Astrology - ಆಧ್ಯಾತ್ಮ ಹಾಗೂ ಜೋತಿಷ್ಯದ ದೃಷ್ಟಿಯಿಂದ ನಮ್ಮ ಜೀವನ ಸಂಪೂರ್ಣ ಕರ್ಮ ಪ್ರಧಾನವಾಗಿದೆ. ನಮ್ಮ ಶಾಸ್ತ್ರಗಳಲ್ಲಿಯೂ ಕೂಡ ಕರ್ಮ ಬಂಧನದ ಕುರಿತು ವಿವರಿಸಲಾಗಿದೆ. ವಿಶ್ವದಲ್ಲಿ ಯಾವುದೇ ಪದಾರ್ಥ ನಷ್ಟವಾಗುವುದಿಲ್ಲ, ಅವು ಕೇವಲ ತನ್ನ ರೂಪವನ್ನು ಮಾತ್ರ ಬದಲಾಯಿಸುತ್ತವೆ. ನಾವು ಮಾಡುವ ಕರ್ಮಗಳ ಆಧಾರದ ಮೇಲೆ ನಮಗೆ ಫಲ ಪ್ರಾಪ್ತಿಯಾಗುತ್ತದೆ. ನಾವು ಮೂಲಕ್ಕಿಂತ ಹೆಚ್ಚಾಗಿ ಜೀವಗಳೊಂದಿಗೆ ನೇರ ಸಂಬಂಧವನ್ನು ಸ್ಥಾಪಿಸಿದರೆ, ಗ್ರಹಗಳನ್ನು ಬಹಳ ಬೇಗ ಪ್ರಸನ್ನಗೊಳಿಸಬಹುದು. ಮಾತೃ ದೇವೋ  ಭವ, ಪಿತೃ ದೇವೋ ಭವ, ಗುರು ದೇವೋ ಭವ, ಅತಿಥಿ ದೇವೋ ಭವ ಎಂದು ವೇದಗಳಲ್ಲಿಯೂ ಕೂಡ ಹೇಳಲಾಗಿದೆ.

COMMERCIAL BREAK
SCROLL TO CONTINUE READING

ಅಭಿವಾದನ ಸೀಲಸ್ಯ ನಿತ್ಯ ಬುಧ್ಹೋಪಸೇವಿನಃ 
ಚತ್ವಾರಿ ತಸ್ಯ ವರ್ಧಂತೆ, ಆಯುರ್ವಿದ್ಯಾ ಯಶೋ ಬಲಂ

ಅರ್ಥಾತ್, ಕೇವಲ ಪ್ರಣಾಮ ಅಥವಾ ನಮಸ್ಕರಿಸುವುದರಿಂದ ಸದಾಚಾರದ  ಪಾಲನೆಯ ಜೊತೆಗೆ ನಿತ್ಯ ವೇದಗಳ ಸೇವೆ ಮಾಡುವುದರಿಂದ ಆಯಸ್ಸು, ವಿದ್ಯೆ, ಯಶಸ್ಸು ಹಾಗೂ ಬಲ ಪ್ರಾಪ್ತಿಯಾಗುತ್ತದೆ. ಜೀವಿಗಳ ಬಗ್ಗೆ  ನಾವು ಒಂದು ವೇಳೆ ಪರೋಪಕಾರದ ಭಾವನೆಯನ್ನು ಇಟ್ಟುಕೊಂಡರೆ, ನಮ್ಮ ಜಾತಕದಲ್ಲಿನ ಕೆಟ್ಟಗ್ರಹಗಳ ಅಶುಭ ಪರಿಣಾಮಗಳನ್ನು ಕಡಿಮೆ  ಮಾಡಿಕೊಳ್ಳಬಹುದು. ನವಗ್ರಹಗಳ ಈ ಚರಾಚರಿ ಜಗತ್ತಿನಲ್ಲಿ ಪದಾರ್ಥ, ವನಸ್ಪತಿ, ತತ್ವ, ಪಶು-ಪಕ್ಷಿ ಇತ್ಯಾದಿಗಳ ವಾಸವಿದೆ. ಇದೇ ರೀತಿ ಋಷಿಗಳು ಕುಟುಂಬ ಸದಸ್ಯರು ಹಾಗೂ ಸುತ್ತಮುತ್ತಲಿನ ಜನರೂ ಕೂಡ ಗ್ರಹಗಳನ್ನು ಪ್ರತಿನಿಧಿಸುತ್ತಾರೆ ಎಂದು ಋಷಿಮುನಿಗಳು ಹೇಳಿದ್ದಾರೆ.

