Gurupushyamruta Yog 2022: ಈ ಬಾರಿ ಅಕ್ಟೋಬರ್ 22 ರಂದು ದೀಪಾವಳಿಯ ಮಹಾಪರ್ವ ಆರಂಭಗೊಳ್ಳುತ್ತಿದೆ. ಅದಕ್ಕೂ ಮುನ್ನ ಎರಡು ತಿಂಗಳು ಮೊದಲು ಆಗಸ್ಟ್ 25ರಂದು ಗುರು ಪುಷ್ಯ  ಯೋಗ ನಿರ್ಮಾಣಗೊಂಡಿದೆ. ಗುರುವಾರದ ದಿನ ಪುಷ್ಯ ನಕ್ಷತ್ರದ ಈ ಯೋಗ ನಿರ್ಮಾಣದಿಂದ ದೀಪಾವಳಿಯ ಖರೀದಿಗಾಗಿ ಅಷ್ಟೇ ಅಲ್ಲ ಸಾಮಾನ್ಯ ಖರೀದಿ-ಮಾರಾಟಕ್ಕೂ ಕೂಡ ಅಕ್ಷಯ ಫಲದಾಯಿ ಸಾಬೀತಾಗುತ್ತದೆ. ಜೋತಿಷ್ಯ ಪಂಡಿತರ ಪ್ರಕಾರ ಸುಮಾರು ಎರಡೂವರೆ ಸಾವಿರ ವರ್ಷಗಳ ಬಳಿಕ ಇಂತಹ ಶುಭ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. 


COMMERCIAL BREAK
SCROLL TO CONTINUE READING

ಈ ದಿನ, ನೀವು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬಹುದು. ಹೊಸ ಕೆಲಸಗಳನ್ನು ಪ್ರಾರಂಭಿಸಬಹುದು, ವಾಹನಗಳು, ಆಭರಣಗಳು, ಬಟ್ಟೆ ಮತ್ತು ಇತರ ವಸ್ತುಗಳನ್ನು ಖರೀದಿಸುವುದರಿಂದ ಮಂಗಳಕರ ಪರಿಣಾಮಗಳನ್ನು ಪಡೆದುಕೊಳ್ಳಬಹುದು. ಗೃಹ ಮತ್ತು ಕಛೇರಿ ವಸ್ತುಗಳ ಖರೀದಿಯೂ ಶುಭವಾಗಲಿದೆ. ಈ ದಿನ ಸೂರ್ಯ ಸಿಂಹ ರಾಶಿಯಲ್ಲಿ, ಚಂದ್ರ ಕರ್ಕ, ಬುಧ ಕನ್ಯಾ, ಗುರು ಮೀನ ಮತ್ತು ಶನಿ ಮಕರ ರಾಶಿಗಳಲ್ಲಿ ಅಂದರೆ ತಮ್ಮ ಸ್ವರಾಶಿಯಲ್ಲಿಯೇ ವಿರಾಜಮಾನನಾಗಿದ್ದಾರೆ.


ಇದನ್ನೂ ಓದಿ-Ganesh Chaturthi 2022: ಈ 3 ರಾಶಿಯವರಿಗೆ ಸದಾ ಇರುತ್ತೆ ಗಣಪತಿ ಆಶೀರ್ವಾದ


ಈ ರೀತಿಯಾಗಿ, ಐದು ಗ್ರಹಗಳು ತನ್ನದೇ ಆದ ರಾಶಿಯಲ್ಲಿ ಇರುವುದರಿಂದ. ಇದನ್ನು ಅತ್ಯಂತ ಮಂಗಳಕರವೆಂದು ಯೋಗ ಎಂದು ಪರಿಗಣಿಸಲಾಗಿದೆ. ಶನಿ ಮತ್ತು ಗುರುಗಳು ತಮ್ಮದೇ ಆದ ರಾಶಿಯಲ್ಲಿದ್ದರೆ, ಈ ಸಂಯೋಜನೆಯ ಶುಭ ಫಲಿತಾಂಶಗಳು ಹೆಚ್ಚಾಗುತ್ತವೆ. ಇನ್ನೊಂದೆಡೆ ಶನಿ ಹಾಗೂ ಗುರು ಪುಷ್ಯ ನಕ್ಷತ್ರದ ಅಧಿಪತಿಗಳು ಕೂಡ ಹೌದು. ಗ್ರಹಗಳ ಈ ಶುಭ ಕಾಕತಾಳೀಯ ಕಳೆದ ಹಲವು ಶತಮಾನಗಳಲ್ಲಿ ಸಂಭವಿಸಿಲ್ಲ.  ಗುರುವಾರ ಪುಷ್ಯ ನಕ್ಷತ್ರದ ಜೊತೆಗೆ ಗುರು ಮತ್ತು ಶನಿ ಇಬ್ಬರೂ ತಮ್ಮ ತಮ್ಮ ರಾಶಿಯಲ್ಲಿದ್ದು, ಈ ಸಂಯೋಜನೆಯಲ್ಲಿ ಮಾಡುವ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಜೋತಿರ್ವಿದ್ವಾಂಸರು ಹೇಳುತ್ತಾರೆ. ಪಂಚಗ್ರಹಗಳ ಸಂಯೋಗದಿಂದ ಈ ದಿನ ಸರ್ವಾರ್ಥಸಿದ್ಧಿ, ಅಮೃತಸಿದ್ಧಿ, ವಾರಿಯನ್ ಸೇರಿದಂತೆ ಶುಭ ಕರ್ತಾರಿ, ವರಿಷ್ಠ, ಭಾಸ್ಕರ, ಉಭಯಚಾರಿ, ಹರ್ಷ, ಸರಳ ಮತ್ತು ವಿಮಲ ಯೋಗಗಳು ಕೂಡ ನಿರ್ಮಾಣಗೊಳ್ಳಲಿವೆ.


ಇದನ್ನೂ ಓದಿ-ಸೆಪ್ಟೆಂಬರ್ ತಿಂಗಳಲ್ಲಿ ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾಳೆ ಮಹಾ ಲಕ್ಷ್ಮೀ


ಈ ಶುಭ ಸಂಯೋಗ ಖರೀದಿಗಾಗಿ ಬಂಬಾಟಾಗಿದೆ ಎಂದು ಜೋತಿಷ್ಯ ವಿದ್ವಾಂಸರು ಹೇಳುತ್ತಾರೆ. ಚಾತುರ್ಮಾಸದಲ್ಲಿ ಮಂಗಳ ಕಾರ್ಯಗಳು ಸಾಮಾನ್ಯವಾಗಿ ನೆರವೇರುವುದಿಲ್ಲ ಆದರೆ, ಹೂಡಿಕೆ, ಕ್ರಯ-ವಿಕ್ರಯ ಹಾಗೂ ಹೊಸ ಆರಂಭಗಳಿಗೆ ಈ ಯೋಗ ತುಂಬಾ ಉತ್ತಮವಾಗಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.