Venus Transit April 2022: ಶೀಘ್ರದಲ್ಲಿಯೇ ಈ ಮೂರು ರಾಶಿಗಳ ಜನರ ಮೇಲೆ ಧನವೃಷ್ಟಿ, ಭಾಗ್ಯ ತೆರೆಯಲಿದ್ದಾರೆ ಧನದಾತ ಶುಕ್ರ ಹಾಗೂ ಬೃಹಸ್ಪತಿ

Shukra Rashi Parivartan 2022 - ಬರುವ ಏಪ್ರಿಲ್ 27ರಿಂದ ಶುಕ್ರ ತನ್ನ ರಾಶಿಯನ್ನು ಬದಲಾಯಿಸಿ ಮೀನ ರಾಶಿಗೆ ಪ್ರವೇಶಿಸಲಿದೆ. ಮೀನ ರಾಶಿಯಲ್ಲಿ ಈಗಾಗಲೇ ದೇವಗುರು ಬೃಹಸ್ಪತಿ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ಎರಡು ಶುಭಗ್ರಹಗಳ ಸಂಯೋಜನೆ ಒಟ್ಟು ಮೂರು ರಾಶಿಗಳ ಜನರಿಗೆ ಅಪಾರ ಲಾಭ ನೀಡಲಿದೆ.  

Written by - Nitin Tabib | Last Updated : Apr 19, 2022, 06:33 PM IST
  • ಏಪ್ರಿಲ್ 27ರಿಂದ ಈ ಮೂರು ರಾಶಿಗಳ ಭಾಗ್ಯ ತೆರೆಯಲಿದೆ
  • ಮೀನ ರಾಶಿಯಲ್ಲಿ ಗುರು-ಶುಕ್ರರ ಸಂಯೋಜನೆ
  • ಯಾವ ಮೂರು ರಾಶಿಗಳ ಭಾಗ್ಯ ಬೆಳಗಲಿದೆ ತಿಳಿದುಕೊಳ್ಳೋಣ ಬನ್ನಿ
Venus Transit April 2022: ಶೀಘ್ರದಲ್ಲಿಯೇ ಈ ಮೂರು ರಾಶಿಗಳ ಜನರ ಮೇಲೆ ಧನವೃಷ್ಟಿ, ಭಾಗ್ಯ ತೆರೆಯಲಿದ್ದಾರೆ ಧನದಾತ ಶುಕ್ರ ಹಾಗೂ ಬೃಹಸ್ಪತಿ title=
Astrology

ನವದೆಹಲಿ: Venus Trainsit 2022 In Pices - ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಮತ್ತು ಗುರು ಗ್ರಹಗಳನ್ನು ತುಂಬಾ ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗುತ್ತದೆ.  ಏಕೆಂದರೆ ಶುಕ್ರನನ್ನು ಸಂಪತ್ತು ದಯಪಾಲಕ ಎನ್ನಲಾದರೆ, ಮತ್ತೊಂದೆಡೆ, ದೇವಗುರು ಬೃಹಸ್ಪತಿಯನ್ನು ಅದೃಷ್ಟದಾತ ಎನ್ನಲಾಗುತ್ತದೆ. ಹೀಗಿರುವಾಗ ಇದೀಗ ಈ ಎರಡೂ ಶುಭ ಗ್ರಹಗಳು ಒಂದಾಗಲಿವೆ. ಈ ಇಬ್ಬರ ಸಂಯೋಜನೆ 3 ರಾಶಿಗಳ ಜನರ ಮೇಲೆ ಅತ್ಯಂತ ಮಂಗಳಕರ ಪರಿಣಾಮ ಬೀರಲಿದೆ.ಈ ಶುಕ್ರ ಹಾಗೂ ಗುರುವಿನ ಈ ಸಂಯೋಜನೆ ಮೀನ ರಾಶಿಯಲ್ಲಿ ಇರಲಿದೆ. ಏಪ್ರಿಲ್ 27 ರಂದು, ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ, ಆದರೆ ಈಗಾಗಲೇ ಇಲ್ಲಿ ಗುರು ವಿರಾಜಮಾನನಾಗಿದ್ದಾನೆ.ಈ ಸಂಯೋಜನೆ ಮೇ 23 ರವರೆಗೆ ಮುಂದುವರೆಯಲಿದೆ ಮತ್ತು ಅಲ್ಲಿಯವರೆಗೆ ಈ 3 ರಾಶಿರಾಶಿಗಳ ಜನರಿಗೆ ಲಾಭವೋ ಲಾಭ ಹರಿದುಬರಲಿದೆ.

