Shravana Maasa 2022 - ಶ್ರಾವಣ ಮಾಸ ಅಂದರೆ ದೇವಾಧಿದೇವ ಶಿವನಿಗೆ ಸಮರ್ಪಿತವಾದ ತಿಂಗಳು. ಈ ತಿಂಗಳ ಆರಂಭದಿಂದಲೇ ಶ್ರೀವಿಷ್ಣು ಯೋಗನಿದ್ರೆಗಾಗಿ ಕ್ಷೀರಸಾಗರಕ್ಕೆ ತೆರಳಲಿದ್ದಾರೆ ಮತ್ತು ಇಡೀ ಸೃಷ್ಟಿಯ ಜವಾಬ್ದಾರಿ ಶಿವನಿಗೆ ವಹಿಸಲಿದ್ದಾರೆ. ಈ ವರ್ಷ ಜೂನ್ 29ರಂದು ಶ್ರಾವಣ ಮಾಸ ಜುಲೈ 29 ರಿಂದ ಆರಂಭಗೊಂಡು ಆಗಸ್ಟ್ 27ರವರೆಗೆ ಇರಲಿದೆ. ಶ್ರಾವಣ ಮಾಸದಲ್ಲಿ ದೇವಾಧಿದೇವ ಮಹಾದೇವನ ಪೂಜೆ, ಆರಾಧನೆ ಹಾಗೂ ವೃತಕ್ಕೆ ವಿಶೇಷ ಮಹತ್ವವಿದೆ. ಈ ತಿಂಗಳಲ್ಲಿ ಶಿವನನ್ನು ಪ್ರಸನ್ನಗೊಳಿಸಲು ಜಲಾಭಿಷೇಕ ನೆರವೇರಿಸಲಾಗುತ್ತದೆ. 

COMMERCIAL BREAK
SCROLL TO CONTINUE READING

ಹಾಗೆ ನೋಡಿದರೆ ಶ್ರಾವಣ ಮಾಸದಲ್ಲಿ ಎಲ್ಲಾ ರಾಶಿಗಳ ಮೇಲೆ ಶಿವನ ಕೃಪೆ ಇರುತ್ತದೆ. ಆದರೆ, ಈ ಬಾರಿಯ ಶ್ರಾವಣ ಮಾಸ ಮೂರು ರಾಶಿಗಳ ಜಾತಕದವರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಶ್ರಾವಣ ಮಾಸದಲ್ಲಿ ಗೃಹಗಳ ಸ್ಥಿತಿ ಯಾವ ರಾಶಿಗಳಿಗೆ ಲಾಭಕಾರಿ ಸಾಬೀತಾಗಲಿದೆ ತಿಳಿದುಕೊಳ್ಳೋಣ ಬನ್ನಿ,


ಮೇಷ ರಾಶಿ- ಮೇಷ ರಾಶಿಯ ಜಾತಕದವರಿಗೆ ಶ್ರಾವಣ ಮಾಸ ಅತ್ಯಂತ ಮಂಗಳಕರ ಸಾಬೀತಾಗಲಿದೆ. ಶಿವನಿಗೆ ಸಮರ್ಪಿತ ಈ ತಿಂಗಳಿನಲ್ಲಿ ನಿಮ್ಮ ಎಲ್ಲಾ ಮನೋಕಾಮನೆಗಳು ನೆರವೇರಲಿವೆ. ಅಪಾರ ಧನಲಾಭವಾಗಲಿದೆ. ಮಾನ-ಸನ್ಮಾನ ದ್ವಿಗುಣಗೊಳ್ಳಲಿದೆ. ಶ್ರಾವಣ ಮಾಸದ ಸೋಮವಾರದಂದು ಶಿವಲಿಂಗಕ್ಕೆ  ಬೆಲ್ಪತ್ರಿ ಅರ್ಪಿಸುವುದರಿಂದ ಶುಭ ಫಲಗಳು ಪ್ರಾಪ್ತಿಯಾಗಲಿವೆ. 

ಮಿಥುನ ರಾಶಿ- ಮಿಥುನ ರಾಶಿಯ ಜಾತಕದವರ ಪಾಲಿಗೆ ಶ್ರಾವಣ ಮಾಸ ಅಪಾರ ಖುಷಿಗಳನ್ನು ತರಲಿದೆ. ಆದಿಶಂಕರನ ಕೃಪೆಯಿಂದ ನಿಮಗೆ ಸಕಾರಾತ್ಮಕ ಪರಿಣಾಮಗಳು ಪ್ರಾಪ್ತಿಯಾಗಲಿವೆ. ಹೊಸ ನೌಕರಿಯ ಹುಡುಕಾಟದಲ್ಲಿರುವ ಜಾತಕದವರಿಗೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಶ್ರಾವಣ ತಿಂಗಳಲ್ಲಿ ಪ್ರಮೋಶನ್ ನಿರೀಕ್ಷೆಯಲ್ಲಿ ಇರುವವರ ಮನೋಕಾಮನೆ ಈಡೇರಲಿದೆ. ಈ ತಿಂಗಳಿನಲ್ಲಿ ಶಿವಶಂಕರನ ಆರಾಧನೆಯಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ.


ಇದನ್ನೂ ಓದಿ-Money Plant Upay: ಮನಿ ಪ್ಲಾಂಟ್ ಗೆ ಈ ಒಂದು ವಸ್ತುವನ್ನು ಕಟ್ಟುವುದರಿಂದ, ಅದು ಹೆಸರಿಗೆ ತಕ್ಕಂತೆ ಫಲ ನೀಡಲಿದೆ

ಮಕರ ರಾಶಿ- ಮಕರ ರಾಶಿಯ ಜಾತಕದವರ ಮೇಲೆ ಶ್ರಾವಣ ಮಾಸದಲ್ಲಿ ಶಿವನ ವಿಶೇಷ ಕೃಪೆ ಇರಲಿದೆ. ನೌಕರಿಯಲ್ಲಿ ನಿರತ ಜಾತಕದವರ ಆದಾಯ ಹೆಚ್ಚಾಗಲಿದೆ. ನೌಕರಿಯ ಹುಡುಕಾಟದಲ್ಲಿರುವವರಿಗೆ ಶುಭ ಪರಿಣಾಮಗಳು ಸಿಗಲಿವೆ. ಬಾಳಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಮಧುರತೆ ಇರಲಿದೆ. ಈ ತಿಂಗಳಿನಲ್ಲಿ ದೇವಾಧಿದೇವ ಮಹಾದೇವನಿಗೆ ಬೆಲ್ಪತ್ರಿ ಅರ್ಪಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ. 


ಇದನ್ನೂ ಓದಿ-Chanakya Niti: ಈ ರೀತಿಯ ಮಹಿಳೆಯ ಸಾಂಗತ್ಯ ಜೀವನವನ್ನೇ ನರಕವನ್ನಾಗಿಸುತ್ತದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.