Chanakya Niti: ಜೀವನದಲ್ಲಿ ಯಶಸ್ಸಿಗಾಗಿ ಈ ಕಹಿ ಗಿಡದ ಎರಡು ಹಣ್ಣುಗಳ ರುಚಿಯನ್ನು ನೀವು ಸವಿಯಲೇಬೇಕು

Chanakya Niti: ಸುಖೀ ಜೀವನ, ಯಶಸ್ಸು ಹಾಗೂ ವಿಪರೀತ ಪರಿಸ್ಥಿತಿಗಳಲ್ಲಿ ನಮ್ಮ ವ್ಯವಹಾರ ಹೇಗಿರಬೇಕು ಎಂಬುದರ ಕುರಿತು ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ, ಈ ಕುರಿತು ಚಾಣಕ್ಯರು ತಮ್ಮ ನೀತಿಗಳಲ್ಲಿ ಯಾವ ಯಾವ ಸಂಗತಿಗಳನ್ನು ತಿಳಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jan 5, 2023, 04:56 PM IST
  • ಜೀವನದಲ್ಲಿ ಕಷ್ಟಪಡಲು ಹಿಂಜರಿಯುವ ಮತ್ತು ಅದೃಷ್ಟವನ್ನು ನಂಬಿ ಬದುಕುವ ವ್ಯಕ್ತಿಗೆ,
  • ಪರಿಶ್ರಮಪಟ್ಟು ಪಡೆದುಕೊಳ್ಳುವವರು ಬಿಟ್ಟು ಹೋಗುವುದು ಮಾತ್ರ ಸಿಗುತ್ತದೆ
  • ಎಂದು ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ.
Chanakya Niti: ಜೀವನದಲ್ಲಿ ಯಶಸ್ಸಿಗಾಗಿ ಈ ಕಹಿ ಗಿಡದ ಎರಡು ಹಣ್ಣುಗಳ ರುಚಿಯನ್ನು ನೀವು ಸವಿಯಲೇಬೇಕು title=
Chanakya Niti For Success

Chanakya Niti For Successful Life: ಆಚಾರ್ಯ ಚಾಣಕ್ಯ ಅವರು ಜೀವನದ ಪ್ರತಿಯೊಂದು ಸಂಗತಿಗಳ ಬಗ್ಗೆ ತಮ್ಮ ಅಮೂಲ್ಯವಾದ ನೀತಿಗಳನ್ನು ಬರೆದು ನೀತಿಗಳ ಖಜಾನೆಯನ್ನೇ ನಮಗಾಗಿ ಬಿಟ್ಟು ಹೋಗಿದ್ದಾರೆ. ಆ ಖಜಾನೆಯ ಹೆಸರು ನೀತಿ ಶಾಸ್ತ್ರ. ಮನುಷ್ಯನಿಗೆ ಪ್ರತಿ ಹೆಜ್ಜೆಯಲ್ಲೂ ನೆರವಾಗುವ ಚಾಣಕ್ಯರ ಅನುಭವಗಳ ಸಂಗ್ರಹ ಇದಾಗಿದೆ. ಅವುಗಳನ್ನು ಅನುಸರಿಸುವವರು ಜೀವನದ ಸವಾಲುಗಳನ್ನು ಉತ್ತಮ ರೀತಿಯಲ್ಲಿ ಎದುರಿಸಲು ಸಮರ್ಥರಾಗುತ್ತಾರೆ ಮತ್ತು ಕೆಚ್ಚೆದೆಯಿಂದ ಯಶಸ್ಸಿನ ದಾರಿಯನ್ನು ತುಳಿಯುತ್ತಾರೆ. ಸುಖೀ ಜೀವನ ಸಾಗಿಸುವುದು, ಜೀವನದಲ್ಲಿ ಯಶಸ್ಸನ್ನು ಪಡೆಯುವುದು ಮತ್ತು ಪ್ರತಿಕೂಲ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು ಎಂಬ ವಿಷಯದ ಮೇಲೆ ಚಾಣಕ್ಯರು ಬೆಳಕು ಚೆಲ್ಲಿದ್ದಾರೆ. ಈ ಬಗ್ಗೆ ಚಾಣಕ್ಯನ ಅಭಿಪ್ರಾಯವೇನು ಎಂಬುದನ್ನು ತಿಳಿಯೋಣ.

