Auspicious Yoga In Kundali - ಜಾತಕದಲ್ಲಿ ಈ 5 ಯೋಗಗಳಿರುವವರ ದಾಂಪತ್ಯ ಜೀವನಕ್ಕೆ ಸಾಟಿಯೇ ಇರುವುದಿಲ್ಲ

Auspicious Yoga In Kundali - ಹಿಂದೂ ಧರ್ಮದಲ್ಲಿ (Hindu Religion) ಮದುವೆಯನ್ನು (Marriage)  ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಮದುವೆಯ ಬಂಧ ಪ್ರತಿಯೊಬ್ಬ ಮನುಷ್ಯನ ಪಾಲಿಗೆ ತುಂಬಾ ಮಹತ್ವದ್ದಾಗಿರುತ್ತದೆ. 

Written by - Nitin Tabib | Last Updated : Mar 20, 2022, 07:20 PM IST
  • ಜಾತಕದಲ್ಲಿನ ಈ 5 ಯೋಗಗಳು ಸುಖಕರ ದಾಂಪತ್ಯ ಜೀವನಕ್ಕೆ ಕಾರಣ,
  • ಜಾತಕದಲ್ಲಿದ್ದರೆ, ಆ ವ್ಯಕ್ತಿಯ ದಾಂಪತ್ಯ ಜೀವನಕ್ಕೆ ಸಾಟಿಯೇ ಇಲ್ಲ
  • ಆ ಐದು ಯೋಗಗಳು ಯಾವುವು ತಿಳಿದುಕೊಳ್ಳೋಣ ಬನ್ನಿ
Auspicious Yoga In Kundali - ಜಾತಕದಲ್ಲಿ ಈ 5 ಯೋಗಗಳಿರುವವರ ದಾಂಪತ್ಯ ಜೀವನಕ್ಕೆ ಸಾಟಿಯೇ ಇರುವುದಿಲ್ಲ title=
Auspicious Yoga In Kundali (File Photo)

Auspicious Yoga In Kundali - ಹಿಂದೂ ಧರ್ಮದಲ್ಲಿ (Hindu Religion) ಮದುವೆಯನ್ನು (Marriage)  ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಮದುವೆಯ ಬಂಧ ಪ್ರತಿಯೊಬ್ಬ ಮನುಷ್ಯನ ಪಾಲಿಗೆ ತುಂಬಾ ಮಹತ್ವದ್ದಾಗಿರುತ್ತದೆ. ಈ ಸಂಬಂಧವು ವ್ಯಕ್ತಿಯೋರ್ವನನ್ನು ಏಳು ಜನ್ಮಗಳವರೆಗೆ ಕಟ್ಟಿಹಾಕುತ್ತದೆ ಎಂದು ನಂಬಲಾಗಿದೆ. ಮದುವೆಗೂ ಮುನ್ನ ವಧು-ವರರ ಜಾತಕ (Kundali) ಹೊಂದಬೇಕು (Kundali Matching) ಎನ್ನಲು ಇದೇ ಕಾರಣ. ಇದರಿಂದ ವೈವಾಹಿಕ ಜೀವನದಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ. ದಾಂಪತ್ಯ ಜೀವನ ಅದ್ಭುತವಾಗಿರಬೇಕು ಎಂದರೆ ಜಾತಕದಲ್ಲಿ ಈ 5 ಮಂಗಳಕರ ಯೋಗಗಳಿರಬೇಕು (Auspicious Yoga In Kundali).

ಯೋಗ 1: ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಯಾರ ಜಾತಕದಲ್ಲಿ ಎರಡನೇ ಮತ್ತು ನಾಲ್ಕನೇ ಭಾವ ಬಲವಾಗಿರುತ್ತದೆಯೋ,  ಅವರ ವೈವಾಹಿಕ ಜೀವನ ಯಾವಾಗಲೂ ಅದ್ಭುತವಾಗಿರುತ್ತದೆ. ವಾಸ್ತವದಲ್ಲಿ, ಎರಡನೇ ಮನೆ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದಾಗಿದ್ದು, ನಾಲ್ಕನೇ ಮನೆಯು ವೈವಾಹಿಕ ಜೀವನದ ಹೊಸ ಸಂಬಂಧವನ್ನು ತೋರಿಸುತ್ತದೆ.

