Hanuman Jayanti 2021: ಈ ದಿನ ಹನುಮನಿಗೆ ತುಳಸಿ ಮಾಲೆ ಯಾಕೆ ಅರ್ಪಿಸಲಾಗುತ್ತದೆ?
Hanuman Jayanti 2021: ಈ ವರ್ಷ ಅಪ್ರಿಲ 27 ರಂದು ಅಂದರೆ ಮಂಗಳವಾರ ಹನುಮಾನ್ ಜಯಂತಿ ಆಚರಿಸಲಾಗುತ್ತಿದೆ. ಈ ದಿನ ಶ್ರೀ ಆಂಜನೇಯ ಸ್ವಾಮಿಗೆ ವಿಧಿ-ವಿಧಾನಗಳಿಂದ ಪೂಜೆ (Hanuma Jayanti Puja Vidhi)ಸಲ್ಲಿಸಲಾಗುತ್ತದೆ.
ನವದೆಹಲಿ: Hanuman Jayanti 2021: ಈ ವರ್ಷ ಅಪ್ರಿಲ 27 ರಂದು ಅಂದರೆ ಮಂಗಳವಾರ ಹನುಮಾನ್ ಜಯಂತಿ ಆಚರಿಸಲಾಗುತ್ತಿದೆ. ಈ ದಿನ ಶ್ರೀ ಆಂಜನೇಯ ಸ್ವಾಮಿಗೆ ವಿಧಿ-ವಿಧಾನಗಳಿಂದ ಪೂಜೆ (Hanuma Jayanti Puja Vidhi)ಸಲ್ಲಿಸಲಾಗುತ್ತದೆ. ಈ ದಿನ ಆಂಜನೇಯ ಸ್ವಾಮಿಯನ್ನು ಪ್ರಸನ್ನಗೊಳಿಸಲು ಭಕ್ತಾದಿಗಳು ವೃತ ಕೈಗೊಳ್ಳುತ್ತಾರೆ. ಧಾರ್ಮಿಕ ನಂಬಿಕೆಗಳ ಅನುಸಾರ ಶ್ರೀ ಆಂಜನೇಯನಿಗೆ ವಿಧಿ-ವಿಧಾನದಿಂದ ಪೂಜೆ ಸಲ್ಲಿಸುವುದರಿಂದ ಎಲ್ಲ ಕಷ್ಟಗಳಿಂದ ಮುಕ್ತಿ ಸಿಗುತ್ತದೆ ಮತ್ತು ಎಲ್ಲಾ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ ಎನ್ನಲಾಗುತ್ತದೆ. ಈ ದಿನ ಜನರು ದೇವಸ್ಥಾನಕ್ಕೆ ಭೇಟಿ (Hanuma Jayanti Shubh Muhurat) ನೀಡಿ ಹೋಮ-ಹವನ ಇತ್ಯಾದಿಗಳನ್ನು ಕೈಗೊಳ್ಳುತ್ತಾರೆ. ಆದರೆ ಈ ವರ್ಷ ಕೊರೊನಾ ವೈರಸ್ ನಿಂದ ಪಾರಾಗಲು ಮನೆಯಲ್ಲಿಯೇ ಇದ್ದುಕೊಂಡು ಶ್ರೀಆಂಜನೇಯನನ್ನು ಆರಾಧಿಸುವುದು ಒಳಿತು. ಹಾಗಾದರೆ ಬನ್ನಿ ಹನುಮ ಜಯಂತಿಯ ಉತ್ಸವದಂದು ಶ್ರೀ ಆಂಜನೇಯನಿಗೆ ಯಾವ ಭೋಗ ಅರ್ಪಿಸಬೇಕು, ಹೇಗೆ ಪೂಜೆ ಸಲ್ಲಿಸಬೇಕು ಹಾಗೂ ಆಂಜನೇಯನನ್ನು ಹೇಗೆ ಪ್ರಸನ್ನಗೊಳಿಸಬೇಕು ತಿಳಿದುಕೊಳ್ಳೋಣ.
ಹನುಮನಿಗೆ ನೈವೇದ್ಯದಲ್ಲಿ ಏನನ್ನು ಅರ್ಪಿಸಬೇಕು? (Hanuma Jayanti)
ಹನುಮ ಜಯಂತಿಯ ದಿನ ಶ್ರೀ ಆಂಜನೇಯನಿಗೆ ಬುಂದಿ ನೈವೇದ್ಯ ಅರ್ಪಿಸಲಾಗುತ್ತದೆ. ಈ ಬುಂದಿ ಕೆಂಪು ಬಣ್ಣದ್ದಾಗಿದ್ದರೆ ಇನ್ನೂ ಉತ್ತಮ. ಧಾರ್ಮಿಕ ನಂಬಿಕೆಗಳ ಅನುಸಾರ ಶ್ರೀ ಆಂಜನೇಯನಿಗೆ ಬುಂದಿ ಭೋಗ ಅರ್ಪಿಸುವುದರಿಂದ ಎಲ್ಲಾ ಗ್ರಹ ದೋಷಗಳಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ.
