How to download and send WhatsApp Christmas 2020 stickers: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಬ್ಬದಲ್ಲಿ ಜನರು ಸಾಮಾನ್ಯವಾಗಿ ಉಡುಗೊರೆಗಳು ಮತ್ತು ಕಾರ್ಡ್‌ಗಳನ್ನು ನೀಡುವ ಮತ್ತು ಸ್ವೀಕರಿಸುವ ಮೂಲಕ ಕ್ರಿಸ್‌ಮಸ್ ಆಚರಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಗ್ರೀಟಿಂಗ್  ಕಾರ್ಡ್‌ಗಳು ಅಪರೂಪದ ವಿಷಯವಾಗಿ ಮಾರ್ಪಟ್ಟಿವೆ ಮತ್ತು ತಂತ್ರಜ್ಞಾನದ ಮುನ್ನಡೆಯೊಂದಿಗೆ ಬಹುತೇಕ ಬಳಕೆಯಲ್ಲಿಲ್ಲ. 


COMMERCIAL BREAK
SCROLL TO CONTINUE READING

ಇನ್ನು ತಂತ್ರಜ್ಞಾನದ ಬಗ್ಗೆ ಮಾತನಾಡುವುದಾದರೆ ಈಗ ನೀವು ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ನೆಚ್ಚಿನ ಮತ್ತವರು ಬಯಸುವಂತಹ ರೀತಿಯಲ್ಲಿ ಸ್ಟಿಕ್ಕರ್‌ಗಳನ್ನು ನೀಡಲು ಚಿಂತಿಸಬೇಕಾಗಿಲ್ಲ. ಹೊಸ ಅಪ್ಲಿಕೇಶನ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳೊಂದಿಗೆ ಇದು ವೇಗವಾಗಿ ಮತ್ತು ಹೆಚ್ಚು ಸೃಜನಶೀಲವಾಗಿದೆ. ವಾಟ್ಸಾಪ್ (WhatsApp) ಅಂತಹ ಜನಪ್ರಿಯ ಮೆಸೆಂಜರ್ ಅಪ್ಲಿಕೇಶನ್ ಆಗಿದ್ದು ಈ ದಿನಗಳಲ್ಲಿ ಅದು ನಮ್ಮ ಸ್ನೇಹಿತರು, ಕುಟುಂಬದವರೊಂದಿಗೆ ಸಂಪರ್ಕ ಬೆಸೆಯುವ ಬಹುಮುಖ್ಯ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಯಾವುದೇ ಹಬ್ಬ ಅಥವಾ ವಿಶೇಷ ದಿನಗಳ ಶುಭಾಶಯ ತಿಳಿಸಲು ವಾಟ್ಸಾಪ್ ಸ್ಟಿಕ್ಕರ್‌ಗಳು ವಿಶೇಷವಾಗಿರುತ್ತವೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಕ್ರಿಸ್‌ಮಸ್‌ನಲ್ಲಿ ವಾಟ್ಸಾಪ್ ಸ್ಟಿಕ್ಕರ್‌ಗಳೊಂದಿಗೆ ಶುಭ ಹಾರೈಸುವುದಕ್ಕಿಂತ ಉತ್ತಮವಾದ ಬೇರೆ ಸುಲಭ ಆಯ್ಕೆಯಿಲ್ಲ ಎಂದರೆ ತಪ್ಪಾಗಲಾರದು.


ಕೋವಿಡ್ 19 ರ ಈ ಕಷ್ಟದ ಸಮಯದಲ್ಲಿ ಸಾಮಾಜಿಕ ದೂರವನ್ನು ಅನುಸರಿಸುವ ಮೂಲಕ  ಸಾಂಕ್ರಾಮಿಕ ಸವಾಲುಗಳು ಮತ್ತು ಪ್ರಾಮುಖ್ಯತೆಯೊಂದಿಗೆ ನಮ್ಮ ಪ್ರೀತಿ ಪಾತ್ರರೊಂದಿಗೆ ಸಂಪರ್ಕದಲ್ಲಿರಲು ವಾಟ್ಸಾಪ್ ಸ್ಟಿಕ್ಕರ್‌ಗಳು (WhatsApp stickers) ಸಹ ಪರಿಪೂರ್ಣ ಆಯ್ಕೆಯಾಗಿದೆ ಎಂದು ತೋರುತ್ತದೆ. ಆದ್ದರಿಂದ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ವಾಟ್ಸಾಪ್ ಮೂಲಕ ಆನ್‌ಲೈನ್ ಚೀರ್ (whatsApp Christmas stickers free online) ಅನ್ನು ಕಳುಹಿಸುವ ಮುಖಾಂತರ ಹಬ್ಬವನ್ನು ಆನಂದಿಸಬಹುದು.


