Giant Tulsi Plant: ಹಿಂದೂ ಧರ್ಮದಲ್ಲಿ ತುಳಸಿ ಎಂಬ ಪವಿತ್ರ ಸಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪೂಜೆ ಪುನಸ್ಕಾರಗಳಲ್ಲಿ ತುಳಸಿಯನ್ನು ಹೆಚ್ಚು ಬಳಕೆ ಮಾಡಲಾಗುತ್ತೆ. ಇನ್ನು ಪ್ರತಿಯೊಬ್ಬ ಹಿಂದೂಗಳ  ಮನೆಯಲ್ಲಿ ತುಳಸಿ ಸಸ್ಯವನ್ನು ಖಂಡಿತವಾಗಿಯೂ ನೆಡಲಾಗುತ್ತದೆ. ತುಳಸಿ ಸಸ್ಯವನ್ನು ಅಂಗಳದಲ್ಲಿ ನೆಟ್ಟು ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಈ ಸಸ್ಯವು 2 ರಿಂದ 3 ಅಡಿ ಬೆಳೆಯುತ್ತದೆ. ಆದರೆ ಗುಜರಾತ್‌ನ ವಡೋದರಾದ ತುಳಸಿ ಸಸ್ಯದ ಆಘಾತಕಾರಿ ಚಿತ್ರ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇಬ್ಬರು ʼಗಂಡಸರʼ ನಡುವೆ ʼಹೋಮೋ ಸೆಕ್ಸ್‌ʼ : ಬೇರೆ ಹುಡುಗಿ ಮದುವೆಯಾಗಿದ್ದಕ್ಕೆ ಕೊಲೆ..!  


ತುಳಸಿ ಸಸ್ಯದ ಉದ್ದ 7 ಅಡಿ ಇದೆ. ಈ ಸಸ್ಯದ ಚಿತ್ರವನ್ನು ನೋಡಲು ಎಲ್ಲರೂ ಉತ್ಸುಕರಾಗಿದ್ದಾರೆ. ಈ ಸಸ್ಯದ ಬೆಳವಣಿಗೆಯು ಜನರನ್ನು ಆಶ್ಚರ್ಯಗೊಳಿಸಿದೆ. ಇದು ವಡೋದರಾದ ಅಕೋಟಾ ನಿವಾಸಿ ಮನೋಜ್ ತ್ರಿಪಾಠಿ ಅವರ ಮನೆಯಲ್ಲಿದೆ.


ಈ ತುಳಸಿ ಸಸ್ಯ ಬೆಳೆಯುವುದನ್ನು ನೋಡಿ, ಮನೋಜ್ ಅದನ್ನು ಮತ್ತಷ್ಟು ಚೆನ್ನಾಗಿ ನೋಡಿಕೊಳ್ಳಲು ಪ್ರಾರಂಭಿಸಿದರು. ಮನೋಜ್ ತ್ರಿಪಾಠಿ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ಈ ತುಳಸಿ ಸಸ್ಯ ವಿಶ್ವ ದಾಖಲೆಯನ್ನು ಬರೆಯಬೇಕೆಂದು ಅವರು ಬಯಸುತ್ತಾರೆ. ಈ ತುಳಸಿ ಸಸ್ಯದ ಕುರಿತು ಆನ್‌ಲೈನ್ ಸಂಶೋಧನೆ ನಡೆಸಿದ ಅವರು, ಇದುವರೆಗೆ ವಿಶ್ವದಲ್ಲಿ ಅತೀ ಉದ್ದದ ತುಳಸಿ ಸಸ್ಯ 11 ಅಡಿ ಎತ್ತರ ಇದೆ ಎಂದು ತಿಳಿದುಕೊಂಡರು. ವಿಶ್ವದ ಅತಿ ಉದ್ದದ ತುಳಸಿ ಸಸ್ಯ ಗ್ರೀಸ್‌ನಲ್ಲಿದೆ.


ಈ ತುಳಸಿ ಸಸ್ಯದ ಬಗ್ಗೆ ಕೇಳಿದಾಗ ಮನೋಜ್ ಸಂಕ್ಷಿಪ್ತವಾಗಿ ಮಾತನಾಡಿದ್ದಾರೆ. “ಇದು ಕಾಡು ಪ್ರಭೇದಗಳ ರಾಮ್ ತುಳಸಿ ಸಸ್ಯ. ಪ್ರತಿಯೊಬ್ಬರೂ ಈ ಸಸ್ಯದ ಆಶ್ಚರ್ಯಕರ ಬೆಳವಣಿಗೆಯ ರಹಸ್ಯವನ್ನು ತಿಳಿದುಕೊಳ್ಳಲು ಬಯಸುತ್ತಾರೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: 50 ರೂ.ಗಾಗಿ ಚರ್ಮ ಕಿತ್ತುಬರುವಂತೆ ಹೊಡೆದ ವಿರಾಟ್ ತಾಯಿ! ಕಿಂಗ್ ಕೊಹ್ಲಿ ಸೀಕ್ರೆಟ್ ರಿವೀಲ್!


ಈ ಸಸ್ಯದ ಬೆಳವಣಿಗೆಯ ಹಿಂದೆ ಉತ್ತಮ ವಾತಾವರಣದ ಕೊಡುಗೆ ಬಹಳಷ್ಟಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಉತ್ತಮ ಮಣ್ಣು ಮತ್ತು ಸಾಮಾನ್ಯ ನೀರಿನಿಂದಾಗಿ ಈ ಬೆಳವಣಿಗೆ ಉತ್ತಮವಾಗಿದೆ. ಈಗ ಮುಂಬರುವ ದಿನಗಳಲ್ಲಿ ಈ ತುಳಸಿ ಸಸ್ಯ  ವಿಶ್ವ ದಾಖಲೆಯನ್ನು ಬರೆಯುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.