾಸ್ರದಲ್ಲಿ (Jyotishya Shastra) ಇಂತಹ ಪ್ರತಿಯೊಂದು ರಾಶಿ ಪರಿವರ್ತನೆಯ ಮಹತ್ವವನ್ನು ಹೇಳಿಕೊಡಲಾಗಿದೆ.

Written by - Nitin Tabib | Last Updated : Jul 22, 2021, 01:59 PM IST
  • ಆಗಸ್ಟ್ 9ರವರೆಗೆ ಕರ್ಕ ರಾಶಿಯಲ್ಲಿ ಬುಧ.
  • ವಿವಾಹಿತರಿಗೆ ಅತ್ತೆ ಮನೆಯಿಂದ ಧನ ಪ್ರಾಪ್ತಿ.
  • ವ್ಯಾಪಾರಿಗಳಿಗೆ ಸಮಯ ಉತ್ತಮವಗಿರಲಿದೆ.
Mercury Transit 2021: ಜುಲೈ 25ಕ್ಕೆ ಕರ್ಕ ರಾಶಿಗೆ ಬುಧನ ಪ್ರವೇಶ, ಈ 5 ರಾಶಿಯವರಿಗೆ ಬಿಸ್ನೆಸ್ ಹಾಗೂ ನೌಕರಿಯಲ್ಲಿ ಲಾಭ title=
Mercury Transit 2021 (File Photo)

Mercury Transit 2021: ಬಾಹ್ಯಾಕಾಶದಲ್ಲಿರುವ ಗ್ರಹಗಳು ನಿಯಮಿತವಾಗಿ ತಮ್ಮ ರಾಶಿಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಜ್ಯೋತಿಷ್ಯಶಾಸ್ರದಲ್ಲಿ (Jyotishya Shastra) ಇಂತಹ ಪ್ರತಿಯೊಂದು ರಾಶಿ ಪರಿವರ್ತನೆಯ ಮಹತ್ವವನ್ನು ಹೇಳಿಕೊಡಲಾಗಿದೆ.

ಆಗಸ್ಟ್ 9 ರವರೆಗೆ ಕರ್ಕ ರಾಶಿಯಲ್ಲಿ ಬುಧ
ಬುಧ ಗ್ರಹವನ್ನು ಜ್ಞಾನ, ವೃದ್ಧಿ, ಧನ ಹಾಗೂ ವ್ಯಾಪಾರದ ಕಾರಕ ಎಂದು ಹೇಳಲಾಗುತ್ತದೆ. ಜುಲೈ 25 ರಂದು ಬುಧ ಚಂದ್ರನ ರಾಶಿಯಾಗಿರುವ (Astrology) ಕರ್ಕ ರಾಶಿಗೆ (Cancer) ಪ್ರವೇಶಿಸಲಿದ್ದಾನೆ. ಕರ್ಕ ರಾಶಿಯಲ್ಲಿ ಆತ ಆಗಸ್ಟ್ 9 ರವರೆಗೆ ಇರಲಿದ್ದಾನೆ. ಈಗಾಗಲೇ ಕರ್ಕ ರಾಶಿಗೆ ಸೂರ್ಯ ಪ್ರವೇಶಿಸಿದ್ದಾನೆ. ಕರ್ಕ ರಾಶಿಯಲ್ಲಿ ಬುಧ ಹಾಗೂ ಸೂರ್ಯ ಒಟ್ಟಿಗೆ ಬರುವುದರಿಂದ ವಿಶೇಷ ಯೋಗ ಸೃಷ್ಟಿಯಾಗಲಿದೆ. ಇದಾದ ಬಳಿಕ ಆತ ಸೂರ್ಯನ ರಾಶಿಯಾಗಿರುವ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಬುಧನ ಈ ರಾಶಿ ಪರಿವರ್ತನೆಯಿಂದ ಈ ರಾಶಿಯ ಜನರಿಗೆ ಒಳ್ಳೆಯ ಫಲಗಳು ಲಭಿಸಲಿವೆ.

ಧನು ರಾಶಿ: ಬುಧನ ಕರ್ಕ ಗೋಚರ (Mercury Transit 2021) ಧನು ರಾಶಿಯ ಜಾತಕದವರಿಗೆ ಶುಭ ಫಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ವಿದೇಶ ಯಾತ್ರೆಯ ಅವಕಾಶ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆಯಾಗಲಿದೆ. ತಂದೆಯ ಜೊತೆಗಿನ ನಿಮ್ಮ ಸಂಬಂಧದಲ್ಲಿ ಸುಧಾರಣೆಯಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಅಭಿರುಚಿ ಹೆಚ್ಚಾಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. 