ಈ ರಾಶಿಗಳ ಜನರು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ
ವೃಷಭ:
 ಜೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿಯವರಿಗೆ ಶುಕ್ರ-ಗುರುಗಳ ಈ ಸಂಯೋಜನೆಯಿಂದ ಆದಾಯದಲ್ಲಿ ವೃದ್ಧಿಯಾಗಲಿದೆ. ಈ ಹೆಚ್ಚಿದ ಆದಾಯ ಆರ್ಥಿಕ ಸ್ಥಿತಿಯನ್ನು ಬಳಪಡಿಸಲಿದೆ. ಸಾಲಬಾಧೆಯಿಂದ ಮುಕ್ತಿ ಸಿಗಲಿದೆ.  ವೃತ್ತಿ ಜೀವನದಲ್ಲಿಯೂ ಕೂಡ ಯಶಸ್ಸು ಕಾಣುವಿರಿ. ಐಷಾರಾಮಿ ಜೀವನದ ಆನಂದವನ್ನು ಅನುಭವಿಸುವಿರಿ.

ಇದನ್ನೂ ಓದಿ-Akshaya Tritiya 2022: ಅಕ್ಷಯ್ ತೃತಿಯಾ ಯಾವಾಗ? ವಿವಾಹಕ್ಕೆ ಅದ್ಭುತ ಯೋಗ

ಮಿಥುನ: ಗುರು-ಶುಕ್ರರ ಈ ಸಂಯೋಜನೆಯು ಮಿಥುನ ರಾಶಿ ಜಾತಕದವರ ವೃತ್ತಿಯಲ್ಲಿ ಪ್ರಗತಿಯನ್ನು ನೀಡಲಿದೆ. ಹೊಸ ಉದ್ಯೋಗದ ಅವಕಾಶ ಸಿಗುವ ಸಾಧ್ಯತೆ ಇದೆ. ಪ್ರಮೋಷನ್-ಇನ್ಕ್ರಿಮೆಂಟ್ ಸಿಗಲಿದೆ. ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ವ್ಯಾಪಾರಸ್ಥರಿಗೆ ಲಾಭ ಹೆಚ್ಚಾಗಲಿದೆ. 

ಇದನ್ನೂ ಓದಿ-April 25 ರಿಂದ ಈ 3 ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ

ಕರ್ಕ: ಕರ್ಕ ರಾಶಿಯವರಿಗೆ ಗುರು ಮತ್ತು ಶುಕ್ರರ ಸಂಯೋಜನೆಯು ವಿದೇಶ ಪ್ರಯಾಣದ ಅವಕಾಶವನ್ನು ಕಲ್ಪಿಸುವ ಸಾಧ್ಯತೆ ಇದೆ. ವಿದೇಶದಿಂದ ಧನಾಗಮನದ ಸಾಧ್ಯತೆ ಇದೆ. ಆದಾಯವನ್ನು ಹೆಚ್ಚಿಸುವ ಹಲವಾರು ಅವಕಾಶಗಳು ಸೃಷ್ಟಿಯಾಗಲಿವೆ. ಪರೀಕ್ಷೆ-ಸಂದರ್ಶನಕ್ಕೆ ಹಾಜರಾಗಲಿರುವವರು ಯಶಸ್ಸನ್ನು ಪಡೆಯಲಿದ್ದಾರೆ.

ಇದನ್ನೂ ನೋಡಿ-

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News