Hanuman Jayanti 2021: ಅದ್ಭುತ ಫಲಗಳನ್ನು ಪಡೆಯಲು ಹನುಮಾನ್ ಜಯಂತಿಯಂದು ನಿಮ್ಮ ರಾಶಿಗೆ ಅನುಗುಣವಾಗಿ ಈ ಕೆಲಸ ಮಾಡಿ

Hanuman Jayanti 2021: ತನ್ನ ಭಕ್ತರ ರಕ್ಷಣೆಗಾಗಿ ಸದಾ ತತ್ಪರ ದೇವನೆಂದರೆ ಶ್ರೀ ಆಂಜನೇಯ ಎನ್ನಲಾಗುತ್ತದೆ. ಹೀಗಾಗಿ ಈ ಬಾರಿಯ ಹನುಮಾನ್ ಜಯಂತಿ 2021 ಅವಸರದಂದು ನಿಮ್ಮ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಈ ಕೆಲಸಗಳನ್ನು ಮಾಡಿ ಆಂಜನೇಯನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ.

Do These Remedies As Per Your Zodiac Sign: ಈ ಬಾರಿ ಏಪ್ರಿಲ್ 27 ಅಂದರೆ ಮಂಗಳವಾರ ಹನುಮಾನ್ ಜಯಂತಿ ಆಚರಿಸಲಾಗುತ್ತಿದೆ. ಧಾರ್ಮಿಕ ನಂಬಿಕೆಗಳ (Religion) ಪ್ರಕಾರ ತನ್ನ ಭಕ್ತಾದಿಗಳ ರಕ್ಷಣೆಗೆ ಸದಾ ತತ್ಪರನಾಗಿರುವ ದೇವ ಎಂದರೆ ಶ್ರೀ ಆಂಜನೇಯ ಎನ್ನಲಾಗುತ್ತದೆ. ಹೀಗಾಗಿ ಹನುಮ ಜಯಂತಿಯ ಅಂಗವಾಗಿ ಯಾವ ಯಾವ ಕೆಲಸಗಳನ್ನು ಮಾಡಿದರೆ ಶ್ರೀ ಆಂಜನೇಯ (Lord Hanuman) ಪ್ರಸನ್ನನಾಗುತ್ತಾನೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹನುಮಾನ್ ಜಯಂತಿಯ ದಿನ ಈ ಉಪಾಯಗಳನ್ನು ಅನುಸರಿಸುವುದರಿಂದ ನೀವೂ ಕೂಡ ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸಂಕಷ್ಟಗಳಿಂದ ಮುಕ್ತಿ ಪಡೆಯಬಹುದು.

 

ಇದನ್ನೂ ಓದಿ- Hanuman Jayanti 2021: ಈ ಬಾರಿಯ ಹನುಮ ಜಯಂತಿಯಂದು ನಿರ್ಮಾಣಗೊಳ್ಳುತ್ತಿವೆ ಈ ಎರಡು ಯೋಗಗಳು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /12

ರಾಶಿಗಳಿಗೆ (Astrology) ಅನುಗುಣವಾಗಿ ಈ ಮಹಾಉಪಾಯಗಳನ್ನು ಮಾಡಿ - 1. ಮೇಷ ರಾಶಿ: ಮಂಗಳ ಮೇಷ ರಾಶಿಯ ಅಧಿಪತಿ ಹೀಗಾಗಿ ಈ ಮಹಾಪರ್ವದ ಅಂಗವಾಗಿ ಮಂಗಳ ಗ್ರಹಕ್ಕೆ ಸಂಬಂಧಿಸಿದ ಕೇಸರಿ ಸಿಂಧೂರವನ್ನು ಶ್ರೀ ಆಂಜನೇಯನಿಗೆ ಅರ್ಪಿಸಿದರೆ ಅದು ನಿಮ್ಮ ಪಾಲಿಗೆ ತುಂಬಾ ಶುಭಕರ.

2 /12

2. ವೃಷಭ ರಾಶಿ: ಶುಕ್ರ ನಿಮ್ಮ ರಾಶಿಯ ಅಧಿಪತಿ. ಹನುಮಾನ್ ಜಯಂತಿಯ ದಿನ ನೀವೂ ಕೂಡ ನಿಯಮಿತವಾಗಿ ಹನುಮಾನ ಚಾಲಿಸಾ ಪಠಿಸಬೇಕು. ಇದರಿಂದ ಬಜರಂಗ್ ಬಳಿ ಆಶೀರ್ವಾದ ನಿಮಗೆ ಪ್ರಾಪ್ತಿಯಾಗಲಿದೆ.