ಇದೇ ಕಾರಣದಿಂದ ಸೂರ್ಯನಿಗೆ ಪಿತೃಕಾರಕ ಎಂದು ಹೇಳಲಾಗಿದೆ
ತಂದೆ-ತಾಯಿಯರ ಸಮಾಗಮದಿಂದ ಈ ಭೂಮಿಯ ಮೇಲೆ ಯಾವುದೇ ಒಂದು ಜಾತಕದ ಜನ್ಮವಾಗುತ್ತದೆ. ಇದೇ ಕಾರಣದಿಂದ ಸೂರ್ಯನನ್ನು  ಆತ್ಮದ ಜೊತೆಗೆ ತಂದೆಯ ಪ್ರತಿನಿಧಿ ಎಂದೂ ಕೂಡ ಭಾವಿಸಲಾಗುತ್ತದೆ ಹಾಗೂ ಚಂದ್ರನನ್ನು ಮನಸ್ಸಿನ ಜೊತೆಗೆ ತಾಯಿಯ ಪ್ರತಿನಿಧಿ ಎಂದು ಭಾವಿಸಲಾಗುತ್ತದೆ. ಶ್ವಾಸವೇ ಜೀವನವಾಗಿದೆ ಹಾಗೂ ಇದನ್ನು ಸೂರ್ಯ-ಚಂದ್ರರು ದಯಪಾಲಿಸುತ್ತಾರೆ. ಈ ಶ್ವಾಸವನ್ನೇ ಯೋಗದಲ್ಲಿ ಪ್ರಾಣ ಎಂದು ಕರೆಯಲಾಗಿದೆ.

ಪ್ರತಿ ಗ್ರಹಗಳಿಂದ ಶುಭ ಫಲ ಪ್ರಾಪ್ತಿಯ ಉಪಾಯಗಳು ಇಂತಿವೆ
ಇಂದು ಜೋತಿಷ್ಯಶಾಸ್ತ್ರದಲ್ಲಿ ವಿವಿಧ ರೀತಿಯ ಉಪಾಯಗಳು ಪ್ರಚಲಿತದಲ್ಲಿವೆ. ಆದರೆ ಶಾಸ್ತ್ರಗಳಲ್ಲಿ ವರ್ಣಿಸಲಾದ ಹಾಗೂ ವ್ಯಕ್ತಿಯ ಆಚಾರಕ್ಕೆ ಸಂಬಂಧಿಸಿದ ಹಾಗೂ ನಿಕಟ ಸಂಬಂಧಿಗಳಿಗೆ ಸಂಬಂಧಿಸಿದ ಉಪಾಯಗಳು ಸದ್ಯ ಪ್ರಚಲಿತದಲ್ಲಿಲ್ಲ. ಒಂದು ವೇಳೆ ಜಾತಕದಲ್ಲಿ ಸೂರ್ಯನ ಸ್ಥಿತಿ ನೀಚವಾಗಿದ್ದು, ಅಶುಭವಾಗಿದ್ದರೆ, ಕರ್ಮವಿಪಾಕ್ ಸಿದ್ಧಾಂತದ ಪ್ರಕಾರ, ತಂದೆ ಕೋಪಿಸಿಕೊಂಡಿರಬೇಕು ಮತ್ತು ಇದೇ ಕಾರಣದಿಂದ ಜಾತಕ ಹೊಂದಿರುವ ವ್ಯಕ್ತಿ ಸೂರ್ಯನ ಅಶುಭ ಸ್ಥಿತಿಯಲ್ಲಿ ಜನ್ಮಪಡೆಯುತ್ತಾನೆ. ಸೂರ್ಯನ ಈ ಅನಿಷ್ಟ ಪ್ರಭಾವವನ್ನು ಕಡಿಮೆಗೊಳಿಸಲು ವ್ಯಕ್ತಿಯು ತಂದೆಯ ಸೇವೆ ಮಾಡಬೇಕು ಹಾಗೂ ಬೆಳಗ್ಗೆ ಅವರ ಚರಣ ಕಮಲಗಳನ್ನು ಸ್ಪರ್ಶಿಸಬೇಕು. ಇದರ ಜೊತೆಗೆ ಸಂಸಾರದ ಇತರ ಕ್ರಿಯೆಗಳಿಂದ ಅವರನ್ನು ಪ್ರಸನ್ನಗೊಳಿಸಬೇಕು. ಇದರಿಂದ ಸೂರ್ಯನ ಅಶುಭ ಪ್ರಭಾವ ಕಡಿಮೆಯಾಗುತ್ತದೆ.


