ನೀವು ಧೂಮಪಾನ ಮಾಡುತ್ತಿದ್ದರೆ ಜಾಗರೂಕರಾಗಿರಿ!: ಇದು ಮಾರಣಾಂತಿಕ ಕಾಯಿಲೆಯಾಗಿರಬಹುದು

ಕನಿಷ್ಠ 10 ಪ್ರತಿಶತ ಮಹಿಳೆಯರು ಮತ್ತು 20 ಪ್ರತಿಶತ ಪುರುಷರು ಧೂಮಪಾನ ಮಾಡುವವರು ಹೃದಯಾಘಾತ ಅಥವಾ ಪಾರ್ಶ್ವವಾಯು ಮುಂತಾದ ಪರಿಸ್ಥಿತಿಗಳಿಂದ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ.     

Written by - Puttaraj K Alur | Last Updated : Nov 22, 2021, 11:15 AM IST
  • ಧೂಮಪಾನದಿಂದ ಹೃದಯಾಘಾತ, ಪಾರ್ಶ್ವವಾಯು ಸೇರಿ ಅನೇಕ ಕಾಯಿಲೆಗಳಿಗೆ ತುತ್ತಾಗಬಹುದು
  • ಶೇ.10ರಷ್ಟು ಮಹಿಳೆಯರು ಮತ್ತು ಶೇ.20ರಷ್ಟು ಪುರುಷರು ಧೂಮಪಾನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ
  • ಧೂಮಪಾನದಿಂದ ಕೆಲವೊಮ್ಮೆ ಯಾವುದೇ ಸೂಚನೆಯಿಲ್ಲದೆ ಹಠಾತ್ ಸಾವು ಸಂಭವಿಸಬಹುದು
ನೀವು ಧೂಮಪಾನ ಮಾಡುತ್ತಿದ್ದರೆ ಜಾಗರೂಕರಾಗಿರಿ!: ಇದು ಮಾರಣಾಂತಿಕ ಕಾಯಿಲೆಯಾಗಿರಬಹುದು title=
ಧೂಮಪಾನದಿಂದ ಹಠಾತ್ ಸಾವು ಸಂಭವಿಸುತ್ತದೆ

ನವದೆಹಲಿ: ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇತ್ತೀಚಿನ ಸಂಶೋಧನಾ ವರದಿಯ ಪ್ರಕಾರ ಧೂಮಪಾನ(Smoking) ಮಾಡುವ ಸಾವಿರಾರು ಜನರು ತಮಗೇ ತಿಳಿದಿರದ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರಂತೆ. ವಾಸ್ತವವಾಗಿ ಧೂಮಪಾನವು ಹೃದ್ರೋಗ ಸೇರಿದಂತೆ ಅನೇಕ ಮಾರಣಾಂತಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೃದಯ ಕಾಯಿಲೆಗಳಲ್ಲಿ(CVD), ಹೃದಯ ಅಥವಾ ರಕ್ತನಾಳಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಧೂಮಪಾನವು ನಿಮ್ಮ ಆರೋಗ್ಯದೊಂದಿಗೆ ಹೇಗೆ ಆಟವಾಡುತ್ತದೆ ಎಂಬುದರ ಬಗ್ಗೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.

ಸಂಶೋಧನೆ ಏನು ಹೇಳುತ್ತದೆ?

ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕನಿಷ್ಠ 10 ಪ್ರತಿಶತ ಮಹಿಳೆಯರು ಮತ್ತು 20 ಪ್ರತಿಶತ ಪುರುಷರು ಧೂಮಪಾನ ಮಾಡುವವರು ಹೃದಯಾಘಾತ(Heart Disease) ಅಥವಾ ಪಾರ್ಶ್ವವಾಯು ಮುಂತಾದ ಪರಿಸ್ಥಿತಿಗಳಿಂದ ಅಕಾಲಿಕ ಮರಣವನ್ನು ಅನುಭವಿಸುತ್ತಾರೆ. ಈ ಸಂಶೋಧನೆಯ ಸಂದರ್ಭದಲ್ಲಿ ಸಂಶೋಧಕರು ಕಂಡುಕೊಂಡ ಪ್ರಕಾರ, ಕೆಲವರಿಗೆ ಹೃದ್ರೋಗವಿದೆ ಎಂದು ತಿಳಿದಿರುತ್ತದೆ. ಆದರೆ ಹಲವರಿಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ಮರಣದ ನಂತರವೇ ಇಂತಹ ಜನರರಿಗೆ ಧೂಮಪಾನದಿಂದ ಹೃದ್ರೋಗವಿತ್ತು ಎಂಬುದು ತಿಳಿದುಬಂಇದೆ.