ವಿವಾಹಿತರಿಗೆ ಅತ್ತೆ ಮನೆಯಿಂದ ಧನ ಪ್ರಾಪ್ತಿ
ಮಿಥುನ ರಾಶಿ:
ಮಿಥುನ ರಾಶಿಯ ಜಾತಕದವರ ಪಾಲಿಗೆ ಈ ಬುಧ (Mercury) ಗೋಚರ ಶುಭ ಪರಿಣಾಮಗಳನ್ನು ಹೊತ್ತು ತರಲಿದೆ. ವಿವಾಹಿತರಿಗೆ ಅತ್ತೆ ಮನೆಯಿಂದ ಧನ ಸಿಗುವ ಸಂಕೇತಗಳು ಗೋಚರಿಸುತ್ತಿವೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗಲಿದೆ. ಹೂಡಿಕೆಗಾಗಿ ಸಮಯ ಅನುಕೂಲಕರವಾಗಿದೆ. ವಾಣಿ ಹಾಗೂ ಲೇಖನದ ಮೂಲಕ ಕೂಡ ಧನ ಪ್ರಾಪ್ತಿಯ ಲಕ್ಷಣಗಳು ಗೋಚರಿಸುತ್ತಿವೆ.

ಇದನ್ನೂ ಓದಿ- ಮನೆಯಿಂದ ಹೊರಡುವ ವೇಳೆ ಈ ವಸ್ತುಗಳು ಕಣ್ಣಿಗೆ ಬಿದ್ದರೆ ಶುಭವಂತೆ

ಮೇಷ ರಾಶಿ: ಬುಧನ ಕರ್ಕ ಪ್ರವೇಶದಿಂದ ಮೇಷ ರಾಶಿಯ ಜಾತಕದವರಿಗೆ (Zodiac Signs) ಹೊಸ ಉದ್ಯೋಗಾವಕಾಶ ಪ್ರಾಪ್ತಿಯಾಗಲಿದೆ. ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳು ನಿವಾರಣೆಯಾಗಲಿವೆ. ನಿಂತು ಹೋದ ಹಣ ವಾಪಸ್ ಬರಲಿದೆ. ವ್ಯಾಪಾರದಲ್ಲಿ ಲಾಭ. ಈ ಗೋಚರ ಕಾಲ ವಿದ್ಯಾರ್ಥಿಗಳ ಪಾಲಿಗೂ ಕೂಡ ಶುಭವಾಗಿರಲಿದೆ. 

ಮೀನ ರಾಶಿ: ಬುಧನ ಈ ಗೋಚರ ಮೀನ ರಾಶಿಯ ಪಾಲಿಗೆ ಸೌಖ್ಯಕರವಾಗಿರಲಿದೆ. ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಾಥ್ ಸಿಗಲಿದೆ. ಧನ ಪ್ರಾಪ್ತಿಯ ಯೋಗ ಇದೆ. ಪಿತ್ರಾರ್ಜಿತ ಆಸ್ತಿಯಿಂದ ಲಾಭದ ಯೋಗ. ಕೌಟುಂಬಿಕ ಸೌಖ್ಯ ಮತ್ತು ಶಾಂತಿ ಪ್ರಾಪ್ತಿಯಾಗಲಿದೆ.

ಇದನ್ನೂ ಓದಿ-Guru Purnima 2021 : ಗುರು ಪೂರ್ಣಿಮೆಯಂದು 5 ರಾಶಿಯವರು ಈ ಉಪಾಯ ಮಾಡಿ ಶನಿ ಕಾಟದಿಂದ ಪರಿಹಾರ ಸಿಗುತ್ತೆ

ವ್ಯಾಪಾರಿಗಳಿಗೆ ಶುಭವಾಗಿರಲಿದೆ ಈ ಕಾಲ
ವೃಷಭ ರಾಶಿ:
ಬುಧನ ಸ್ಥಾನಪಲ್ಲಟದಿಂದ ವೃಷಭ ರಾಶಿಯವರ ಪಾಲಿಗೆ ಶುಭಕರವಾಗಲಿದೆ. ವ್ಯಾಪಾರಿಗಳಿಗೂ ಕೂಡ ಈ ಸಮಯ ತುಂಬಾ ಉತ್ತಮವಾಗಿರಲಿದೆ. ಈ ಸಮಯದ ಸಹಾಯದಿಂದ ನಿಮ್ಮ ಹಲವು ಕೆಲಸಗಳು ನೆರವೇರಲಿವೆ. ಮಾತಿನಲ್ಲಿ ಸುಮಧುರತೆ ಇರಲಿದೆ. ಕುಟುಂಬ ಸಮೇತ ಯಾತ್ರೆಯ ಯೋಗವಿದೆ. ಈ ಅವಧಿಯಲ್ಲಿ ಗಣ್ಯ ವ್ಯಕ್ತಿಗಳ ಒಡನಾಟ ನಿಮಗೆ ಸಿಗಲಿದೆ. 

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಸೂಚನೆಗಳು ಸಾಮಾನ್ಯ ಮಾಹಿತಿ ಹಾಗೂ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮೊದಲು ತಜ್ಞರನ್ನು ಸಂಪರ್ಕಿಸಲು ವಿನಂತಿ)

ಇದನ್ನೂ ಓದಿ-ಲಕ್ಷ್ಮೀ ಕೃಪೆಗಾಗಿ ಶೃದ್ದೆಯಿಂದ ಅನುಸರಿಸಿ ಈ ಮಾರ್ಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News