Virat Kohli: 50 ರೂ.ಗಾಗಿ ಚರ್ಮ ಕಿತ್ತುಬರುವಂತೆ ಹೊಡೆದ ವಿರಾಟ್ ತಾಯಿ! ಕಿಂಗ್ ಕೊಹ್ಲಿ ಸೀಕ್ರೆಟ್ ರಿವೀಲ್!

Virat Kohli: ಕೊಹ್ಲಿ ಅವರ ನೃತ್ಯದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹಲವು ಬಾರಿ ವೈರಲ್ ಆಗಿವೆ. ಅನೇಕ ಸಂದರ್ಶನಗಳಲ್ಲಿ, ವಿರಾಟ್ ಕೊಹ್ಲಿ ಪಂಜಾಬಿ ಮ್ಯೂಸಿಕ್’ಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಆದರೆ ಇದೇ ಡ್ಯಾನ್ಸ್’ನಿಂದಾಗಿ ವಿರಾಟ್ ಕೊಹ್ಲಿ ಒಮ್ಮೆ ಪೆಟ್ಟು ತಿಂದಿದ್ದಾರಂತೆ. ಈ ಬಗ್ಗೆ ನಿಮಗೆ ತಿಳಿದಿದೆಯೇ?

Written by - Bhavishya Shetty | Last Updated : Mar 6, 2023, 08:04 PM IST
    • ಕೊಹ್ಲಿ ಅವರ ನೃತ್ಯದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹಲವು ಬಾರಿ ವೈರಲ್ ಆಗಿವೆ.
    • ಅನೇಕ ಸಂದರ್ಶನಗಳಲ್ಲಿ, ವಿರಾಟ್ ಕೊಹ್ಲಿ ಪಂಜಾಬಿ ಮ್ಯೂಸಿಕ್’ಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ.
    • ಆದರೆ ಇದೇ ಡ್ಯಾನ್ಸ್’ನಿಂದಾಗಿ ವಿರಾಟ್ ಕೊಹ್ಲಿ ಒಮ್ಮೆ ಪೆಟ್ಟು ತಿಂದಿದ್ದಾರಂತೆ. ಈ ಬಗ್ಗೆ ನಿಮಗೆ ತಿಳಿದಿದೆಯೇ?
Virat Kohli: 50 ರೂ.ಗಾಗಿ ಚರ್ಮ ಕಿತ್ತುಬರುವಂತೆ ಹೊಡೆದ ವಿರಾಟ್ ತಾಯಿ! ಕಿಂಗ್ ಕೊಹ್ಲಿ ಸೀಕ್ರೆಟ್ ರಿವೀಲ್! title=
Virat Kohli

Virat Kohli: ​ಟೀಂ ಇಂಡಿಯಾದ 'ರನ್‌ ಮೆಷಿನ್' ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ಕ್ರೀಸ್’ಗೆ ಬಂದರೆ, ಎಂತಹ ಬೌಲರ್’ಗಳಾದರೂ ಸರಿ ಎದೆಯೊಡ್ಡಿ ನಿಲ್ಲುತ್ತಾರೆ. ಇವರ ಬ್ಯಾಟಿಂಗ್ ಶೈಲಿಗೆಯೇ ಅದೆಷ್ಟೋ ಮಂದಿ ಫಿದಾ ಆಗಿ ಅಭಿಮಾನಿಗಳಾಗಿದ್ದಾರೆ. ಆದರೆ ಮಾಜಿ ನಾಯಕ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡುವುದನ್ನು ಎಂದಾದರೂ ಕಂಡಿದ್ದೀರಾ?

ಇದನ್ನೂ ಓದಿ:  ʼಮಾಡಾಳ್‌ʼ ಮಾಯ, ಕೋಟಿ ಕೋಟಿ ಹಣಕ್ಕಿಲ್ಲ ಸ್ಪಷ್ಟನೆ..! ಕೋರ್ಟ್‌ ಜಾಮೀನು ಕೊಡುತ್ತಾ..?

