Numerology: ಈ ದಿನಾಂಕಗಳಲ್ಲಿ ಜನಿಸಿದ ಜನರು ಅತೀ ಬುದ್ದಿವಂತರು ಮತ್ತು ಅತ್ಯಂತ ಅದೃಷ್ಟಶಾಲಿಗಳು

Radix 7: ಸಂಖ್ಯಾಶಾಸ್ತ್ರದಲ್ಲಿ ರಾಡಿಕ್ಸ್ 7 ಅನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನಾಂಕಗಳಲ್ಲಿ ಜನಿಸಿದ ಜನರು ಶ್ರಮಶೀಲರು, ಬುದ್ಧಿವಂತರು ಮತ್ತು ಆರ್ಥಿಕ ವಿಷಯದಲ್ಲಿ ಬಹಳ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.  

Written by - Yashaswini V | Last Updated : Aug 24, 2022, 12:19 PM IST
  • ಸಂಖ್ಯಾಶಾಸ್ತ್ರದಲ್ಲಿ ಕೆಲವು ದಿನಾಂಕಗಳಲ್ಲಿ ಜನಿಸಿದ ಜನರನ್ನು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ.
  • ರಾಡಿಕ್ಸ್ 7 ಅನ್ನು ಪಾಪ ಗ್ರಹವೆಂದು ಪರಿಗಣಿಸಲಾದ ಕೇತು ಗ್ರಹದ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ.
  • ಯಾವುದೇ ತಿಂಗಳ 7, 16 ಅಥವಾ 25 ರಂದು ಜನಿಸಿದ ಜನರ ರಾಡಿಕ್ಸ್ ಸಂಖ್ಯೆ 7 ಆಗಿರುತ್ತದೆ.
Numerology:  ಈ ದಿನಾಂಕಗಳಲ್ಲಿ ಜನಿಸಿದ ಜನರು ಅತೀ ಬುದ್ದಿವಂತರು ಮತ್ತು ಅತ್ಯಂತ ಅದೃಷ್ಟಶಾಲಿಗಳು title=
Radix 7 people

ರಾಡಿಕ್ಸ್ 7: ಜ್ಯೋತಿಷ್ಯದಂತೆಯೇ ಸಂಖ್ಯಾಶಾಸ್ತ್ರವೂ ಸಹ ವ್ಯಕ್ತಿಯ ಜೀವನದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತವೆ. ಸಂಖ್ಯಾಶಾಸ್ತ್ರದಲ್ಲಿ ಕೆಲವು ದಿನಾಂಕಗಳಲ್ಲಿ ಜನಿಸಿದ ಜನರನ್ನು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಯಾವುದೇ ತಿಂಗಳ 7, 16 ಅಥವಾ 25 ರಂದು ಜನಿಸಿದ ಜನರ ರಾಡಿಕ್ಸ್ ಸಂಖ್ಯೆ 7 ಆಗಿರುತ್ತದೆ.  ಈ ಜನರು ಮುಕ್ತವಾಗಿ ಜೀವನವನ್ನು ನಡೆಸುತ್ತಾರೆ ಮತ್ತು ಅವರು ಅತೀ ಬುದ್ದಿವಂತರು ಮತ್ತು ಅತ್ಯಂತ ಅದೃಷ್ಟಶಾಲಿಗಳಾಗಿದ್ದು ಜೀವನದಲ್ಲಿ ಸಕಲ ಸುಖ-ಸಮೃದ್ಧಿಯನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. 

ರಾಡಿಕ್ಸ್ 7 ರ ಜನರ ಸ್ವಭಾವ:
ರಾಡಿಕ್ಸ್ 7 ಅನ್ನು ಪಾಪ ಗ್ರಹವೆಂದು ಪರಿಗಣಿಸಲಾದ ಕೇತು ಗ್ರಹದ ಸಂಖ್ಯೆ  ಎಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಕೇತು ಗ್ರಹದ ಪ್ರಭಾವವು ರಾಡಿಕ್ಸ್ 7 ರ ಸ್ಥಳೀಯರಲ್ಲಿ ಕಂಡುಬರುತ್ತದೆ. ಈ ರಾಡಿಕ್ಸ್‌ನ ಜನರು ಯಾರ ಮುಂದೆಯೂ ತಲೆಬಾಗಲು ಇಷ್ಟಪಡುವುದಿಲ್ಲ. ಅವರು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಲು ಮತ್ತು ಬದುಕಲು ಇಷ್ಟಪಡುತ್ತಾರೆ. ಈ ಜನರು ತಮ್ಮ ಜೀವನದಲ್ಲಿ ಯಾರ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ. 

ಇದನ್ನೂ ಓದಿ- Haldi Totka: ಅದೃಷ್ಟವನ್ನೇ ಬದಲಾಯಿಸುತ್ತೆ ಒಂದು ಅರಿಶಿನದ ಕೊನೆ

ರಾಡಿಕ್ಸ್ 7 ರ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಗೌರವವನ್ನೂ ಪಡೆಯುತ್ತಾರೆ. ಈ ಜನರಿಗೆ ಜೀವನದಲ್ಲಿ ಎಂದಿಗೂ ಹಣದ ಕೊರತೆ ಆಗುವುದಿಲ್ಲ. ಇವರು ಸದಾ ಸಕ್ರಿಯರಾಗಿದ್ದು, ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಈ ಜನರ ಕಲ್ಪನಾ ಶಕ್ತಿಯೂ ಚೆನ್ನಾಗಿದೆ. ಇದರೊಂದಿಗೆ, ಈ ಜನರು ಭವಿಷ್ಯದ ಘಟನೆಗಳನ್ನು ಮುಂಗಾಣುವ ಸಾಮರ್ಥ್ಯವನ್ನು ಸಹ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಆಗಸ್ಟ್‌ನಲ್ಲಿ ಗ್ರಹಗಳ ಬದಲಾವಣೆ: ಈ ರಾಶಿಯವರಿಗೆ ಅದೃಷ್ಟ 

ರಾಡಿಕ್ಸ್ 7ರ ಜನರು ಜೀವನದಲ್ಲಿ ತುಂಬಾ ಸುಲಭವಾಗಿ ಯಶಸ್ಸನ್ನು ಗಳಿಸುತ್ತಾರೆ. ಈ ಜನರ ಒಂದೇ ಒಂದು ಸಮಸ್ಯೆ ಎಂದರೆ ಅವರು ಯಾರನ್ನಾದರೂ ಸುಲಭವಾಗಿ ನಂಬುತ್ತಾರೆ. ಇದರಿಂದ ಮೋಸಕ್ಕೆ ಬಲಿಯಾಗುತ್ತಾರೆ. ಈ ಜನರು ಸಮಾಜ ಸೇವೆಯಲ್ಲಿ ಸಾಕಷ್ಟು ಸಮಯ ಮತ್ತು ಹಣವನ್ನು ಖರ್ಚು ಮಾಡುತ್ತಾರೆ. ಮಾತ್ರವಲ್ಲ ಕಷ್ಟ ಎಂದವರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ. ಇವರು ತಮ್ಮವರ ಬಗ್ಗೆ ಕಾಳಜಿ ವಹಿಸುತ್ತಾರೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News