3 /12

3. ಮಿಥುನ ರಾಶಿ: ಬುಧ ನಿಮ್ಮ ರಾಷ್ಯಾಧಿಪ. ಹೀಗಾಗಿ ಹನುಮ ಜಯಂತಿಯ ದಿನ ನೀವೂ ಮೂಡ ಶುದ್ಧ ಅಂತಃಕರಣ ಮತ್ತು ಶ್ರದ್ಧೆಯಿಂದ ಆಂಜನೇಯನನ್ನು ಆರಾಧಿಸಿ.

4 /12

4. ಕರ್ಕ ರಾಶಿ: ಚಂದ್ರ ನಿಮ್ಮ ರಾಶಿಯ ಅಧಿಪತಿ. ಹೀಗಾಗಿ ದೇವಾಧಿದೇವ ಶಿವನ ಜೊತೆಗೆ ನಿಮ್ಮ ಸಂಬಂಧ ಬರುತ್ತದೆ. ಹನುಮ ಜಯಂತಿಯ ದಿನ ನೀವು ಕುಟುಂಬ ಸಮೇತರಾಗಿ ಶಿವನಿಗೆ ರುದ್ರಾಭಿಷೇಕ ಮಾಡಿಸಿ, ಶ್ರೀ ಆಂಜನೇಯನಿಗೆ ಕೆಂಪು ವಸ್ತ್ರ ಅರ್ಪಿಸಿ ಆಶೀರ್ವಾದ ಪಡೆಯಿರಿ.

5 /12

5. ಸಿಂಹ ರಾಶಿ: ಶಾಸ್ತ್ರಗಳ ಪ್ರಕಾರ ಸೂರ್ಯ ದೇವನನ್ನು ಶ್ರೀ ಆಂಜನೇಯನ ಗುರು ಎನ್ನಲಾಗುತ್ತದೆ. ಸೂರ್ಯ ಸಿಂಹ ರಾಶಿಯ ಅಧಿಪತಿಯೂ ಹೌದು. ಹೀಗಾಗಿ ಈ ಪವಿತ್ರ ದಿನದ ಅಂಗವಾಗಿ ನೀವು ' ಶ್ರೀ ಆದಿತ್ಯ ಹೃದಯ ಸ್ತೋತ್ರ' ಪಠಿಸಿ. ಬಡವರಿಗೆ ಊಟ ಮಾಡಿಸಿ ನಿಮ್ಮ ಮನೋಕಾಮನೆಗಳನ್ನು ಪೂರ್ಣಗೊಳಿಸಿ.

6 /12

6. ಕನ್ಯಾ ರಾಶಿ: ಬುಧ ನಿಮ್ಮ ರಾಶಿಯ ಅಧಿಪತಿ. ಹನುಮ ಜಯಂತಿಯ ದಿನ ನೀವು 108 ಬಾರಿ ಹನುಮಾನ್ ಚಾಲಿಸಾ ಪಠಿಸಿದರೆ ನಿಮಗೆ ಶುಭ ಫಲಗಳು ಪ್ರಾಪ್ತಿಯಾಗಲಿವೆ.

7 /12

7. ತುಲಾ ರಾಶಿ: ಶುಕ್ರದೇವ ತುಲಾ ರಾಶಿಯ ಅಧಿಪತಿ. ಶುಭ ಫಲ ಪ್ರಾಪ್ತಿಗಾಗಿ ನೀವು ಶ್ರೀರಾಮಚರಿತ ಮಾನಸದ ಬಾಲ ಕಾಂಡ ಪಠಿಸಿ ನಿಮ್ಮೆಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

8 /12

8. ವೃಶ್ಚಿಕ ರಾಶಿ: ಮಂಗಳ ನಿಮ್ಮ ರಾಶಿಗೆ ಅಧಿಪತಿ. ಈ ವಿಶೇಷ ದಿನದಂದು ನೀವು ಶ್ರೀ ಆಂಜನೇಯನನ್ನು ಭಕ್ತಿ ಭಾವದಿಂದ ಆರಾಧಿಸಿ 108 ಬಾರಿ 'ಓಂ ಶ್ರೀ ಹನುಮತಯೇನಮಃ' ಮಂತ್ರವನ್ನು ಪಠಿಸಿ. ನಿಮಗೆ ಉತ್ತಮ ಫಲಪ್ರಾಪ್ತಿಯಾಗಲಿದೆ.

