ನೀವು ಎಳನೀರು ಕುಡಿದು ಗಂಜಿ ಬಿಸಾಡುತ್ತೀರಾ...? ಹಾಗಿದ್ರೆ ಇಲ್ಲೊಮ್ಮೆ ನೋಡಿ

Written by - PRATIBHA ANAND | Edited by - Manjunath N | Last Updated : Mar 20, 2022, 02:27 PM IST
  • ಎಳನೀರಿನ ಗಂಜಿಯಲ್ಲಿರುವ ಅಧಿಕ ಕೊಬ್ಬಿನಂಶ ಅಂದ್ರೆ ಒಳ್ಳೆಯ ಸ್ಯಾಚುರೇಟೆಡ್ ಕೊಬ್ಬು.
  • ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ನೀವು ಎಳನೀರು ಕುಡಿದು ಗಂಜಿ ಬಿಸಾಡುತ್ತೀರಾ...? ಹಾಗಿದ್ರೆ ಇಲ್ಲೊಮ್ಮೆ ನೋಡಿ title=

ನಮ್ಮಲ್ಲಿ ಎಷ್ಟೋ ಜನಕ್ಕೆ ಹಣ್ಣಿನ ಅಥವಾ ತರಕಾರಿಯ ಪೋಷಕಾಂಶಗಳ ಬಗ್ಗೆ ಮಾತ್ರ ತಿಳಿದಿರುತ್ತದೆ. ಆದ್ರೆ ಪ್ರಕೃತಿಯಲ್ಲಿ ಸಿಗುವ ಪ್ರತಿಯೊಂದು ಸಂಪನ್ಮೂಲಗಳಲ್ಲಿಯೂ ಅದರದ್ದೇ ಆದ ವೈಶಿಷ್ಟ್ಯಗಳಿರುತ್ತವೆ.ಹೀಗಿರುವಾಗ ಹಣ್ಣು ಮತ್ತು ತರಕಾರಿಯ ಸಿಪ್ಪೆಗಳಲ್ಲಿಯೂ ಹೇರಳವಾದ ಪೋಷಕಾಂಶಗಳು, ಖನಿಜಾಂಶಗಳಿರುವ ಬಗ್ಗೆ ಎಷ್ಟೋ ಮಂದಿಗೆ ಅರಿವಿರೋದಿಲ್ಲ. 

ಇದನ್ನೂ ಓದಿ: ಬಿಳಿ ಕೂದಲು ಕಂಡ ಕೂಡಲೇ ಕೀಳುವ ಬದಲು ಈ ಟ್ರಿಕ್ ಬಳಸಿ, ಕೂದಲು ಬಿಳಿಯಾಗುವುದನ್ನು ತಪ್ಪಿಸಬಹುದು

ಎಳನೀರು ಆರೋಗ್ಯಕ್ಕೆ ಪನ್ನೀರು ಅಂತಲೇ ಹೆಸರುವಾಸಿ. ಈ ಎಳನೀರಿನ (Coconut Water ) ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಎಳನೀರು ಕುಡಿದು ಅನೇಕರು ಗಂಜಿಯ ಕಡೆಗೆ ತಿರುಗಿಯೂ ನೋಡೋದಿಲ್ಲ.ಅಂತಹವರು ಇನ್ಮುಂದೆ ಯಾವುದೇ ಕಾರಣಕ್ಕೂ ಗಂಜಿಯನ್ನ ಬಿಸಾಡಬೇಡಿ. ಯಾಕಂದ್ರೆ ಎಳನೀರಿನ ಗಂಜಿಯಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವ ಅನೇಕ ಪೋಶಕಾಂಶಗಳಿವೆ. ಗಂಜಿಯಲ್ಲಿ ಅಮೈನೋ ಆಮ್ಲ, ಸ್ಯಾಚುರೇಟೆಡ್ ಕೊಬ್ಬಿನಂಶ, 3 ಗ್ರಾಂನಷ್ಟು ಪ್ರೋಟೀನ್, ಹೆಚ್ಚಿನ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ರೋಗನಿರೋಧಕ ಹೀಗೆ ಅನೇಕ ಪೋಷಕಾಂಶಗಳ ಆಗರವಾಗಿದೆ ಎಳನೀರಿನ ಗಂಜಿ. ಇನ್ನು ಎಳನೀರಿನ ಗಂಜಿಯನ್ನ ಸೇವಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ. 

ಇದನ್ನೂ ಓದಿ: High BP:ಬಿಪಿ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಈ ವ್ಯಾಯಾಮ ಮಾಡಬಾರದು!

ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಎಳನೀರಿನ ಗಂಜಿಯಲ್ಲಿರುವ ಅಧಿಕ ಕೊಬ್ಬಿನಂಶ ಅಂದ್ರೆ ಒಳ್ಳೆಯ ಸ್ಯಾಚುರೇಟೆಡ್ ಕೊಬ್ಬು.ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.ಅಂತೆಯೇ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್‌ ಮಟ್ಟವನ್ನ ಹೆಚ್ಚಿಸುತ್ತದೆ.ಜೊತೆಗೆ ಹೃದಯದ ಆರೋಗ್ಯವನ್ನ ಬೆಂಬಲಿಸುವ ಸ್ಯಾಚುರೇಟೆಡ್ ಕೊಬ್ಬಿನಂಶದಿಂದ ಉತ್ತಮವಾಗಿಡಲು ಸಹಕರಿಸುತ್ತದೆ. 
  
ತೂಕ ಇಳಿಸಲು ಸಹಕಾರಿ: ಯಾರೆಲ್ಲಾ ತೂಕ ಇಳಿಸಲು ಬಯಸುತ್ತೀದ್ದಿರಾ ಅವರೆಲ್ಲ ಪ್ರತಿದಿನ ನಿಯಮಿತವಾಗಿ ಎಳನೀರಿನ ಗಂಜಿ ತಿನ್ನೋದ್ರಿಂದ ತೂಕ ಇಳಿಸಬಹುದು.ಇದರಲ್ಲಿರುವ ಶಕ್ತಿ ಮತ್ತು ಇದಕ್ಕೆ ಹಸಿವನ್ನ ತಡೆಯುವ ಗುಣವಿರೋದ್ರಿಂದ ಸುಲಭವಾಗಿ ಪದೇ ಪದೆ ತಿನ್ನುವ ಅಭ್ಯಾಸದಿಂದ ಹೊರಬರಬಹುದು. ಇದರಲ್ಲಿರುವ ಪ್ರೋಟೀನ್ ದೇಹದ ತೂಕ ಇಳಿಸುವಿಕೆಗೆ ಸಹಕಾರಿಯಾಗಿದೆ. 

ಇದನ್ನೂ ಓದಿ: Skin care: ಬೇಸಿಗೆಯಲ್ಲಿ ಉಂಟಾಗುವ ಒಣ ತ್ವಚೆಗೆ ಶಾಶ್ವತ ಪರಿಹಾರ ಬೇಕಾ..?

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಎಳನೀರಿನ ಗಂಜಿಯಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕ ಶಕ್ತಿಯಿದೆ. ದೇಹಕ್ಕೆ ಅನೇಕ ಬಗೆಯ ಶಕ್ತಿ ಹಾಗೂ ಪೋಷಣೆಯನ್ನು ನೀಡಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಾಯ ಮಾಡಿ, ಸೋಂಕು ರೋಗಗಳಿಂದ ದೂರವಿಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News