ಜುಲೈನಲ್ಲಿ ಈ ರಾಶಿಯವರ ಮೇಲೆ ಕೃಪೆ ತೋರಲಿದ್ದಾಳೆ ಮಹಾಲಕ್ಷ್ಮೀ
ಜುಲೈನಲ್ಲಿ ಬುಧ, ಶುಕ್ರ, ಸೂರ್ಯ ಮತ್ತು ಮಂಗಳನ ರಾಶಿ ಪರಿವರ್ತನೆಯಾಗಲಿದೆ. ಈ ರಾಶಿ ಪರಿವರ್ತನೆ ಅನೇಕ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಗ್ರಹಗಳ ರಾಶಿ ಪರಿವರ್ತನೆಯಿಂದ ಕೆಲವು ರಾಶಿಗಳ ಜನರ ಮೇಲೆ ಮಹಾಲಕ್ಷ್ಮೀಯ ಕೃಪೆ ಹೆಚ್ಚಾಗಲಿದೆ.
ನವದೆಹಲಿ : ಜುಲೈ ತಿಂಗಳಲ್ಲಿ, ಅನೇಕ ರಾಶಿ ಚಿಹ್ನೆಗಳ (Zodiac sign) ಅದೃಷ್ಟದ ಬಾಗಿಲು ತೆರೆಯಲಿವೆ. ಈ ತಿಂಗಳಲ್ಲಿ, ಮಹಾಲಕ್ಷ್ಮಿ ಕೆಲವು ವಿಶೇಷ ರಾಶಿ ಚಿಹ್ನೆಗಳ ಮೇಲೆ ತನ್ನ ಅನುಗ್ರಹ ಬೀರಲಿದ್ದಾಳೆ. ಈ ರಾಶಿಯ ಜನರಿಗೆ ದಿಢೀರ್ ಧನಪ್ರಾಪ್ತಿಯಾಗುವ ಸಾಧ್ಯತೆಗಳಿವೆ.
ವಾಸ್ತವವಾಗಿ, ಜುಲೈನಲ್ಲಿ ಬುಧ, ಶುಕ್ರ, ಸೂರ್ಯ ಮತ್ತು ಮಂಗಳನ ರಾಶಿ (Planet trasist) ಪರಿವರ್ತನೆಯಾಗಲಿದೆ. ಈ ರಾಶಿ ಪರಿವರ್ತನೆ ಅನೇಕ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಗ್ರಹಗಳ ರಾಶಿ ಪರಿವರ್ತನೆಯಿಂದ ಕೆಲವು ರಾಶಿಗಳ ಜನರ ಮೇಲೆ ಮಹಾಲಕ್ಷ್ಮೀಯ (Godess lakshmi) ಕೃಪೆ ಹೆಚ್ಚಾಗಲಿದೆ.
ಇದನ್ನೂ ಓದಿ : Vastu Tips For Money: ಹಣ ಪ್ರಾಪ್ತಿಯಾಗಬೇಕೆ? ಹಾಗಿದ್ದರೆ ಈ ಮೂರು ವಸ್ತುಗಳು ಮನೆಯಲ್ಲಿರಲಿ
ಮಿಥುನ ರಾಶಿ :
ಈ ತಿಂಗಳಲ್ಲಿ, ಮಿಥುನ ರಾಶಿಯ ಜನರು ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ನೀವು ಉದ್ಯೋಗದಲ್ಲಿದ್ದರೆ ಪ್ರಗತಿಯ ಸಾಧ್ಯತೆಗಳಿವೆ. ಅಥವಾ ಉದ್ಯೋಗಗಳನ್ನು ಬದಲಾಯಿಸಬಹುದು. ವ್ಯಾಪಾರಸ್ಥರಾಗಿದ್ದರೆ, ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭವಾಗಲಿದೆ. ಈ ಅವಧಿಯಲ್ಲಿ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ.
ತುಲಾ ರಾಶಿ :
ಈ ಸಮಯದಲ್ಲಿ, ಲಕ್ಷ್ಮಿಯ ವಿಶೇಷ (Godess lakshmi) ಅನುಗ್ರಹವು ತುಲಾ ರಾಶಿಯ ಜನರ ಮೇಲೆ ಬೀಳಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ವ್ಯಾಪಾರಸ್ಥರಿಗೆ ಉತ್ತಮ ಲಾಭವಾಗಲಿದೆ.
ಇದನ್ನೂ ಓದಿ : ಸಂಕಷ್ಟ ಚತುರ್ಥಿ ದಿನ ಮಾಡಲೇ ಬೇಡಿ ಈ ತಪ್ಪು, ಸಂಭವಿಸಬಹುದು ಭಾರೀ ನಷ್ಟ
ಕುಂಭ ರಾಶಿ :
ಕುಂಭ ರಾಶಿಯ ಜನರಿಗೆ ಕೂಡಾ ಎಲ್ಲಾ ಕಡೆಗಳಿಂದಲೂ ಹಣ ಹರಿಸು ಬರಲಿದೆ. ಆದಾಯದ (Income) ಮೂಲ ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ. ಯಾವ ಹೊಸ ಕೆಲಸವನ್ನು ಪ್ರಾರಂಭಿಸಿದರೂ, ಸರಿಯಾದ ಸಮಯಕ್ಕೆ ಮಾಡಿ ಮುಗಿಸಬಹುದು. ಯಶಸ್ಸು ಸಿಗುತ್ತದೆ.
ಮೀನ ರಾಶಿ :
ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತೀರಿ. ಲಕ್ಷ್ಮಿಯ ವಿಶೇಷ ಅನುಗ್ರಹವು ನಿಮ್ಮ ಮೇಲೆ ಇರಲಿದೆ. ಆರ್ಥಿಕವಾಗಿ ಲಾಭವಾಗಲಿದೆ. ವ್ಯಾಪಾರದಲ್ಲಿ ಬಾರೀ ಹಣ ಗಳಿಕೆಯಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.