Guru Purnima 2021 ಈ ದಿನ ಗುರು ಪೌರ್ಣಿಮೆ ಆಚರಿಸಲಾಗುವುದು, ಇಲ್ಲಿದೆ ಶುಭ ಮುಹೂರ್ತ ಹಾಗೂ ಮಹತ್ವ
Guru Purnima 2021 - ಗುರು ಪೌರ್ಣಿಮೆ ಉತ್ಸವವನ್ನು ದೇಶಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಪೌರ್ಣಿಮೆಗೆ ಸನಾತನ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದ್ದರೂ, ಆಷಾಡ ತಿಂಗಳ ಆಚರಿಸಲಾಗುವ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ದಿನ ಮಹರ್ಷಿ ವೇದವ್ಯಾಸ್ (Maharshi Vedavyas) ಜಿ ಜನಿಸಿದ್ದರು ಎಂದು ಹೇಳಲಾಗುತ್ತದೆ.
Guru Purnima 2021 - ಗುರು ಪೌರ್ಣಿಮೆ ಉತ್ಸವವನ್ನು ದೇಶಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಪೌರ್ಣಿಮೆಗೆ ಸನಾತನ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದ್ದರೂ, ಆಷಾಡ ತಿಂಗಳ ಆಚರಿಸಲಾಗುವ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ದಿನ ಮಹರ್ಷಿ ವೇದವ್ಯಾಸ್ (Maharshi Vedavyas) ಜಿ ಜನಿಸಿದ್ದರು ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಗುರು ಪೂರ್ಣಿಮವನ್ನು ವ್ಯಾಸ್ ಪೂರ್ಣಿಮಾ (Vyas Purnima 2021) ಎಂದೂ ಕರೆಯುತ್ತಾರೆ. ಮೊಟ್ಟ ಮೊದಲ ಬಾರಿಗೆ ಮಹರ್ಷಿ ವೇದ ವ್ಯಾಸರು ಎಲ್ಲಾ ನಾಲ್ಕು ವೇದಗಳ ಜ್ಞಾನವನ್ನು ಮಾನವಕುಲಕ್ಕೆ ನೀಡಿದರು ಎನ್ನಲಾಗುತ್ತದೆ. ಇದೇ ಕಾರಣದಿಂದ ಅವರನ್ನು ಮೊದಲ ಗುರು (Aadi Guru) ಎಂದೂ ಕೂಡ ಕರೆಯಲಾಗುತ್ತದೆ. ಈ ವರ್ಷ ಗುರು ಪೂರ್ಣಿಮಾ ಜುಲೈ 24 ರಂದು ಆಚರಿಸಲಾಗುತ್ತಿದೆ.
ಗುರು ಪೌರ್ಣಿಮೆಯ ಮಹತ್ವ
ಭಾರತೀಯ ಪರಂಪರೆಯಲ್ಲಿ (Indian Culture) ಗುರುಗೆ (Guru) ವಿಶೇಷ ಮಹತ್ವ ನೀಡಲಾಗಿದೆ. ಗುರು ತನ್ನ ಶಿಷ್ಯರಿಗೆ ತಪ್ಪು ದಾರಿಗೆ ಹೋಗುವುದನ್ನು ತಪ್ಪಿಸುತ್ತಾರೆ ಹಾಗೂ ಸರಿಯಾದ ದಾರಿ ಮೇಲೆ ನಡೆಯಲು ಪ್ರೇರೇಪಿಸುತ್ತಾರೆ. ಹೀಗಾಗಿ ಗುರುವಿನ ಗೌರವಕ್ಕಾಗಿ ಆಷಾಡ ಮಾಸದ ಶುಕ್ಲ ಪಕ್ಷದಂದು ಬರುವ ಹುಣ್ಣಿಮೆಯಂದು ಗುರುಪೌರ್ಣಿಮಾ ಉತ್ಸವವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ-Tips To Get Rid Of Financial Problem: ಲಕ್ಷ್ಮಿಯ ಕೃಪಾವೃಷ್ಟಿಗಾಗಿ ಭಾನುವಾರ ಖಂಡಿತ ಈ ಉಪಾಯಗಳನ್ನು ಅನುಸರಿಸಿ
ಗುರುಪೌರ್ಣಿಮೆಯ ಶುಭ ಮುಹೂರ್ತ
ಗುರುಪೌರ್ಣಿಮೆಯ ತಿಥಿ 23 ಜುಲೈ ಬೆಳಗ್ಗೆ 10 ಗಂಟೆ 43 ನಿಮಿಷಕ್ಕೆ ಆರಂಭಗೊಳ್ಳುತ್ತದೆ. ಇದು ಜುಲೈ 24ರ ಬೆಳಗ್ಗೆ 8 ಗಂಟೆ 6 ನಿಮಿಷದವರೆಗೆ ಇರಲಿದೆ.
ಇದನ್ನೂ ಓದಿ-ಶ್ರಾವಣ ಮಾಸದಲ್ಲಿ ಮಹಾಶಿವನ ಪೂಜೆಯ ವೇಳೆ ಈ ವಿಚಾರಗಳು ತಿಳಿದಿರಲಿ, ಶಿವನ ಪೂಜೆ ವೇಳೆ ಈ ವಸ್ತುಗಳ ಬಳಕೆ ನಿಷಿದ್ಧ
ಪುರಾಣಗಳ ಒಟ್ಟು ಸಂಖ್ಯೆ 18 ಆಗಿದೆ. ಆದರೆ, ಈ ಎಲ್ಲಾ 18 ಪುರಾಣಗಳನ್ನು ರಚಿಸಿದವರು ಮಹರ್ಷಿ ವೆದವ್ಯಾಸರು ಎನ್ನಲಾಗುತ್ತದೆ. ಇದರಲ್ಲಿ ಮಹರ್ಷಿಗಳು ವೇದಗಳನ್ನು ವಿಭಜಿಸಿದ್ದಾರೆ. ಇದೇ ಕಾರಣಕ್ಕೆ ಅವರನ್ನು ವೇದವ್ಯಾಸರು ಎಂದು ಕರೆಯಲಾಗುತ್ತದೆ. ವೇದವ್ಯಾಸರನ್ನು ಆದಿಗುರು ಎಂದೂ ಕೂಡ ಕರೆಯಲಾಗುತ್ತದೆ.
ಇದನ್ನೂ ಓದಿ-Garuda Purana: ಗರುಡ ಪುರಾಣದ ಪ್ರಕಾರ ಇವುಗಳನ್ನು ಕಂಡರೆ ಸಾಕು ತಾಯಿ ಲಕ್ಷ್ಮೀ ಕೃಪೆಗೆ ಪಾತ್ರರಾಗಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