Health Tips: ಊಟದ ನಂತರ ವಾಕಿಂಗ್ ಮಾಡುವುದು ಎಷ್ಟು ಮುಖ್ಯ?
ಊಟದ ನಂತರ ನಡೆಯುವುದರ ಪ್ರಯೋಜನಗಳು: ಆಹಾರ ಸೇವಿಸಿದ ನಂತರ ನಡೆಯುವುದು ತುಂಬಾ ಸಾಮಾನ್ಯ ಅಭ್ಯಾಸವಾಗಿದೆ. ಆದರೆ, ಇದು ನಿಮಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿರಿ.
ನವದೆಹಲಿ: ಮಧ್ಯಾಹ್ನ ಅಥವಾ ರಾತ್ರಿಯ ಊಟದ ನಂತರ ನಾವು ಲಘುವಾಗಿ ನಡೆಯಲು ಇಷ್ಟಪಡುತ್ತೇವೆ. ಇದು ಜೀರ್ಣಕ್ರಿಯೆ ಅಥವಾ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆಹಾರ ಸೇವಿಸಿದ ಬಳಿಕ ವಾಕಿಂಗ್ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಊಟದ ನಂತರ ವಾಕ್ ಮಾಡುವುದರ 6 ಪ್ರಯೋಜನಗಳು
1. ಗ್ಲೂಕೋಸ್ ಮಟ್ಟ ನಿಯಂತ್ರಣ
ಒಬ್ಬ ವ್ಯಕ್ತಿಯು ಆಹಾರ ಸೇವಿಸಿದ ನಂತರ ನಡೆದಾಡಿದರೆ ಆತನ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು.
2. ಬೊಜ್ಜು ಕಡಿಮೆಯಾಗುತ್ತದೆ
ದೇಹದ ಹೆಚ್ಚುವರಿ ಕೊಬ್ಬು ಅಥವಾ ಬೊಜ್ಜಿನಿಂದ ತೊಂದರೆ ಇರುವವರು ಆಹಾರ ಸೇವಿಸಿದ ನಂತರ ಅರ್ಧ ಅಥವಾ 1 ಗಂಟೆ ನಡೆಯಬೇಕು. ಈ ರೀತಿ ಮಾಡುವುದರಿಂದ ದೇಹದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ: Benefits Of Raw Papaya: ಕಚ್ಚಾ ಪಪ್ಪಾಯಿಯ ಈ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯೇ?
3. ನಿದ್ರಾಹೀನತೆಯಿಂದ ಪರಿಹಾರ
ನಿದ್ರಾಹೀನತೆಯ ಸಮಸ್ಯೆ ಇರುವವರು ಆಹಾರ ಸೇವಿಸಿದ ನಂತರ ವಾಕ್ ಮಾಡಿದರೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು ಮತ್ತು ನಿದ್ರಾಹೀನತೆಯ ಸಮಸ್ಯೆ ಸಹ ನಿವಾರಣೆಯಾಗುತ್ತದೆ.
4. ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ
ಆಹಾರ ಸೇವಿಸಿದ ನಂತರ ವಾಕ್ ಮಾಡುವುದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದು ಚಯಾಪಚಯವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
5. ಜೀರ್ಣಕ್ರಿಯೆ ಚೆನ್ನಾಗಿರುತ್ತದೆ
ಆಹಾರ ಸೇವಿಸಿದ ನಂತರ ವಾಕ್ ಮಾಡುವುದರಿಂದ ಜೀರ್ಣಾಂಗವನ್ನು ಆರೋಗ್ಯವಾಗಿಡಬಹುದು. ಇದರ ಹೊರತಾಗಿ ದೇಹದಲ್ಲಿನ ಕಲ್ಮಶವನ್ನು ಹೊರಹಾಕಲು ಸಹ ಸುಲಭವಾಗುತ್ತದೆ.
6. ಶಕ್ತಿ ಸಿಗುತ್ತದೆ
ಆಹಾರ ಸೇವಿಸಿದ ನಂತರ ವಾಕ್ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ. ಅಲ್ಲದೆ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಉತ್ತಮವಾಗುತ್ತದೆ.
ಇದನ್ನೂ ಓದಿ: ದೇಹದಲ್ಲಿ ಹೆಚ್ಚಾದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಈ 4 ಡ್ರೈಫ್ರೂಟ್ ಗಳನ್ನು ಸೇವಿಸಿ
(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ಕಡ್ಡಾಯವಾಗಿ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.