ಕೊಹ್ಲಿ ಅವರ ನೃತ್ಯದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹಲವು ಬಾರಿ ವೈರಲ್ ಆಗಿವೆ. ಅನೇಕ ಸಂದರ್ಶನಗಳಲ್ಲಿ, ವಿರಾಟ್ ಕೊಹ್ಲಿ ಪಂಜಾಬಿ ಮ್ಯೂಸಿಕ್’ಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಆದರೆ ಇದೇ ಡ್ಯಾನ್ಸ್’ನಿಂದಾಗಿ ವಿರಾಟ್ ಕೊಹ್ಲಿ ಒಮ್ಮೆ ಪೆಟ್ಟು ತಿಂದಿದ್ದಾರಂತೆ. ಈ ಬಗ್ಗೆ ನಿಮಗೆ ತಿಳಿದಿದೆಯೇ?

ಸ್ಟಾರ್ ಫುಟ್‌ಬಾಲ್ ಆಟಗಾರ ಸುನಿಲ್ ಚೇತ್ರಿಯೊಂದಿಗಿನ ಇನ್‌ಸ್ಟಾಗ್ರಾಮ್ ಚಾಟ್ ಸಮಯದಲ್ಲಿ, ವಿರಾಟ್ ಕೊಹ್ಲಿ  ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

“ಜನರು ಮದುವೆಗಳಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಾರೆ. ನನಗೆ ಅಂತಹ ಡ್ಯಾನ್ಸ್ ನೋಡಿವುದೆಂದರೆ ಬಹಳ ಇಷ್ಟ. ಈ ಸಂದರ್ಭದಲ್ಲಿ ಹಣವನ್ನು ಕೂಡ ಎಸೆಯುತ್ತಿರುತ್ತಾರೆ. ಒಂದು ಬಾರಿ ನನಗೆ 50 ರೂಪಾಯಿ ಕೊಟ್ಟ ನನ್ನ ತಾಯಿ, ಕೆಲವು ಸರಕುಗಳನ್ನು ತರಲು ಮಾರುಕಟ್ಟೆಗೆ ಕಳುಹಿಸಿದರು. ಮನೆಯಿಂದ ಹೊರಬರುತ್ತಿದ್ದಂತೆ, ಮದುವೆಯ ಮೆರವಣಿಗೆಯ ಭರ್ಜರಿ ಡ್ಯಾನ್ಸ್ ಕಂಡು ಆ 50 ರೂ.,ನ್ನು ತುಂಡು ತುಂಡು ಮಾಡಿ ಹರಿದು ಹಾಕಿ ಡ್ಯಾನ್ಸ್ ಮಾಡಲು ಪ್ರಾರಂಭಿಸಿದೆ” ಎಂದರು.

ಇದನ್ನೂ ಓದಿ:  ಟೆಸ್ಟ್ ಸರಣಿ ಮಧ್ಯೆ ಟಿ-20ಗೆ ಹೊಸ ನಾಯಕನ ಘೋಷಣೆ: ಈ ಆಟಗಾರನಿಗೆ ಇನ್ಮುಂದೆ ಜವಾಬ್ದಾರಿ

“ಆ ಸಮಯದಲ್ಲಿ 50 ರೂಪಾಯಿ ತುಂಬಾ ದೊಡ್ಡ ನೋಟು. ಡ್ಯಾನ್ಸ್ ಮುಗಿದ ಬಳಿಕ ನನಗೆ ಅರಿವಾಯಿತು, ಸರಕು ತರಲು ದುಡ್ಡಿಲ್ಲ ಎಂದು. ಮನೆಗೆ ಹೋಗಿ ಅಮ್ಮನಿಗೆ ಏನು ಹೇಳಲಿ ಎಂದು ಭಯದಲ್ಲೇ ಹೋದೆ. ವಿಚಾರ ತಿಳಿಸಿದೆ. ಅಷ್ಟರಲ್ಲಿ ಕೋಪಗೊಂಡ ಆಕೆ ನನಗೆ ತುಂಬಾ ಪೆಟ್ಟುಕೊಟ್ಟಳು” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News