ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಒಂದು ಗ್ರಹವು ರಾಶಿಚಕ್ರವನ್ನು ಬದಲಾಯಿಸಿದಾಗ, ಅದರ ಪರಿಣಾಮವು ನೇರವಾಗಿ ಮಾನವ ಜೀವನದ ಮೇಲೆ ಉಂಟಾಗುತ್ತದೆ (Shani rashi parivarthane effects). 2022 ರಲ್ಲಿ ಅನೇಕ ದೊಡ್ಡ ಗ್ರಹಗಳು ಸ್ಥಾನ ಪಲ್ಲಟ ಮಾಡಿಕೊಳ್ಳಲಿವೆ. ಶನಿಮಹಾತ್ಮನನ್ನು ಕರ್ಮ ಫಲದಾತ ಎಂದು ಕರೆಯಲಾಗುತ್ತದೆ.  ಶನಿಯು ಪ್ರಸ್ತುತ ಮಕರ ರಾಶಿಯಲ್ಲಿದ್ದು, ಏಪ್ರಿಲ್ 29 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಮಕರ ರಾಶಿ ಮತ್ತು ಕುಂಭವನ್ನು ಶನಿ ದೇವನ (shani deva)ರಾಶಿ ಚಿಹ್ನೆಗಳೆಂದು ಹೇಳಲಾಗುತ್ತದೆ. ಶನಿದೇವರು ಸುಮಾರು 30 ವರ್ಷಗಳ ನಂತರ ಮತ್ತೆ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಅಸ್ತವಾಗಿದ್ದ ಶನಿಯು ಮಾರ್ಚ್ 26 ರಂದು ಮತ್ತೆ ಉದಯಿಸಿದ್ದಾನೆ. ಶನಿಯ ಸಂಕ್ರಮಣ ಮತ್ತುಶನಿ ಉದಯದಿಂದ ಕೆಲವು ರಾಶಿಯವರ ಮೇಲೆ ಶನಿದೇವನ ವಿಶೇಷ ಕೃಪೆ ಇರಲಿದೆ. 


COMMERCIAL BREAK
SCROLL TO CONTINUE READING

ಮೇಷ (Aries) : ಶನಿಯು (shani deva) ನಿಮ್ಮ ರಾಶಿಯ ಹತ್ತನೇ ಮನೆಯಲ್ಲಿ (ಕರ್ಮ, ವೃತ್ತಿ, ಉದ್ಯೋಗ ಮತ್ತು ವ್ಯವಹಾರ) ಉದಯಿಸಿದ್ದಾನೆ. ಆದ್ದರಿಂದ, ನಿಮ್ಮ ಜಾತಕದಲ್ಲಿ ರಾಜಯೋಗವು ರೂಪುಗೊಳ್ಳುತ್ತಿದೆ. ಇದರಿಂದ ಈ ರಾಶಿಯವರು ರಾಜನಂತೆ ಜೀವನ ನಡೆಸಬಹುದು. ಈ ಸಮಯದಲ್ಲಿ ರಾಜಕೀಯಕ್ಕೆ ಸಂಬಂಧಿಸಿದವರು ದೊಡ್ಡ ಹುದ್ದೆಯನ್ನು ಪಡೆಯಬಹುದು.


ಇದನ್ನೂ ಓದಿ : ಹಸ್ತದಲ್ಲಿ ರಾಹು ರೇಖೆ ಇದ್ದರೆ ಜೀವನ ಪೂರ್ತಿ ಧನಿಕರಾಗಿರುತ್ತಾರೆ.! ನಿಮ್ಮ ಕೈಯ್ಯನ್ನೊಮ್ಮೆ ನೋಡಿಕೊಳ್ಳಿ


ವೃಷಭ ರಾಶಿ (Taurus) : ಶನಿದೇವನ ಉದಯದಿಂದಾಗಿ ನಿಮ್ಮ ಜಾತಕದಲ್ಲಿ ರಾಜಯೋಗವು ರೂಪುಗೊಳ್ಳುತ್ತಿದೆ (shani transit effects). ಈ ಸಮಯದಲ್ಲಿ ವ್ಯಾಪಾರಿಗಳು ಲಾಭ ಗಳಿಸಬಹುದು. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಈ ಸಮಯದಲ್ಲಿ, ನೀವು ಕೈ ಹಾಕುವ  ಎಲ್ಲಾ ಕೆಲಸದಲ್ಲಿಯೂ ನೀವು ಯಶಸ್ವಿಯಾಗುತ್ತೀರಿ.


ತುಲಾ  (Libra): ಶನಿದೇವನು ನಿಮ್ಮ ರಾಶಿಚಕ್ರದ ನಾಲ್ಕನೇ (ಆನಂದ, ವಾಹನ, ತಾಯಿ) ಮನೆಯಲ್ಲಿ ಉದಯವಾಗಿದೆ. ಆದ್ದರಿಂದ, ನಿಮ್ಮ ಜಾತಕದಲ್ಲಿ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಮಹತ್ತರವಾಗಿ ಸುಧಾರಿಸುವ ಸಾಧ್ಯತೆಯಿದೆ (shani rashi parivarthane). ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆ ಅತ್ಯುತ್ತಮವಾಗಿರುತ್ತದೆ.


ಇದನ್ನೂ ಓದಿ : Sun Transit 2022: ಸೂರ್ಯನ ರಾಶಿ ಬದಲಾವಣೆಯಿಂದ ಈ ಜನರಿಗೆ ಅದೃಷ್ಟ, ಬಹಳಷ್ಟು ಹಣ ಸಿಗಲಿದೆ!


ಕರ್ಕ ರಾಶಿ (Cancer) : ಶನಿ ದೇವನು ಕರ್ಕ ರಾಶಿಯ ಏಳನೇ ಮನೆಯಲ್ಲಿಉದಯಿಸಿದ್ದಾನೆ. ಶನಿದೇವನ ಉದಯವು ನಿಮಗೆ ಲಾಭದಾಯಕವಾಗಿರುತ್ತದೆ. ಈ ಸಮಯದಲ್ಲಿ ನೀವು ಪಾಲುದಾರಿಕೆ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ.


ಕುಂಭ (Aquarius) : ಶನಿ ರಾಶಿಯ ಉದಯ ಕುಂಭ ರಾಶಿಯವರಿಗೆ  ಲಾಭವನ್ನು ಪಡೆಯುತ್ತಾರೆ. ಈ ಸಮಯದಲ್ಲಿ, ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲ್ಸಕ್ಕೆ ಮೆಚ್ಚುಗೆ ಸಿಗಲಿದೆ. 


ಇದನ್ನೂ ಓದಿ : Astrology : ಉದ್ಯೋಗ ಮತ್ತು ಹಣ ಪಡೆಯಲು ಈ ಮಂತ್ರ ಪಠಿಸಿ, ನಿಮ್ಮ ಆಸೆಗಳು ಈಡೇರುತ್ತದೆ


ಮೀನ (Pisces) :  ಶನಿಯು ನಿಮ್ಮ ರಾಶಿಯ  11 ನೇ ಮನೆಯಲ್ಲಿ ಉದಯಿಸಿದ್ದಾನೆ. ಇದನ್ನು ಆದಾಯದ ಮನೆ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗಬಹುದು. ಈ ಸಮಯದಲ್ಲಿ ಅನಗತ್ಯ ವೆಚ್ಚಗಳು ನಿಲ್ಲುತ್ತವೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.