Guru Purnima 2023 Remedies: ಹಿಂದೂ ಧರ್ಮಗ್ರಂಥಗಳಲ್ಲಿ ಗುರು ಪೂರ್ಣಿಮೆಗೆ ಬಹಳ ವಿಶೇಷವಾದ ಮಹತ್ವವಿದೆ. ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯ ದಿನ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ.  ಬ್ರಹ್ಮಾಂಡದ ಮೊದಲ ಗುರು ಎಂದು ಪರಿಗಣಿಸಲಾಗಿರುವ ಮಹರ್ಷಿ ವೇದ ವ್ಯಾಸರು ಆಷಾಢ ಪೂರ್ಣಿಮೆ ದಿನದಂದು ಜನಿಸಿದರು ಎಂದು ನಂಬಲಾಗಿದೆ. ಹಾಗಾಗಿ, ಈ ಗುರು ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮಾ ಎಂದೂ ಸಹ ಕರೆಯಲಾಗುತ್ತದೆ. 


COMMERCIAL BREAK
SCROLL TO CONTINUE READING

ಧರ್ಮ ಶಾಸ್ತ್ರಗಳ ಪ್ರಕಾರ, ಗುರು ಪೂರ್ಣಿಮೆಯ ದಿನ ಗುರುವಿನ ಆಶೀರ್ವಾದವನ್ನು ಪಡೆಯುವುದರಿಂದ ಜೀವನದಲ್ಲಿ ಪ್ರಗತಿ, ಯಶಸ್ಸು ಕಂಡು ಬರುತ್ತದೆ. ಮಾತ್ರವಲ್ಲ, ಈ ದಿನ ಭಗವಾನ್ ವಿಷ್ಣುವಿನ ಜೊತೆಗೆ ತಾಯಿ ಲಕ್ಷ್ಮಿಯನ್ನು ಪೂಜಿಸುವುದರಿಂದ, ಈ ದಿನ ದಾನ ಮಾಡುವುದರಿಂದ ವೃತ್ತಿ ರಂಗದಲ್ಲಿ ಭಾರೀ ಪ್ರಗತಿ ಕಂಡು ಬರಲಿದೆ. ಜೊತೆಗೆ ಜೀವನದಲ್ಲಿ ಸುಖ-ಸಮೃದ್ಧಿಯೂ ಕಂಡು ಬರಲಿದೆ. ಇದಕ್ಕಾಗಿ ಇಂದು (ಗುರು ಪೂರ್ಣಿಮೆ) ಸಂಜೆ ಕೆಲವು ಪರಿಹಾರಗಳನ್ನು ಕೈಗೊಳ್ಳುವುದು ಬಹಳ ಮುಖ್ಯ. 


ಇದನ್ನೂ ಓದಿ- Weekly Horoscope: ಜುಲೈ ತಿಂಗಳ ಮೊದಲ ವಾರ ಯಾರ ಭವಿಷ್ಯ ಹೇಗಿದೆ


ಗುರು ಪೂರ್ಣಿಮೆಯ ಸಂಜೆ ಈ ಕೆಲಸ ಮಾಡಿದರೆ ಹಣಕ್ಕೆ ಕೊರತೆಯೇ ಇರುವುದಿಲ್ಲ: 
ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು, ಸಂಪತ್ತು ವೃದ್ದಿಗಾಗಿ ಗುರು ಪೂರ್ಣಿಮೆಯ ದಿನ ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಲಹೆ ನೀಡಲಾಗಿದೆ. 
ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಗುರು ಪೂರ್ಣಿಮೆಯಲ್ಲಿ  ಕೆಲವು ಸುಲಭ ಪರಿಹಾರಗಳನ್ನು ಕೈಗೊಳ್ಳುವುದರಿಂದ ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿಯ ಆಶೀರ್ವಾದಕ್ಕೆ ಪಾತ್ರರಾಗಬಹುದು. ಮಾತ್ರವಲ್ಲ, ಇದರಿಂದ ಜೀವನದಲ್ಲಿ ಸುಖ-ಸಂತೋಷ, ಸಂಪತ್ತು ಪ್ರಾಪ್ತಿಯಾಗುತ್ತದೆ. ಪ್ರತಿ ಕೆಲಸದಲ್ಲೂ ಅದೃಷ್ಟದ ಬೆಂಬಲ ದೊರೆಯಲಿದೆ. ಅವುಗಳೆಂದರೆ... 