ಯೋಗ 2: ಜಾತಕದಲ್ಲಿ ಶುಕ್ರ ಗ್ರಹದ ಜೊತೆಗೆ ಗುರುವು ಶುಭ ಸ್ಥಾನದಲ್ಲಿದ್ದು 5, 9, 11 ನೇ ಭಾವದಲ್ಲಿದ್ದರೆ, ಅಂತವರ ದಾಂಪತ್ಯ ಜೀವನವು ಆಹ್ಲಾದಕರವಾಗಿರುತ್ತದೆ. ಅಲ್ಲದೆ, ಇಂತಹ ಪರಿಸ್ಥಿತಿಯಲ್ಲಿ, ಮದುವೆಯ ನಂತರ ಪತಿ ಮತ್ತು ಪತ್ನಿಯ ಸಂಬಂಧ ಆಹ್ಲಾದದಿಂದ ಕೂಡಿರುತ್ತದೆ.

ಯೋಗ 3: ಒಬ್ಬ ವ್ಯಕ್ತಿಯ ಜಾತಕದಲ್ಲಿ ಗುರು 7ನೇ ಭಾವದಲ್ಲಿದ್ದು, 7ನೇ ಮನೆಯ ಅಧಿಪತಿ ಶುಭ ಸ್ಥಾನದಲ್ಲಿದ್ದರೆ ದಾಂಪತ್ಯ ಜೀವನವು ಅನುಕೂಲಕರವಾಗಿರುತ್ತದೆ. ಇದರ ಹೊರತಾಗಿ, ಜಾತಕದಲ್ಲಿ ಅನುಕೂಲಕರ ಸ್ಥಿತಿಯು ಸೃಷ್ಟಿಯಾಗುತ್ತಿದ್ದರೂ ಕೂಡ ವೈವಾಹಿಕ ಜೀವನವು ಸಂತೋಷದಿಂದ ಇರುತ್ತದೆ.

ಇದನ್ನೂ ಓದಿ-Weekly Horoscope : ಉದ್ಯೋಗದಲ್ಲಿ ಬಡ್ತಿ ಜೊತೆಗೆ ಆದಾಯವೂ ಹೆಚ್ಚುತ್ತದೆ : ಹೇಗಿದೆ ನೋಡಿ ನಿಮ್ಮ ವಾರದ ಭವಿಷ್ಯ 

ಯೋಗ 4: ವ್ಯಕ್ತಿಯ ಜಾತಕದಲ್ಲಿ ಶುಕ್ರನು 5 ನೇ ಭಾವದಲ್ಲಿ ಅಥವಾ ಯಾವುದೇ ಉತ್ಕೃಷ್ಟ ಮನೆಯಲ್ಲಿ ಸ್ಥಿತನಾಗಿದ್ದರೆ, ವ್ಯಕ್ತಿಯು ವೈವಾಹಿಕ ಜೀವನದಲ್ಲಿ ಅಪಾರ ಸಂತೋಷವನ್ನು ಪಡೆಯುತ್ತಾನೆ. ಆದರೆ, ಈ ಸ್ಥಾನದಲ್ಲಿ 7ನೇ ಮನೆಯ ಅಧಿಪತಿಯೂ ಸಹ ಪ್ರಬಲ ಸ್ಥಾನದಲ್ಲಿರಬೇಕು.

ಇದನ್ನೂ ಓದಿ-ನೀವು ಎಳನೀರು ಕುಡಿದು ಗಂಜಿ ಬಿಸಾಡುತ್ತೀರಾ...? ಹಾಗಿದ್ರೆ ಇಲ್ಲೊಮ್ಮೆ ನೋಡಿ

ಯೋಗ 5: ವ್ಯಕ್ತಿಯ ಜಾತಕದ 7ನೇ ಮನೆ ಬಲವಾಗಿದ್ದರೆ. ಅಲ್ಲದೆ, ಶುಭ ಕಾಕತಾಳೀಯದ ಮಹಾದೆಸೆ ಇದ್ದರೆ, ಅದು ಉತ್ತಮ ದಾಂಪತ್ಯ ಜೀವನವನ್ನು ತೋರಿಸುತ್ತದೆ.

ಇದನ್ನೂ ಓದಿ-High BP:ಬಿಪಿ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಈ ವ್ಯಾಯಾಮ ಮಾಡಬಾರದು!

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News