30 ವಯಸ್ಸು ದಾಟಿದ ಪುರುಷರು ಈ ಬಗ್ಗೆ ಗಮನಹರಿಸಿ: ಈ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
30 ವರ್ಷದ ನಂತರ ಪುರುಷರಲ್ಲಿ ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ. ಹೃದಯ ಸಂಬಂಧಿ ಕಾಯಿಲೆ ತಡೆಗಟ್ಟಲು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ನವದೆಹಲಿ: ಬದಲಾದ ಜೀವನಶೈಲಿ(Wrong Lifestyle) ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ ಪುರುಷರಲ್ಲಿ 30 ವರ್ಷ ವಯಸ್ಸಿನೊಳಗೆ ಅನೇಕ ರೋಗಗಳ ಅಪಾಯವು ಹೆಚ್ಚಾಗುತ್ತದೆ. ಇದಕ್ಕಾಗಿ ನೀವು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯ.
ಮೂಳೆಗಳು ದುರ್ಬಲವಾಗುತ್ತವೆ
30ನೇ ವಯಸ್ಸಿನಲ್ಲಿ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಮೂಳೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದು ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಪ್ರತಿದಿನ 1 ಲೋಟ ಹಾಲು ಕುಡಿಯಿರಿ.
ಇದನ್ನೂ ಓದಿ: ನೀವು ಧೂಮಪಾನ ಮಾಡುತ್ತಿದ್ದರೆ ಜಾಗರೂಕರಾಗಿರಿ!: ಇದು ಮಾರಣಾಂತಿಕ ಕಾಯಿಲೆಯಾಗಿರಬಹುದು
ಹೃದಯ ರೋಗ
30 ವರ್ಷದ ನಂತರ ಪುರುಷರಲ್ಲಿ ಹೃದ್ರೋಗದ ಅಪಾಯ(Heart Problems)ಹೆಚ್ಚಾಗುತ್ತದೆ. ಆಹಾರ ಪದ್ಧತಿಯಿಂದಾಗಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಬಹುದು. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಬೊಜ್ಜು
ನೀವು ನಿಯಮಿತವಾಗಿ ವ್ಯಾಯಾಮ ಮಾಡದಿದ್ದರೆ ಚಯಾಪಚಯ ನಿಧಾನವಾಗುತ್ತದೆ ಮತ್ತು ಇದು ಬೊಜ್ಜುಗೆ ಕಾರಣವಾಗಬಹುದು. ಇದನ್ನು ತಪ್ಪಿಸಲು ಆಹಾರ ಮತ್ತು ಜೀವನಶೈಲಿಗೆ ಗಮನ ಕೊಡಬೇಕು.
ಇದನ್ನೂ ಓದಿ: Pista Benefits: ಚಳಿಗಾಲದಲ್ಲಿ ನಿತ್ಯ ಪಿಜ್ಜಾ ಸೇವನೆಯ 5 ಅದ್ಭುತ ಪ್ರಯೋಜನಗಳು ಇಲ್ಲಿವೆ
ಬೋಳು ಸಮಸ್ಯೆ
30 ವರ್ಷದ ನಂತರ ಪುರುಷರಲ್ಲಿ ಬೋಳು ತಲೆಯ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. ಇದರ ಹಿಂದೆ ನಿಮ್ಮ ಆಹಾರ ಮತ್ತು ಜೀವನಶೈಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್ ಭರಿತ ಆಹಾರಗಳನ್ನು ಸೇವಿಸಿ. ಪ್ರತಿನಿತ್ಯ ವ್ಯಾಯಾಮ ಮಾಡಿ, ಒತ್ತಡ ಕಡಿಮೆ ಮಾಡಿ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವ ಅಭ್ಯಾಸ ರೂಡಿಸಿಕೊಳ್ಳಿ.
ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ
30 ವರ್ಷ ವಯಸ್ಸಿನ ನಂತರ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್(Prostate Cancer) ಅಪಾಯವು ಹೆಚ್ಚಾಗುತ್ತದೆ. ಈ ಕಾರಣದಿಂದ ಆಗಾಗ ಶೌಚಾಲಯಕ್ಕೆ ಹೋಗುವುದು ಮತ್ತು ರಾತ್ರಿಯಲ್ಲಿ ಉರಿಯುವ ಮೂತ್ರ ವಿಸರ್ಜನೆಯ ಸಮಸ್ಯೆ ಕಂಡುಬರಬಹುದು. ಈ ರೋಗಲಕ್ಷಣಗಳನ್ನು ಗಮನಿಸಿ ಮತ್ತು ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.