ಬೆಂಗಳೂರು : ಎಂತೆಂತಾ ಕಾರಣಕ್ಕೆ ಕೊಲೆಯಾಗುತ್ತವೆ ಎಂಬುದನ್ನು ನೀವೆಲ್ಲಾ ನೋಡಿರುತ್ತೀರಾ. ಆದರೆ ಗಂಡಸರ ನಡುವೆ ನಡೆಯುತ್ತಿದ್ದ ಸೆಕ್ಸ್ ನಡುವೆ ಹೆಣ್ಣೊಬ್ಬಳು ಬಂದಿದ್ದಕ್ಕೆ ಕೊಲೆ ನಡೆದಿರುವ ಸತ್ಯ ಬಯಲಾಗಿದೆ. ಚಂದ್ರಲೇಔಟ್ನಲ್ಲಿ ನಡೆದಿದ್ದ ಉದ್ಯಮಿ ಲಿಯಾಕತ್ ಅಲಿಖಾನ್ ಕೊಲೆಗೆ ಹೋಮೋ ಸೆಕ್ಸ್ ಕಾರಣ ಎಂಬ ಅಂಶ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಕಳೆದ ಎರಡು ವರ್ಷಗಳಿಂದ ಲಿಯಾಕತ್ ಮತ್ತು ಇಲಿಯಾಸ್ ಹೋಮೊ ಸೆಕ್ಸ್ ಸಂಬಂಧದಲ್ಲಿದ್ರು. ಕೊಲೆಯಾದ ಎರಡು ದಿನಗಳ ಹಿಂದಷ್ಟೆ ಯುವತಿಯೊಬ್ಬಳ ಜೊತೆ ಲಿಯಾಕತ್ ಎರಡನೇ ಮದುವೆಯಾಗಿದ್ದ. ಇದಕ್ಕೂ ಮೊದಲು ಲಿಯಾಕತ್ ಇಲಿಯಾಸ್ಗೆ ನಡೆದಿದ್ದ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಸಿದ್ದ. ಹೋಮೋ ಸೆಕ್ಸ್ ಬಗ್ಗೆ ಮನೆಯವರಿಗೆ ಗೊತ್ತಾದ್ರೆ ಏನೂ ಅಂತಾ ಇಲಿಯಾಸ್ ಚಿಂತೆಯಲ್ಲಿದ್ದ. ಆದ್ರೆ ಲಿಯಾಕತ್ ಮಾತ್ರ ಎರಡನೇ ಮದುವೆ ಆಗಿದ್ದ.
ಇದನ್ನೂ ಓದಿ: Madal Bribe Case : ʼಮಾಡಾಳ್ʼ ಮಾಯ, ಕೋಟಿ ಕೋಟಿ ಹಣಕ್ಕಿಲ್ಲ ಸ್ಪಷ್ಟನೆ..! ಕೋರ್ಟ್ ಜಾಮೀನು ಕೊಡುತ್ತಾ..?
ಮಾನಸಿಕವಾಗಿ ಪತಿ ಪತ್ನಿಯಂತಿದ್ದ ಇಲಿಯಾಸ್, ಲಿಯಾಕತ್ ನಡುವೆ ಬಿರುಕು ಮೂಡಲು ಇದೇ ಮೂಲ ಕಾರಣವಾಗಿತ್ತು. ಲಿಯಾಕತ್ಗೆ ಮದುವೆ ಬೇಡ ಅಂತ ಇಲಿಯಾಸ್ ಹೇಳಿದರೂ ಸಹ ಇಲಿಯಾಸ್ ಮಾತು ಕೇಳದೇ ಲಿಯಾಕತ್ ಮದುವೆಯಾಗಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಇಲಿಯಾಸ್ ಮದುವೆಯಾದ ಎರಡೇ ದಿನಕ್ಕೆ ಲಿಯಾಕತ್ನನ್ನು ತನ್ನದೆ ಮನೆಯಲ್ಲಿ ಹೋಮೋಸೆಕ್ಸ್ ಗೆ ಆಹ್ವಾನಿಸಿದ್ದ.
ಕೊಲೆಯಾಗುವ ಸಮಯದಲ್ಲೂ ಇಬ್ಬರೂ ಹೋಮೋ ಸೆಕ್ಸ್ ನಡೆಸಿದ್ದರು. ಈ ವೇಳೆ ನನ್ನ ಭವಿಷ್ಯವೇನೂ ಎಂದು ಇಲಿಯಾಸ್ ಲಿಯಾಕತ್ ಬಳಿ ಗಲಾಟೆ ಶುರುಮಾಡಿದ್ದ. ಈ ಗಲಾಟೆ ವಿಕೋಪಕ್ಕೆ ತಿರುಗಿ ನನಗೆ ಮೋಸ ಮಾಡ್ತೀಯಾ ಎಂದು ಸುತ್ತಿಗೆಯಿಂದ ಲಿಯಾಕತ್ ತಲೆಗೆ ಹೊಡೆದು ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿ ಇಲಿಯಾಸ್ ಎಸ್ಕೆಪ್ ಆಗಿದ್ದ. ಪೊಲೀಸರು ಬಂಧಿಸುತ್ತಾರೆ ಎಂ ಭೀತಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ ಇಲಿಯಾಸ್ನನ್ನು ಇಂದು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.