ಶ್ರೀ ಆಂಜನೇಯನಿಗೆ ಯಾವ ಹೂವನ್ನು ಅರ್ಪಿಸಬೇಕು?
ಹನುಮನಿಗೆ ಕೆಂಪು ಹಾಗೂ ಹಳದಿ ಬಣ್ಣ ತುಂಬಾ ಇಷ್ಟ ಎಂದು ಹೇಳಲಾಗುತ್ತದೆ. ಹೀಗಿರುವಾಗ ಆಂಜನೇಯನಿಗೆ ಕೆಂಪು ಅಥವಾ ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಿ. ಹನುಮ ಜಯಂತಿಯ ದಿನ ಶ್ರೀ ಆಂಜನೇಯನಿಗೆ (Lord Hanuman) ದಾಸವಾಳ, ಚೆಂಡು ಹೂವು, ಸೇವಂತಿ ಹೂವು, ಕಮಲದ ಹೂವು, ಗುಲಾಬಿ ಹೂವನ್ನು ಅರ್ಪಿಸಿ ಪೂಜೆ ಸಲ್ಲಿಸಬಹುದು.
ಇದನ್ನೂ ಓದಿ- Hanuman Jayanti 2021: ಅದ್ಭುತ ಫಲಗಳನ್ನು ಪಡೆಯಲು ಹನುಮಾನ್ ಜಯಂತಿಯಂದು ನಿಮ್ಮ ರಾಶಿಗೆ ಅನುಗುಣವಾಗಿ ಈ ಕೆಲಸ ಮಾಡಿ
ಶ್ರೀ ಆಂಜನೇಯನಿಗೆ ತುಳಸಿ ಮಾಲೆ ಏಕೆ ಅರ್ಪಿಸಬೇಕು?
ಹನುಮ ಜಯಂತಿಯ ದಿನ ಹನುಮನಿಗೆ ತುಳಸಿ ಮಾಲೆಯನ್ನು ಅರ್ಪಿಸಲಾಗುತ್ತದೆ. ಇದರಿಂದ ಸಂಕಷ್ಟದಿಂದ ಮುಕ್ತಿ ಸಿಗುತ್ತದೆ ಹಾಗೂ ಸುಖ-ಸಮೃದ್ಧಿಯ ದ್ವಾರಗಳು ತೆರೆದುಕೊಳ್ಳುತ್ತವೆ. ಮಂಗಳವಾರ ಹನುಮನಿಗೆ ತುಳಸಿ ಮಾಲೆ ಅರ್ಪಿಸುವುದರಿಂದ ಧನಲಾಭದ ಯೋಗಗಳು ನಿರ್ಮಾಣಗೊಳ್ಳುತ್ತವೆ.
ಇದನ್ನೂ ಓದಿ- Hanuman Jayanti 2021: ಹನುಮ ಜಯಂತಿಯ ದಿನ ಸುಂದರ ಕಾಂಡ ಏಕೆ ಪಠಿಸಬೇಕು?
ಹನುಮನನ್ನು ಪ್ರಸನ್ನಗೊಳಿಸಲು ಇಲ್ಲಿವೆ ಉಪಾಯಗಳು
>> ಹನುಮ ಜಯಂತಿಯ ದಿನ ಆಂಜನೇಯನ ಪೂಜೆಯ ಶ್ರೀ ರಾಮ ಹಾಗೂ ಮಾತೆ ಸೀತೆಗೂ ಕೂಡ ಪೂಜೆ ಸಲ್ಲಿಸಬೇಕು.
>> ಹನುಮ ಜಯಂತಿಯ ದಿನ ಶ್ರೀ ರಾಮನ ವಿಗ್ರಹದ ಮುಂದೆ ಕುಳಿತು ಹನುಮಾನ ಚಾಲಿಸಾ ಹಾಗೂ ಹನುಮನ ವಿಗ್ರಹದ ಮುಂದೆ ಕುಳಿತು ಶ್ರೀರಾಮ ರಕ್ಷಾ ಮಂತ್ರವನ್ನು ಪಠಿಸಬೇಕು.
>> ಬ್ರಹ್ಮಚರ್ಯ ವೃತವನ್ನು ಪಾಲಿಸಬೇಕು.
>> ಪೂಜೆಯ ವೇಳೆ ಹನುಮನಿಗೆ ಕೇಸರಿ ಬಣ್ಣದ ಸಿಂಧೂರ ಅರ್ಪಿಸಿ.
ಇದನ್ನೂ ಓದಿ- Amarnath Yatra: ಈ ದಿನದಿಂದ ಆರಂಭವಾಗಲಿದೆ ಅಮರನಾಥ ಯಾತ್ರೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.