ನವದೆಹಲಿ: Gold Ring Bring Good Luck - ಪ್ರತಿಯೊಂದು ಲೋಹದ ಗುಣಲಕ್ಷಣಗಳು ಮತ್ತು ಪರಿಣಾಮಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ (Importance Of Gold In Astrology) ಹೇಳಲಾಗಿದೆ. ಲೋಹಗಳ ವಿಶೇಷ ಗುಣಗಳಿಂದಾಗಿ ಗ್ರಹಗಳ ಸ್ಥಿತಿ ಸರಿಯಾಗಿರುತ್ತದೆ. ಇದೆ ಕಾರಣದಿಂದ ಚಿನ್ನ ಧರಿಸುವುದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಜಾತಕದ ಗ್ರಹ ದೋಷಗಳನ್ನು ತೆಗೆದುಹಾಕಲು ಚಿನ್ನ, ಬೆಳ್ಳಿ ಅಥವಾ ಇತರ ಲೋಹಗಳನ್ನು ಹಾಗೂ ರತ್ನಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಆದರೆ, ಹೆಚ್ಚಿನ ರತ್ನಗಳನ್ನು ಚಿನ್ನದ ಜೊತೆಗೆ ಧರಿಸಲಾಗುತ್ತದೆ. ಚಿನ್ನವನ್ನು ಧರಿಸುವುದರಿಂದ ಆಗುವ ಲಾಭಗಳು (Gold Ring Is Best) ಮತ್ತು ಯಾವ ರಾಶಿಯವರು ಚಿನ್ನವನ್ನು ಧರಿಸಬಾರದು ಎಂಬುದನ್ನು ತಿಳಿಯೋಣ ಬನ್ನಿ.

COMMERCIAL BREAK
SCROLL TO CONTINUE READING

ಜ್ಯೋತಿಷ್ಯಶಾಸ್ತ್ರದಲ್ಲಿ ಚಿನ್ನದ ಮಹತ್ವ
ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನ ಗುರುಗ್ರಹಕ್ಕೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಹಾಗೆ ನೋಡಿದರೆ, ಚಿನ್ನದ ಮೇಲೆ ದೇವಗುರು ಬೃಹಸ್ಪತಿಯ ಪ್ರಭಾವ ಇರುತ್ತದೆ. ಹೀಗಿರುವಾಗ ಈ ಲೋಹವನ್ನು ಧರಿಸುವುದರಿಂದ ಜಾತಕದಲ್ಲಿ ಬೃಹಸ್ಪತಿಯ ಸ್ಥಾನ ಬಲಗೊಳ್ಳುತ್ತದೆ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಇದರಿಂದ ಜೀವನದಲ್ಲಿ ಹಣ-ವೈಭವ ಹಾಗೂ ಸುಖ-ಸಮೃದ್ಧಿಯ ಆಗಮನವಾಗುತ್ತದೆ.

ಈ ರಾಶಿಗಳ ಜನರಿಗೆ ಚಿನ್ನ ಲಾಭಕಾರಿ
>> ಮೇಷ ರಾಶಿ:
ಈ ರಾಶಿಯವರಿಗೆ ಚಿನ್ನದ ಉಂಗುರವನ್ನು ಧರಿಸುವುದು ಲಾಭದಾಯಕ ಎಂದು ಹೇಳಲಾಗುತ್ತದೆ. ಇದರಿಂದ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಜೊತೆಗೆ ಸಾಲದಿಂದ ಮುಕ್ತಿ ಸಿಗುತ್ತದೆ.

>> ಸಿಂಹ ರಾಶಿ: ಈ ರಾಶಿಯ ಜನರಿಗೆ ಚಿನ್ನವು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ವಾಸ್ತವದಲ್ಲಿ ಈ ರಾಶಿಯ ಅಧಿಪತಿ ಗ್ರಹ ಸೂರ್ಯ. ಸೂರ್ಯ ಮತ್ತು ಗುರು ಗ್ರಹದ ನಡುವೆ ಸೌಹಾರ್ದ ಸಂಬಂಧವಿದೆ, ಆದ್ದರಿಂದ ಈ ರಾಶಿಯ ವ್ಯಕ್ತಿಯು ಚಿನ್ನವನ್ನು ಧರಿಸಬೇಕು.

>> ಕನ್ಯಾ ರಾಶಿ: ಈ ರಾಶಿಯವರಿಗೂ ಕೂಡ ಚಿನ್ನ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಈ ರಾಶಿಯ ಜನರು ಚಿನ್ನ ಧರಿಸುವ ಮೂಲಕ ಹೆಚ್ಚಿನ ಯಶಸ್ಸನ್ನು ಗಳಿಸುತ್ತಾರೆ. ಅಲ್ಲದೆ, ಆರ್ಥಿಕ ಸ್ಥಿತಿಯೂ ಕೂಡ ಸುಧಾರಣೆಯಾಗುತ್ತದೆ.


ಇದನ್ನೂ ಓದಿ-ನೀವು ಎಳನೀರು ಕುಡಿದು ಗಂಜಿ ಬಿಸಾಡುತ್ತೀರಾ...? ಹಾಗಿದ್ರೆ ಇಲ್ಲೊಮ್ಮೆ ನೋಡಿ

>> ಧನು ರಾಶಿ: ಈ ರಾಶಿಯ ಅಧಿಪತಿ ಗರು ಮತ್ತು ಚಿನ್ನವು ಗುರುಗ್ರಹದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ರಾಶಿಯವರು ಚಿನ್ನವನ್ನು ಧರಿಸುವುದು ಶುಭಕರ. ಅಲ್ಲದೆ, ಅವರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ.


ಇದನ್ನೂ ಓದಿ-Weekly Horoscope : ಉದ್ಯೋಗದಲ್ಲಿ ಬಡ್ತಿ ಜೊತೆಗೆ ಆದಾಯವೂ ಹೆಚ್ಚುತ್ತದೆ : ಹೇಗಿದೆ ನೋಡಿ ನಿಮ್ಮ ವಾರದ ಭವಿಷ್ಯ 

ಯಾರು ಚಿನ್ನವನ್ನು ಧರಿಸಬಾರದು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ, ಮಿಥುನ, ವೃಶ್ಚಿಕ ಮತ್ತು ಕುಂಭ ರಾಶಿಯವರು ಚಿನ್ನವನ್ನು ಧರಿಸಬಾರದು. ಇನ್ನೊಂದೆಡೆ, ತುಲಾ ಮತ್ತು ಮಕರ ರಾಶಿಯ ಜನರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ಆಭರಣಗಳನ್ನು ಧರಿಸಬಾರದು.


ಇದನ್ನೂ ಓದಿ-Auspicious Yoga In Kundali - ಜಾತಕದಲ್ಲಿ ಈ 5 ಯೋಗಗಳಿರುವವರ ದಾಂಪತ್ಯ ಜೀವನಕ್ಕೆ ಸಾಟಿಯೇ ಇರುವುದಿಲ್ಲ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.