Braless Benefits : ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಮತ್ತು ಸ್ತ್ರೀವಾದದಲ್ಲಿ ನೋ-ಬ್ರಾ ನೋಟವು ದೊಡ್ಡ ಪ್ರವೃತ್ತಿಯಾಗಿದೆ, ಆದರೆ ಬ್ರಾ ಧರಿಸುವುದು ಉತ್ತಮವೇ? ಇದರ ಹಿಂದೆ ಏನಾದ್ರೂ ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳು ಇದೆಯಾ ಎಂಬುವುದನ್ನು ನೋಡುವುದಾದರೆ, ಬ್ರಾ ಧರಿಸುವುದಕ್ಕಿಂತ ಬ್ರಾಲೆಸ್‌ ಆಗಿರುವುದು ಮಹಿಳೆಯ ಆರೋಗ್ಯ ದೃಷ್ಟಿಯಿಂದ ಒಳಿತು ಆದ್ರೆ, ಅದು ಅವರವರ ಕಂಫರ್ಟ್‌ಗೆ ಅನುಸಾರವಾಗಿ ಎಂದು ಪರಿಣಿತರು ಹೇಳುತ್ತಾರೆ.


COMMERCIAL BREAK
SCROLL TO CONTINUE READING

ಬ್ರಾ ಧರಿಸದೆ ಉಡುಪುಗಳನ್ನು ಧರಿಸುವುದು ಅವರ ವೈಯಕ್ತಿಕ ಆಯ್ಕೆ. ದಿನಪೂರ್ತಿ ಸುತ್ತಾಟದ ನಂತರ ಮನೆಗೆ ಬರುವ ಮಹಿಳೆಗೆ ತಮ್ಮ ಬ್ರಾ ತೆಗೆದ ಮೇಲೆಯೇ ಅವರಿಗೆ ಮರಳಿ ಉಸಿರು ಬಂದಂತೆ ಅನುಭವ ಆಗುತ್ತದೆ. ಆದರೆ, ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ. ಇಲ್ಲಿ ಮುಖ್ಯವಾದುದು ಸ್ವಾತಂತ್ರ್ಯ. ದೈಹಿಕ ಅಗತ್ಯ ಮತ್ತು ನಿಮ್ಮ ಕಂಫರ್ಟ್ ಮೇಲೆ ಬ್ರಾ ಧರಿಸಿ, ಅದು ಬಿಟ್ಟು ಜನ ಏನಂತಾರೆ ಎನ್ನುವುದರ ಮೇಲೆ ಅಲ್ಲ. ಈ ಸಂಕೋಚ ನಿಮ್ಮ ಎದೆ ಮತ್ತು ಬೆನ್ನಿನ ರಕ್ತ ಪರಿಚಲನೆಗೆ ಅಡ್ಡಿಯಾಗಬಹುದು, ಇದು ಬೆನ್ನು ಸ್ನಾಯುಗಳಿಗೆ ನೋವುಂಟುಮಾಡುತ್ತದೆ.


ಇದನ್ನೂ ಓದಿ: ಮಧುಮೇಹಿಗಳು ಎಳನೀರು ಕುಡಿಯಬಹುದೇ? ದೇಹದ ಮೇಲೆ ಇದರ ಪರಿಣಾಮ ಹೇಗಿದೆ ಗೊತ್ತಾ!


ಅದೆಂತಹ ಅತ್ಯುತ್ತಮವಾಗಿ ಹೊಂದಿಕೊಳ್ಳುವ ಬ್ರಾ ಧರಿಸಿದರೂ ಕೂಡ ಸುತ್ತಾಡಿ ಮನೆಗೆ ಬಂದ ನಂತರ ಮೊದಲು ಅದನ್ನು ತೆಗೆದರೆ ಸಾಕು ಎಂದು ಅನಿಸುತ್ತದೆ, ಅಷ್ಟು ಇರಿಟೆಂಟಿಂಗ್‌ ಆಗಿರುತ್ತದೆ. ಜನರ ಚಿಂತೆ ಬಿಟ್ಟು ಕರ್ಫಟ್‌ ಮತ್ತು ಆರೋಗ್ಯದತ್ತ ಗಮನಹರಿಸುವುದೇ ಆದ್ರೆ ನೀವು ಬ್ರಾಲೆಸ್ ಆಗುವುದೇ ಉತ್ತಮ ಆಯ್ಕೆ. ಇನ್ನು ವರದಿ ಒಂದರ ಪ್ರಕಾರ, ಮಹಿಳೆಯರು ಬ್ರಾ ರಹಿತವಾಗಿ ಹೊರ ಹೋದಾಗ ಅವರಿಗೆ ನಿಜ ಸ್ವಾತಂತ್ರ್ಯ ಅನುಭವಿಸಿದಂತೆ ಭಾಸವಾಗುತ್ತದೆ ಎಂದು ಹೇಳಲಾಗುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.