Health Tips: ಜಾಮೂನ್ ಸೇವನೆಯ ಕುರಿತಾದ ಈ ಸಂಗತಿ ನಿಮಗೆ ತಿಳಿದಿದೆಯೇ?
Health Tips:ಜಾಮೂನ್ ಸೇವನೆಯ ಬಳಿಕ ನಾವು ನೀರನ್ನು ಕುಡಿಯಬಹುದೇ? ಈ ಪ್ರಶ್ನೆ ಏಕೆ ಉದ್ಭವಿಸುತ್ತದೆ ಎಂದರೆ, ಕೆಲ ಹಣ್ಣುಗಳನ್ನು ತಿಂಗ ಬಳಿಕ ನೀರನ್ನು ಕುಡಿಯುವುದು ಸರಿಯಲ್ಲ ಎಂದು ಹೇಳಲಾಗುತ್ತದೆ. ಹೀಗಾಗಿ ಈ ವಿಷಯ ತಿಳಿಯುವುದು ತುಂಬಾ ಮುಖ್ಯವಾಗಿದೆ.
Health Care Tips: ಕೆಲ ಹಣ್ಣುಗಳನ್ನು ಸೇವಿಸಿದ ಬಳಿಕ ನೀರನ್ನು ಕುಡಿಯಬಾರದು ಎಂದು ಹೇಳಲಾಗುತದೆ, ಇಲ್ಲದಿದ್ದರೆ ಅದರಿಂದ ನಮ್ಮ ಆರೋಗ್ಯವು ಹದಗೆಡುವ ಸಾಧ್ಯತೆ ಇರುತ್ತದೆ. ಜಾಮೂನ್ ವಿಷಯದಲ್ಲೂ ಹೀಗೆಯೇ ಇದೆ. ಬೇಸಿಗೆಯಲ್ಲಿ ಜಾಮೂನ್ ಹಣ್ಣುಗಳು ಕಂಡುಬರುತ್ತವೆ ಮತ್ತು ಹೆಚ್ಚಿನ ಜನರು ಅವುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ.. ಅಷ್ಟು ಸರಿ, ಆದರೆ ಜಾಮೂನ್ ತಿಂದ ತಕ್ಷಣ ನೀರು ಕುಡಿದರೆ ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಹಾಗಾದರೆ ಇದಕ್ಕೆ ಸಂಬಂಧಿಸಿದ ಸತ್ಯ ಸಂಗತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಜಾಮೂನ್ ತಿಂದು ನೀರನ್ನು ಕುಡಿಯಬಹುದೇ?
ಜಾಮೂನ್ ತಿಂದ ನಂತರ ನೀರು ಕುಡಿಯಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀರು ಕುಡಿದರೆ ಆರೋಗ್ಯ ಕೆಡುತ್ತದೆ ಎಂದು ಕೆಲವರು ಭಾವಿಸಿದರೆ, ಇನ್ನು ಕೆಲವರು ಹಾಗಾಗುವುದಿಲ್ಲ ಎನ್ನುತ್ತಾರೆ. ಆದರೆ ಜಾಮೂನ್ ತಿಂದ ತಕ್ಷಣ ನೀರು ಕುಡಿದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂದು ತಜ್ಞರು ಹೇಳುತ್ತಾರೆ. ಇದು ಅತಿಸಾರ, ಅಜೀರ್ಣ ಮತ್ತು ಗ್ಯಾಸ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ-Diabetes ಕಾಯಿಲೆಗೆ ಪರಿಣಾಮಕಾರಿ ಮದ್ದು ಈ ಎಣ್ಣೆಯುಕ್ತ ಹಣ್ಣು!
ಜಾಮೂನ್ ಹಣ್ಣುಗಳಿಂದ ದೇಹಕ್ಕೆ ಯಾವ ಯಾವ ಪ್ರಯೋಜನಗಳಾಗುತ್ತವೆ?
>> ಜಾಮೂನ್ ಹಣ್ಣುಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ನಾವು ಕಳೆದುಕೊಳ್ಳಬಹುದು. ಅಂದರೆ, ತೂಕ ಇಳಿಸಿಕೊಳ್ಳಲು ಬಯಸುವವರು ಈ ಹಣ್ಣನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
>> ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಜಾಮೂನ್ ತುಂಬಾ ಪ್ರಯೋಜನಕಾರಿಯಾಗಿದೆ. ಅಂದರೆ, ರಕ್ತದೊತ್ತಡ ನಿಯಂತ್ರಣದಲ್ಲಿಲ್ಲದ ಜನರು ಇದನ್ನು ತಮ್ಮ ಆಹಾರದಲ್ಲಿ ಖಂಡಿತವಾಗಿ ಸೇರಿಸಿಕೊಳ್ಳಬೇಕು.
>> ಇದು ಮಧುಮೇಹ ರೋಗಿಗಳಿಗೆ ಈ ಹಣ್ಣು ವರದಾನಕ್ಕಿಂತ ಕಡಿಮೆಯಿಲ್ಲ. ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.
ಇದನ್ನೂ ಓದಿ-WhatsApp ಮೂಲಕ ಮೆಟ್ರೊ ಟಿಕೆಟ್ ಬುಕಿಂಗ್, ಕೌಂಟರ್ ಬಳಿ ಸರದಿಯಲ್ಲಿ ನಿಲ್ಲಬೇಕಾಗಿಲ್ಲ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.