9 /12

9. ಧನು ರಾಶಿ: ಗುರು ಬೃಹಸ್ಪತಿಯನ್ನು ಈ ರಾಶಿಯ ಸ್ವಾಮಿ ಅಥವಾ ಅಧಿಪತಿ ಎನ್ನಲಾಗುತ್ತದೆ. ಹೀಗಾಗಿ ಹನುಮ ಜಯಂತಿಯ ದಿನ 'ಶ್ರೀ ಸೀತಾ ರಾಮ'  ನಾಮದ ಐದು ಮಾಲೆ ಮಂತ್ರ ಜಪಿಸಿ ಯಾವುದಾದರೊಂದು ದೇವಸ್ಥಾನಕ್ಕೆ ಹೋಗಿ ಶ್ರೀ ರಾಮಚರಿತಮಾನಸ ಗ್ರಂಥವನ್ನು ದಾನವಾಗಿ ನೀಡಿ. ಇದರಿಂದ ನಿಮಗೆ ಶ್ರೀ ಆಂಜನೇಯನ ಅಪಾರ ಕೃಪೆ ಪ್ರಾಪ್ತಿಯಾಗುತ್ತದೆ.

10 /12

10. ಮಕರ ರಾಶಿ: ಶ್ರೀ ಆಂಜನೇಯನಿಗೆ ಶನಿದೇವನ ಗುರು ಪದವಿ ಪ್ರಾಪ್ತಿಯಾಗಿದೆ. ಶನಿ ನಿಮ್ಮ ರಾಶಿಗೆ ಅಧಿಪತಿಯೂ ಹೌದು. ಹೀಗಾಗಿ ಈ ರಾಶಿ ಜಾತಕ ಹೊಂದಿದವರು ಶನಿದೇವನ ಪ್ರಕೋಪದಿಂದ ಪಾರಾಗಲು ಅಶ್ವತ್ಥ ಮರದ ಕೆಳಗಡೆ ಸಾಸಿವೆ ಎಣ್ಣೆ ದೀಪ ಉರಿಸಿ, ಶ್ರೀ ಹನುಮಾನ್ ಚಾಲಿಸಾ ಪಠಿಸಿ. ಇದರಿಂದ ಜೀವನದಲ್ಲಿ ಅನಕೂಲತೆ ಪ್ರಾಪ್ತಿಯಾಗುತ್ತದೆ.

11 /12

11. ಕುಂಭ ರಾಶಿ: ಕರ್ಮ ಫಲ ನೀಡುವ ಶನಿ ಈ ರಾಶಿಗೂ ಕೂಡ ಅಧಿಪತಿ. ಹೀಗಾಗಿ ಶುದ್ಧ ಮನಸ್ಸಿನಿಂದ ಭಕ್ತಿ ಭಾವದಿಂದ ನೀವು 'ಶ್ರೀ ರಾಮ್' ನಾಮದ ಮಾಲೆಯನ್ನು ಶ್ರೀಆಂಜನೇಯನ ಕೊರಳಿಗೆ ಹಾಕಿ ಪೂಜೆ ಸಲ್ಲಿಸಿದರೆ ನಿಮಗೆ ನಿಶ್ಚಿತವಾಗಿಯೂ ಶುಭ ಫಲಗಳು ಪ್ರಾಪ್ತಿಯಾಗಲಿವೆ. 

12 /12

12. ಮೀನ ರಾಶಿ: ಗುರು ಬೃಹಸ್ಪತಿ ಈ ರಾಶಿಯ ಅಧಿಪತಿಯೂ ಹೌದು, ಹನುಮಾನ್ ಜಯಂತಿಯ ದಿನ ನೀವೂ ಕೂಡ ಬಜರಂಗ ಬಳಿಗೆ ವಸ್ತ್ರ ಅರ್ಪಿಸಿ ' ಓಂ ಶ್ರೀ ಹನುಮತೆಯೇನಮಃ' ಮಂತ್ರದ ಒಂದು ಮಾಲೆ ಜಪಿಸಿ. ನಿಮಗೂ ಕೂಡ ಶುಭ ಫಲಗಳು ಪ್ರಾಪ್ತಿಯಾಗಲಿವೆ.