ಇದನ್ನೂ ಓದಿ: ಎಲ್ಲಿಂದ ಬಂದ ಸಂತಾ ಕ್ಲಾಸ್? ಕ್ರಿಸ್ಮಸ್ ಟ್ರೀ ಮಹತ್ವವೇನು? ಇಲ್ಲಿದೆ ರೋಚಕ ಕಥೆ


ಕ್ರಿಸ್‌ಮಸ್ 2020: ಕ್ರಿಸ್‌ಮಸ್ ವಿಷಯದ ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ (WhatsApp Christmas 2020 stickers download) ಮಾಡಲು ಮತ್ತು ಹಂಚಿಕೊಳ್ಳಲು ಹಂತವಾರು ಮಾರ್ಗದರ್ಶಿ
ಹಂತ 1: ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್ ತೆರೆಯಿರಿ
ಹಂತ 2: ನೀವು ಕ್ರಿಸ್ಮಸ್ (Christmas) ಸ್ಟಿಕ್ಕರ್‌ಗಳನ್ನು ಕಳುಹಿಸಲು ಬಯಸುವ ಸಂಪರ್ಕ ಅಥವಾ ಗುಂಪನ್ನು ಆರಿಸಿ
ಹಂತ 3: ಎಮೋಜಿ ವಿಭಾಗದಲ್ಲಿ ‘ಸ್ಟಿಕ್ಕರ್‌ಗಳು’ ಟ್ಯಾಬ್ ತೆರೆಯಿರಿ
ಹಂತ 4: ಸ್ಟಿಕ್ಕರ್‌ಗಳ ವಿಂಡೋದ ಮೇಲಿನ ಬಲ ಮೂಲೆಯಲ್ಲಿರುವ ‘+’ ಬಟನ್ ಕ್ಲಿಕ್ ಮಾಡಿ
ಹಂತ 5: ನಿಮ್ಮ ಆಯ್ಕೆಯ ಸ್ಟಿಕ್ಕರ್ ಪ್ಯಾಕ್‌ಗಳನ್ನು ತೆಗೆದುಕೊಳ್ಳಲು ಪಟ್ಟಿಯ ಮೂಲಕ ಬ್ರೌಸ್ ಮಾಡಿ. ನೀವು ಪಟ್ಟಿಯಲ್ಲಿ ಆಸಕ್ತಿದಾಯಕ ಏನನ್ನೂ ಕಾಣದಿದ್ದರೆ ನೀವು ಪಟ್ಟಿಯ ಕೊನೆಯಲ್ಲಿರುವ ‘ಇನ್ನಷ್ಟು ಸ್ಟಿಕ್ಕರ್‌ಗಳನ್ನು ಪಡೆಯಿರಿ’ ಆಯ್ಕೆಯನ್ನು ಕ್ಲಿಕ್ ಮಾಡಬಹುದು.
ಹಂತ 6: ಹಲವಾರು ವಾಟ್ಸಾಪ್ ಸ್ಟಿಕ್ಕರ್ ಅಪ್ಲಿಕೇಶನ್‌ಗಳನ್ನು (stickers download merry christmas ) ತೋರಿಸಲಾಗುವ ಗೂಗಲ್ ಪ್ಲೇ ಸ್ಟೋರ್‌ಗೆ (Google Play Store) ಪ್ರವೇಶಿಸಲು ನಿಮ್ಮನ್ನು ಕೇಳಲಾಗುತ್ತದೆ
ಹಂತ 7: ಇಲ್ಲಿ ಉತ್ತಮ ಫಲಿತಾಂಶಗಳನ್ನು ಕಂಡುಹಿಡಿಯಲು ನೀವು ನಿರ್ದಿಷ್ಟ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಬಹುದು ಅಥವಾ ನಿಮ್ಮ ಹುಡುಕಾಟವನ್ನು ಕಸ್ಟಮೈಸ್ ಮಾಡಬಹುದು.
ಹಂತ 8: ನೀವು ನಿರ್ದಿಷ್ಟ ಸ್ಟಿಕ್ಕರ್ ಅಪ್ಲಿಕೇಶನ್ ಅನ್ನು ನೋಡಿದ ನಂತರ, ಅದನ್ನು ನಿಮ್ಮ ಸಾಧನದಲ್ಲಿ ಡೌನ್‌ಲೋಡ್ ಮಾಡಿ (whatsApp Christmas stickers free online) ಮತ್ತು ಸ್ಥಾಪಿಸಿ
ಹಂತ 9: ವಾಟ್ಸಾಪ್‌ಗೆ ಹಿಂತಿರುಗಿ ಚಾಟ್ ವಿಂಡೋ ತೆರೆಯಿರಿ ಮತ್ತು ಡೌನ್‌ಲೋಡ್ ಮಾಡಿದ ಸ್ಟಿಕ್ಕರ್‌ಗಳನ್ನು ಕಳುಹಿಸಿ.


ಇದನ್ನೂ ಓದಿ: ವಾಟ್ಸ್ಆಪ್ ಹಾಗೂ ಹೈಕ್ ಗಳಲ್ಲಿ ಕ್ರಿಸ್ಮಸ್ ಸ್ಟಿಕ್ಕರ್ ತಯಾರಿಸುವುದು ಹೇಗೆ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.