* ತಿಲಕ ಹಚ್ಚಿ: 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವಗುರು ಬೃಹಸ್ಪತಿಯನ್ನು ಸಂತೋಷ ಮತ್ತು ಅದೃಷ್ಟವನ್ನು ನೀಡುವ ಗ್ರಹ ಎಂದು ನಂಬಲಾಗಿದೆ. ಗುರು ಪೂರ್ಣಿಮೆಯ ದಿನದಂದು ನಿಮ್ಮ ಹಣೆಯ ಮೇಲೆ ಕುಂಕುಮ ಮತ್ತು ಅರಿಶಿನದ ತಿಲಕವನ್ನು ಹಚ್ಚಿಕೊಳ್ಳಿ. ಇದರಿಂದ ವ್ಯಕ್ತಿಯ ಜಾತಕದಲ್ಲಿ ದುರ್ಬಲನಾಗಿರುವ ಗುರುವನ್ನು ಬಳಪಡಿಸಬಹುದು. 


ಇದನ್ನೂ ಓದಿ- ಡ್ಯಾಂನಲ್ಲಿ ಪತ್ತೆಯಾಯ್ತು ಪುರಾತನ ದೇವಾಲಯ


* ಗುರುಗಳಿಗೆ ವಂದಿಸಿ: 
ಜೀವನದಲ್ಲಿ ಯಾವುದೇ ಹಂತದಲ್ಲಿ, ಯಾವುದೇ ಸಂದರ್ಭದಲ್ಲಿ ಒಂದಕ್ಷರವನ್ನು ಹೇಳಿಕೊಟ್ಟಾತನೂ ಗುರು ಎಂದು ಹೇಳಲಾಗುತ್ತದೆ. ಅಂತಹ ಗುರುಗಳನ್ನು ಪೂಜಿಸಲು, ಅವರ ಆಶೀರ್ವಾದವನ್ನು ಪಡೆಯಲು ಗುರು ಪೂರ್ಣಿಮೆಯ ದಿನ ಅತ್ಯಂತ ಶ್ರೇಷ್ಠವಾದ ದಿನ. 


* ಹೆತ್ತವರ, ಹಿರಿಯರ ಆಶೀರ್ವಾದ: 
ಗುರು ಪೂರ್ಣಿಮೆಯ ದಿನ ಪಾಠ ಕಲಿಸಿದ ಗುರುಗಳಿಗೆ ಮಾತ್ರವಲ್ಲ ನಿಮ್ಮ ಹೆತ್ತವರು, ಮನೆಯ ಹಿರಿಯರ ಆಶೀರ್ವಾದವನ್ನು ಪಡೆಯುವುದರಿಂದ ಪುಣ್ಯ ಫಲ ದೊರೆಯುತ್ತದೆ. 


ಇದನ್ನೂ ಓದಿ- 


* ಅರಳಿ ಮರಕ್ಕೆ ನೀರು ಅರ್ಪಿಸಿ: 
ಗುರು ಪೂರ್ಣಿಮೆಯ ದಿನ ಸಂಜೆ ಸೂರ್ಯಾಸ್ತದ ಬಳಿಕ ಅರಳಿ ಮರಕ್ಕೆ ನೀರನ್ನು ಅರ್ಪಿಸುವುದರಿಂದ ಜೀವನದಲ್ಲಿ ಎದುರಾಗಿರುವ ಹಣಕಾಸಿನ ಮುಗ್ಗಟ್ಟಿನಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ. 


* ಪುಸ್ತಕ ದಾನ ಮಾಡಿ: 
ವಿದ್ಯಾದಾನಕ್ಕಿಂದ ಶ್ರೇಷ್ಠವಾದ ದಾನ ಮತ್ತೊಂದಿಲ್ಲ. ಗುರು ಪೂರ್ಣಿಮೆಯ ದಿನ ಅಗತ್ಯವಿರುವ ಮಕ್ಕಳಿಗೆ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳಂತಹ ಶೈಕ್ಷಣಿಕ ಸಾಮಗ್ರಿಗಳನ್ನು ದಾನ  ಮಾಡುವುದರಿಂದ ಉದ್ಯೋಗರಂಗದಲ್ಲಿ ಯಶಸ್ಸನ್ನು ಪಡೆಯಬಹುದು ಎಂಬ ನಂಬಿಕೆ ಇದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.