Chaturmas Good Effect Zodiac Sign: ಹಿಂದೂ ಧರ್ಮಶಾಸ್ತ್ರದಲ್ಲಿ ಚಾತುರ್ಮಾಸಕ್ಕೆ ವಿಶೇಷ ಮಹತ್ವವಿದೆ. ಈ ವರ್ಷ ಜುಲೈ 10ರಿಂದ ಚಾತುರ್ಮಾಸ ಆರಂಭಗೊಳ್ಳುತ್ತಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀವಿಷ್ಣು ಕ್ಷೀರಸಾಗರಕ್ಕೆ ನಾಲ್ಕು ತಿಂಗಳ ಶಯನಕ್ಕೆ ತೆರಳುತ್ತಾರೆ ಎನ್ನಲಾಗಿದೆ. ಇದೇ ಕಾರಣದಿಂದ ಈ ನಾಲ್ಕು ತಿಂಗಳಲ್ಲಿ ಯಾವುದೇ ರೀತಿಯ ಶುಭ ಹಾಗೂ ಮಂಗಳ ಕಾರ್ಯಗಳನ್ನು ನೆರವೇರಿಸಲಾಗುವುದಿಲ್ಲ. ಪೂಜೆ-ಪುನಸ್ಕಾರಗಳ ದೃಷ್ಟಿಯಿಂದ ಈ ನಾಲ್ಕು ತಿಂಗಳುಬಲು ತುಂಬಾ ವಿಶೇಷವಾಗಿವೆ. ಈ ನಾಲ್ಕು ತಿಂಗಳು ಮೂರು ರಾಶಿಯ ಜಾತಕದವರ ಪಾಲಿಗೆ ತುಂಬಾ ಲಾಭಕಾರಿ ಸಾಬೀತಾಗಲಿವೆ. ಆ ರಾಶಿಯಲು ಯಾವುವು ತಿಳಿದುಕೊಳ್ಳೋಣ ಬನ್ನಿ,
ಮೇಷ ರಾಶಿ- ಜೋತಿಷ್ಯ ಶಾಸ್ತ್ರದ ಪ್ರಕಾರ ಚಾತುರ್ಮಾಸ ಈ ರಾಶಿಯ ಜನರ ಪಾಲಿಗೆ ತುಂಬಾ ಲಾಭಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ ಹೊಸ ನೌಕರಿಯ ಪ್ರಸ್ತಾವನೆ ನಿಮ್ಮ ಕೈ ಸೇರಲಿದೆ. ಇನ್ನೊಂದೆಡೆ ಈಗಾಗಲೇ ನೌಕರಿಯಲ್ಲಿರುವ ಜನರಿಗೆ ಪದೋನ್ನತಿ ಅಥವಾ ವೇತನ ವೃದ್ಧಿ ಸಿಗುವ ಸಾಧ್ಯತೆ ಇದೆ. ಉನ್ನತಿಯ ಹೊಸ ಆಯಾಮಗಳು ತೆರೆದುಕೊಳ್ಳಲಿವೆ. ಆದಾಯದಲ್ಲಿ ವೃದ್ಧಿಯಾಗಲಿದೆ. ಈ ಅವಧಿಯಲ್ಲಿ ವ್ಯಾಪಾರ ಹೆಚ್ಚಾಗಲಿದೆ. ಹೊಸ ವ್ಯಾಪಾರಿ ಸಂಬಂಧಗಳು ಕುದುರಲಿವೆ ಮತ್ತು ಅವು ನಿಮ್ಮ ಪರ ಇರಲಿವೆ. ವಿದೇಶ ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೂ ಕೂಡ ಉತ್ತಮ ಧನಲಾಭ ಸಿಗಲಿದೆ.
ಕನ್ಯಾ ರಾಶಿ- ಚಾತುರ್ಮಾಸದ ನಾಲ್ಕು ತಿಂಗಳುಗಳು ನಿಮಗೆ ಹಿತಕಾರಿ ಸಾಬೀತಾಗಲಿವೆ. ಅದೃಷ್ಟದ ಸಂಪೂರ್ಣ ಸಾಥ್ ಸಿಗಲಿದೆ. ಸಿಲುಕಿಕೊಂಡ ಅಥವಾ ದೀರ್ಘಕಾಲದಿಂದ ನಿಂತುಹೋದ ಕಾರ್ಯಗಳು ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ಆಕಸ್ಮಿಕ ಧನಲಾಭದ ಎಲ್ಲಾ ಸಾಧ್ಯತೆಗಳಿವೆ. ಚಾತುರ್ಮಾಸದ ಅವಧಿಯಲ್ಲಿ ನೀವು ಕೊಟ್ಟ ಸಾಲ ನಿಮ್ಮ ಬಳಿ ಹಿಂದಿರುಗಲಿದೆ. ಆರ್ಥಿಕ ಸ್ಥಿತಿ ಕೂಡ ಸುಧಾರಿಸಲಿದೆ. ಮೀಡಿಯಾ, ಚಿತ್ರೋದ್ಯಮ, ಮಾರ್ಕೆಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೂ ಕೂಡ ಈ ಸಮಯ ಅದ್ಭುತವಾಗಿರಲಿದೆ.
ಇದನ್ನೂ ಓದಿ- Kajal Benefits: ಕಾಡಿಗೆಯ ಈ ಉಪಾಯಗಳು ನಿಮ್ಮ ಭಾಗ್ಯವನ್ನು ಬದಲಿಸಲಿವೆ. ಸಿಗಲಿವೆ ಈ ಲಾಭ
ವೃಶ್ಚಿಕ ರಾಶಿ- ಜೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ಜನರಿಗೆ ನಾಲ್ಕು ತಿಂಗಳ ಕಾಲಾವಧಿ ವರದಾನಕ್ಕಿಂತ ಕಮ್ಮಿ ಏನಿಲ್ಲ. ವೃತ್ತಿಜೀವನ ಹಾಗೂ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಬಾಳಸಂಗಾತಿಯ ಜೊತೆಗೆ ಸಂಬಂಧದಲ್ಲಿ ಮಧುರತೆ ಇರಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಜಾತಕದವರ ಪಾಲಿಗೆ ಸಮಯ ಅನುಕೂಲಕರವಾಗಿರಲಿದೆ. ಈ ಅವಧಿಯಲ್ಲಿ ಉತ್ತಮ ಧನಲಾಭದ ಸಾಧ್ಯತೆ ಇದೆ. ಕುಟುಂಬದಲ್ಲಿ ಖುಷಿಯ ಆಗಮನದ ಸಂಕೇತಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ನಿರೀಕ್ಷೆ ಇದೆ.
ಇದನ್ನೂ ಓದಿ-Vidur Niti: ಈ ಜನರು ಯಾವಾಗಲು ದುಃಖದಲ್ಲಿಯೇ ತನ್ನ ಜೀವನ ಕಳೆಯುತ್ತಾರೆ, ಇವರಲ್ಲಿ ನೀವಿಲ್ಲವಲ್ಲ?
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.