ಇದನ್ನೂ ಓದಿ-Garuda Purana: ಇಡೀ ಜೀವನವನ್ನೇ ಬದಲಾಯಿಸುವ ಈ 7 ಸಂಗತಿಗಳ ಬಗ್ಗೆ ನಿಮಗೆ ತಿಳಿದಿದೆಯೇ?

>> ಸೂರ್ಯ ಮುನಿಸಿಕೊಂಡಿದ್ದರೆ, ತಂದೆಯನ್ನು ಪ್ರಸನ್ನಗೊಳಿಸಿ.
>> ಚಂದ್ರನ ಮುನಿಸಿಕೊಂಡಿದ್ದರೆ, ತಾಯಿಯನ್ನು ಪ್ರಸನ್ನಗೊಳಿಸಿ.
>> ಬುಧ ಮುನಿಸಿಕೊಂಡಿದ್ದರೆ, ಚಿಕ್ಕಪ್ಪ ಮತ್ತು ಸಹೋದರರನ್ನು ಪ್ರಸನ್ನಗೊಳಿಸಿ.
>> ಗುರು ಮುನಿಸಿಕೊಂಡಿದ್ದರೆ, ಗುರುಗಳು ಮತ್ತು ಹಿರಿಯರನ್ನು ಪ್ರಸನ್ನಗೊಳಿಸಿ.
>> ಶುಕ್ರ ಮುನಿಸಿಕೊಂಡಿದ್ದರೆ, ಧರ್ಮಪತ್ನಿಯನ್ನು ಪ್ರಸನ್ನಗೊಳಿಸಿ. 
>> ಶನಿ ಮುನಿಸಿಕೊಂಡಿದ್ದರೆ, ದಾಸದಾಸಿಯರನ್ನು ಪ್ರಸನ್ನಗೊಳಿಸಿ.
>> ಕೇತು ಪ್ರಕೋಪ ಕಡಿಮೆ ಮಾಡಲು ಕುಷ್ಠರೋಗಿಯನ್ನು ಪ್ರಸನ್ನಗೊಳಿಸಿದೆ.


ಇದನ್ನೂ ಓದಿ-Venus Transit April 2022: ಶೀಘ್ರದಲ್ಲಿಯೇ ಈ ಮೂರು ರಾಶಿಗಳ ಜನರ ಮೇಲೆ ಧನವೃಷ್ಟಿ, ಭಾಗ್ಯ ತೆರೆಯಲಿದ್ದಾರೆ ಧನದಾತ ಶುಕ್ರ ಹಾಗೂ ಬೃಹಸ್ಪತಿ

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.