ಸಂತತಿ, ಸಂಗಾತಿ ಮತ್ತು ತೃಪ್ತಿ
ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ, ಯಾವ ವ್ಯಕ್ತಿಯ ಮಕ್ಕಳು ಆತನನ್ನು ಗೌರವಿಸುತ್ತಾರೋ, ಯಾವ ವ್ಯಕ್ತಿಯ ಮಡದಿ ಆತನ ಆಜ್ಞೆಯಂತೆ ನಡೆದುಕೊಳ್ಳುತ್ತಾಳೋ ಮತ್ತು ಯಾವ ವ್ಯಕ್ತಿ ತನ್ನ ಗಳಿಕೆಯಿಂದ ಸಂತುಷ್ಟನಾಗಿರುತ್ತಾನೋ ಅಂತಹ ಮನುಷ್ಯನಿಗೆ ಈ ಸಂಸಾರ ಸ್ವರ್ಗಕ್ಕೆ ಸಮಾನ ಎಂದು ಹೇಳಿದ್ದಾರೆ. 

ಈ ಕಹಿ ಮರದ ಎರಡು ಸಿಹಿ ಹಣ್ಣುಗಳ ರುಚಿ ಸವಿಯಲೇಬೇಕು
ನೀವು ಜೀವನದಲ್ಲಿ ಪ್ರಗತಿ ಹೊಂದಬೇಕಾದರೆ, ನೀವು ಖಂಡಿತವಾಗಿಯೂ ಸಂಸಾರ ಸ್ವರೂಪಿ ಕಹಿ ಮರದ ಎರಡು ಸಿಹಿ ಹಣ್ಣುಗಳ ರುಚಿ ಸವಿಯಬೇಕು, ಆಗ ಮಾತ್ರ ನೀವು ಸರಿಯಾದ ಮಾರ್ಗವನ್ನು ಕಂಡುಕೊಳ್ಳುತ್ತೀರಿ ಮತ್ತು ನೀವು ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ. ಚಾಣಕ್ಯರ ಪ್ರಕಾರ, ಈ ಸಂಸಾರ ಒಂದು ಕಹಿ ಮರವಾಗಿದ್ದು, ಅದರ ಎರಡು ಸಿಹಿ ಹಣ್ಣುಗಳು ಸಿಹಿ ಮಾತು ಮತ್ತು ಸಜ್ಜನರ ಸಹವಾಸವಾಗಿವೆ ಎಂದಿದ್ದಾರೆ. ವಾಣಿ ನಿಮ್ಮ ಕೆಲಸವನ್ನು ಕೆಡಿಸಲುಬಹುದು ಮತ್ತು ಉಳಿಸಲುಬಹುದು, ಆದರೆ ಸಜ್ಜನರ ಸಹವಾಸದಿಂದ ನಿಮ್ಮ ವ್ಯಕ್ತಿತ್ವವು ಸುಧಾರಿಸುತ್ತದೆ. ಒಬ್ಬ ಸಂಭಾವಿತ ವ್ಯಕ್ತಿ ನಿಮ್ಮನ್ನು ಎಂದಿಗೂ ತಪ್ಪು ದಾರಿಯಲ್ಲಿ ಹೋಗಲು ಬಿಡುವುದಿಲ್ಲ.

ಇದನ್ನೂ ಓದಿ-Astrology: ಅತ್ಯಂತ ಅಶುಭ ನಕ್ಷತ್ರ ಇದು, ಜನವರಿ ತಿಂಗಳಿನಲ್ಲಿ ಯಾವ-ಯಾವ ದಿನ ಈ ನಕ್ಷತ್ರ ಇರಲಿದೆ?

ಅದೃಷ್ಟವನ್ನು ಅವಲಂಬಿಸಬೇಡಿ
ಜೀವನದಲ್ಲಿ ಕಷ್ಟಪಡಲು ಹಿಂಜರಿಯುವ ಮತ್ತು ಅದೃಷ್ಟವನ್ನು ನಂಬಿ ಬದುಕುವ ವ್ಯಕ್ತಿಗೆ, ಪರಿಶ್ರಮಪಟ್ಟು ಪಡೆದುಕೊಳ್ಳುವವರು ಬಿಟ್ಟು ಹೋಗುವುದು ಮಾತ್ರ ಸಿಗುತ್ತದೆ ಎಂದು ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ.  ಆದರೆ ತಮ್ಮ ಸ್ವಂತ ಪರಿಶ್ರಮದ ಮೇಲೆ, ಪ್ರಾಮಾಣಿಕತೆ ಮತ್ತು ಸಮರ್ಪಣಾಭಾವದಿಂದ ತಮ್ಮ ಗುರಿಯತ್ತ ಸಾಗುವವರಿಗೆ ಅದೃಷ್ಟದ ಬೆಂಬಲ ಸಿಕ್ಕೆ ಸಿಗುತ್ತದೆ ಮತ್ತು ಜಾವನದಲ್ಲಿ ಅವರು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತಾರೆ.

ಇದನ್ನೂ ಓದಿ-Special Tea: ತೂಕ ಇಳಿಕೆಯಿಂದ ಹಿಡಿದು ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಈ ಟೀ ರಾಮಬಾಣ ಔಷಧಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News