ಇದನ್ನೂ ಓದಿ: Side Effects Of Eating More Trumeric:ಅಡುಗೆಯಲ್ಲಿ ಅರಿಶಿಣ ಬಳಕೆಯ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ದಿದ್ರೆ ಲಾಭದ ಬದಲು ಹಾನಿಯೇ ಹೆಚ್ಚು   

ಈ ವಯಸ್ಸಿನಲ್ಲಿಯೂ ಸಾವಿಗೆ ಕಾರಣವಾಗಬಹುದು

60 ವರ್ಷಕ್ಕಿಂತ ಮೇಲ್ಪಟ್ಟವರ ಪೈಕಿ  ಶೇ.4.9ರಷ್ಟು ಮಹಿಳೆಯರು ಮತ್ತು ಶೇ.6.7ರಷ್ಟು ಪುರುಷರು ಧೂಮಪಾನದಿಂದ ಹೃದ್ರೋಗ(Smoking Harm) ಮತ್ತು ಮರಣಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಸಂಶೋಧನೆಯಿಂದ ಕಂಡುಬಂದಿದೆ. ಇದೇ ಸಮಯದಲ್ಲಿ 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಶೇ.4.5ರಷ್ಟು ಮತ್ತು ಪುರುಷರಲ್ಲಿ ಶೇ.4.8ರಷ್ಟು ಅಕಾಲಿಕವಾಗಿ ಸಾವನ್ನಪ್ಪುವ ಸಾಧ್ಯತೆಯಿದೆ. ಇದೇ ರೀತಿ ತಮ್ಮ 20 ಮತ್ತು 30ನೇ ವಯಸ್ಸಿನಲ್ಲಿ ಶೇ.1.7ರಷ್ಟು ಯುವಕರು ಧೂಮಪಾನದ ಕಾರಣದಿಂದ ಹಠಾತ್ ಅಥವಾ ವಿವರಿಸಲಾಗದ ಹೃದಯಾಘಾತದ ಸಾವಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಧೂಮಪಾನ ಮಾಡದವರ ಸಂಖ್ಯೆ ಕಡಿಮೆ ಇತ್ತು

2019 ರಲ್ಲಿ ಇಂಗ್ಲೆಂಡಿನಲ್ಲಿ ಸುಮಾರು 7 ಮಿಲಿಯನ್ ಜನರು ಧೂಮಪಾನ(Smoking Side Effects) ಮಾಡಿದ್ದಾರೆ. ಇದು ಸಾವಿರಾರು ಜನರು ಹಠಾತ್ ಸಾವಿಗೆ ಕಾರಣವಾಗಿದೆ. ಪ್ರತಿವರ್ಷ ಸುಮಾರು 78,000 ಜನರು ಧೂಮಪಾನ-ಸಂಬಂಧಿತ ಕಾಯಿಲೆಗಳಿಂದ ಮೃತಪಡುತ್ತಾರೆಂದು ಅಂಕಿಅಂಶಗಳು ತೋರಿಸುತ್ತವೆ. ಧೂಮಪಾನ ಮಾಡುವವರಿಗೆ ಹೃದ್ರೋಗ ಮತ್ತು ಅದರಿಂದ ಸಾವಿನ ಅಪಾಯ ಹೆಚ್ಚು ಎಂದು ಸಂಶೋಧನೆಯು ತೀರ್ಮಾನಕ್ಕೆ ಬಂದಿದೆ.

ಇದನ್ನೂ ಓದಿ: Turmeric: ಚಳಿಗಾಲದಲ್ಲಿ ಅರಿಶಿನ ಸೇವನೆ, ಕ್ಯಾನ್ಸರ್ ನಿಂದ ಫ್ಲೂವರೆಗೆ ಸಿಗಲಿದೆ ಪರಿಹಾರ

ಕೆಲವೊಮ್ಮೆ ರೋಗಲಕ್ಷಣಗಳು(Disease Cause Of Smoking) ಸಾವಿನ ಮೊದಲು ಕಾಣಿಸಿಕೊಳ್ಳಬಹುದು. ಆದರೆ ಕೆಲವೊಮ್ಮೆ ಯಾವುದೇ ಸೂಚನೆಯಿಲ್ಲದೆ ಹಠಾತ್ ಸಾವು ಸಂಭವಿಸಬಹುದು. ಈ ರೋಗಲಕ್ಷಣಗಳು ಎದೆ ನೋವು, ಉಸಿರಾಟದ ತೊಂದರೆ, ಮೂರ್ಛೆ ಅಥವಾ ವಾಕರಿಕೆ, ಕಾಲುಗಳಲ್ಲಿ ಮರಗಟ್ಟುವಿಕೆ, ಚರ್ಮದ ಬಣ್ಣದಲ್ಲಿ ಬದಲಾವಣೆ ಮತ್ತು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯನ್ನು ಒಳಗೊಂಡಿರಬಹುದು ಎಂದು ಸಂಶೋಧನೆಯು ಕಂಡುಕೊಂಡಿದೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News