April ತಿಂಗಳಿನಲ್ಲಿ ಮಂಗಳನ ರಾಶಿಯಲ್ಲಿ ದೇವಗುರು ಬೃಹಸ್ಪತಿಯ ಪ್ರವೇಶ, ಈ ರಾಶಿಗಳ ಜನರಿಗೆ ವಿಪರೀತ ರಾಜಯೋಗದ ಲಾಭ
Guru Rashi Parivartan 2023: ಏಪ್ರಿಲ್ ತಿಂಗಳಿನಲ್ಲಿ ಗುರು ಗ್ರಹ ತನ್ನ ರಾಶಿಯನ್ನು ಪರಿವರ್ತಿಸಲಿದೆ. ಗುರುವಿನ ಈ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ಗುರು ಗೋಚರದಿಂದ ಯಾವ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಳ್ಳುತ್ತವೆ ತಿಳಿದುಕೊಳ್ಳೋಣ ಬನ್ನಿ,
Guru Gochar 2023: ಜೋತಿಷ್ಯ ಶಾಸ್ತ್ರದಲ್ಲಿ ಗುರುವಿನ ರಾಶಿ ಪರಿವರ್ತನೆಗೆ ವಿಶೇಷ ಮಹತ್ವವಿದೆ. ಹೊಸ ವರ್ಷದಲ್ಲಿಯೂ ಕೂಡ ಗುರು ಗೋಚರ ಸಂಭವಿಸಲಿದೆ. ತನ್ನ ನೇರ ನಡೆಯ ಮೂಲಕ ಏಪ್ರಿಲ್ 21, 2023 ರಂದು ರಾತ್ರಿ 8 ಗಂಟೆ 43 ನಿಮಿಷಕ್ಕೆ ಗುರು ತನ್ನ ಸ್ವಂತ ರಾಶಿಯಾಗಿರುವ ಮೀನ ರಾಶಿಯಿಂದ ಹೊರಟು ಮೇಷ ರಾಶಿಗೆ ಪ್ರವೇಶಿಸಲಿದೆ. ಗುರುವಿನ ಮೇಷ ರಾಶಿ ಪ್ರವೇಶ ವಿಪರೀತ ರಾಜಯೋಗವನ್ನು ನಿರ್ಮಿಸಲಿದೆ. ಈ ಯೋಗ ಕೆಲ ರಾಶಿಗಳ ಜಾತಕದವರ ಪಾಲಿಗೆ ಲಾಭಕಾರಿ ಸಾಬೀತಾಗಲಿದೆ. ಮಂಗಳ ಅಧಿಪತಿಯಾಗಿರುವ ಮೇಷ ರಾಶಿಗೆ ಗುರುವಿನ ಆಗಮನ ಹಲವು ರಾಶಿಗಳ ಭಾಗ್ಯೋದಯಕ್ಕೆ ಕಾರಣವಾಗಲಿದೆ. ಈ ರಾಶಿಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,
ಕರ್ಕ ರಾಶಿ- ಕರ್ಕ ರಾಶಿಯ ದಶಮ ಭಾವದಲ್ಲಿ ವಿಪರೀತ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ವಿಪರೀತ ರಾಜಯೋಗದ ಪ್ರಭಾವದಿಂದ ನಿಮ್ಮ ನೌಕರಿಯಲ್ಲಿ ನಿಮಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಧನಲಾಭದ ಎಲ್ಲಾ ಯೋಗಗಳು ಗೋಚರಿಸುತ್ತಿವೆ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಸಂಬಂಧಗಳು ಸುಧಾರಣೆಯಾಗಲಿದೆ.
ಧನು ರಾಶಿ- ಧನು ರಾಶಿಯ ಪಂಚಮ ಭಾವದಲ್ಲಿ ಈ ರಾಜಯೋಗ ನಿರ್ಮಾಣಗೊಳ್ಳಲಿದೆ. ಹೀಗಾಗಿ ಇದು ಧನು ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭ ಸಾಬೀತಾಗುವ ಸಾಧ್ಯತೆ ಇದೆ. ಗುರು ಗೋಚರದಿಂದ ನಿರ್ಮಾಣಗೊಳ್ಳುವ ವಿಪರೆತ ರಾಜಯೋಗ ಧನು ಜಾತಕದವರ ವೃತ್ತಿಜೀವನದಲ್ಲಿ ಲಾಭ ತರಲಿದೆ. ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಪಾಲಿಗೆ ಈ ಸಮಯ ಅನುಕೂಲಕರವಾಗಿರಲಿದೆ.
ಮಕರ ರಾಶಿ- ಮಕರ ರಾಶಿಯ ಚತುರ್ಥ ಭಾವದಲ್ಲಿ ಈ ವಿಪರೀತ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಸುಖ ಸೌಕರ್ಯಗಳು ವಿಸ್ತರಣೆಯಾಗುವ ಎಲ್ಲಾ ಸಾಧ್ಯತೆಗಳಿವೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ನಿಮಗೆ ಬರಬೇಕಾದ ಹಣ ನಿಮ್ಮ ಕೈಸೇರಲಿದೆ. ನೌಕರಿ ಮಾಡುವ ಜಾತಕದವರಿಗೆ ಹೊಸ ಅವಕಾಶಗಳು ಕೂಡಿ ಬರಲಿವೆ.
ಇದನ್ನೂ ಓದಿ-February 13 ರಂದು ಮತ್ತೆ ನಿರ್ಮಾಣಗೊಳ್ಳಲಿದೆ ಶನಿ ಸೂರ್ಯರ ಸಂಯೋಜನೆ, ಈ ರಾಶಿಗಳ ಜನರಿಗೆ ಪ್ರಬಲ ಲಾಭ
ಈ ಜಾತಕದವರ ಪಾಲಿಗೆ ಗಜಲಕ್ಷ್ಮಿ ಯೋಗ ಅತ್ಯಂತ ಶುಭವಾಗಿರಲಿದೆ
ಜೋತಿಷ್ಯ ಲೆಕ್ಕಾಚಾರದ ಪ್ರಕಾರ, ಗಜಲಕ್ಷ್ಮಿ ಯೋಗ ಹೊಸ ವರ್ಷದಲ್ಲಿ ಮೇಷ, ಮಿಥುನ ಹಾಗೂ ಧನು ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಲಾಭಕಾರಿ ಸಾಮ್ಬೀತಾಗಲಿದೆ. ಗಜಲಕ್ಷ್ಮಿ ಯೋಗದ ಪ್ರಭಾವದಿಂದ ನಿಮ್ಮ ಜೀವನದಲ್ಲಿ ಆರ್ಥಿಕ ಪ್ರಗತಿ ಹಾಗೂ ವೃತ್ತಿ ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.
ಇದನ್ನೂ ಓದಿ-Chanakya Niti: ಜೀವನದಲ್ಲಿ ಯಶಸ್ಸಿಗಾಗಿ ಈ ಕಹಿ ಗಿಡದ ಎರಡು ಹಣ್ಣುಗಳ ರುಚಿಯನ್ನು ನೀವು ಸವಿಯಲೇಬೇಕು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.