Ugadi Horoscope: ಹಿಂದೂ ಹೊಸ ವರ್ಷವು ಅಂದರೆ ಯುಗಾದಿಯು 4 ರಾಶಿಚಕ್ರದ ಜನರಿಗೆ ಹಣ, ಪ್ರತಿಷ್ಠೆ ಎಲ್ಲವನ್ನೂ ನೀಡುತ್ತದೆ. ಈ ಜನರು ಸೂರ್ಯ ದೇವರು ಮತ್ತು ತಾಯಿ ಲಕ್ಷ್ಮಿಯಿಂದ ಆಶೀರ್ವದಿಸಲ್ಪಡುತ್ತಾರೆ ಎಂದು ಹೇಳಲಾಗುತ್ತಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಜನರು ವರ್ಷವಿಡೀ ಸೂರ್ಯನ ಅನುಗ್ರಹದಿಂದ ಸಾಕಷ್ಟು ಪ್ರಗತಿ ಮತ್ತು ಗೌರವವನ್ನು ಪಡೆಯುತ್ತಾರೆ. ಆ ಅದೃಷ್ಟದ ರಾಶಿಯವರು ಯಾರು ಎಂದು ತಿಳಿಯೋಣ.


COMMERCIAL BREAK
SCROLL TO CONTINUE READING

ಯುಗಾದಿಯಿಂದ ಈ ರಾಶಿಯವರ ಮೇಲೆ ಸೂರ್ಯನ ಕೃಪೆ:
ಪ್ರಪಂಚದಾದ್ಯಂತ ಜನವರಿ 1ರಿಂದ ಹೊಸ ವರ್ಷ ಆರಂಭವಾಗುತ್ತದೆ ಆದರೂ, ಹಿಂದೂಗಳಿಗೆ ಯುಗಾದಿ (Ugadi) ನಂತರವೇ ಹೊಸ ವರ್ಷ ಆರಂಭವಾಗುತ್ತದೆ. ಈ ವರ್ಷ ಎಪ್ರಿಲ್ 02, 2022ರಂದು ಯುಗಾದಿ ಹಬ್ಬ ಆಚರಿಸಲಾಗುವುದು. ಈ ಹೊಸ ವರ್ಷವು ನಾಲ್ಕು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಎಂದು ಹೇಳಲಾಗುತ್ತಿದೆ. ಯುಗಾದಿ ಹಬ್ಬದಿಂದ ಈ ರಾಶಿಯವರಿಗೆ ಸೂರ್ಯನ ಕೃಪೆ ಇರಲಿದ್ದು, ಇದರಿಂದಾಗಿ ವರ್ಷವಿಡೀ ಅದೃಷ್ಟ ಇವರ ಕೈ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ.


ಹಿಂದೂ ಹೊಸ ವರ್ಷದಿಂದ ಈ ರಾಶಿಯವರಿಗೆ ಹಣದ ಸುರಿಮಳೆ!
ಮೇಷ ರಾಶಿ:

ಹಿಂದೂ ಹೊಸ ವರ್ಷವು ಮೇಷ ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ವಿಶ್ವಾಸ ಹೆಚ್ಚಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ವೃತ್ತಿ-ವ್ಯವಹಾರದಲ್ಲಿ ಪ್ರಗತಿ ಇರುತ್ತದೆ, ಹಣದ ಲಾಭವಾಗಲಿದೆ. ಖ್ಯಾತಿ ಹೆಚ್ಚಲಿದೆ. ತಾಯಿ ಲಕ್ಷ್ಮಿಯ ಕೃಪೆಯಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. 


ಇದನ್ನೂ ಓದಿ- Auspicious Yoga In Kundali - ಜಾತಕದಲ್ಲಿ ಈ 5 ಯೋಗಗಳಿರುವವರ ದಾಂಪತ್ಯ ಜೀವನಕ್ಕೆ ಸಾಟಿಯೇ ಇರುವುದಿಲ್ಲ


ಕನ್ಯಾ ರಾಶಿ:
ಕನ್ಯಾ ರಾಶಿಯ ಜನರು ಹಿಂದೂ ಹೊಸ ವರ್ಷದಲ್ಲಿ (Hindu New Year) ಧಾರ್ಮಿಕ ಸ್ಥಳಗಳಿಗೆ ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತಾರೆ. ಈ ಪ್ರಯಾಣವು ಆಹ್ಲಾದಕರವಾಗಿರುತ್ತದೆ. ಇದುವರೆಗೆ ಇದ್ದ ಆರ್ಥಿಕ ಸಮಸ್ಯೆಗಳು ದೂರವಾಗಲಿವೆ. ಆದಾಯ ಹೆಚ್ಚಲಿದೆ. ವ್ಯಾಪಾರ ಮಾಡಲು ಇದು ಉತ್ತಮ ಸಮಯ. ಕೌಟುಂಬಿಕ ಜೀವನವೂ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುವುದು ಉತ್ತಮ. 


ತುಲಾ ರಾಶಿ:
ತುಲಾ ರಾಶಿಯವರಿಗೆ ಈ ಸಮಯವು ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ನೀವು ಯಶಸ್ಸು, ಗೌರವವನ್ನು ಪಡೆಯುತ್ತೀರಿ. ಹಣವು ಪ್ರಯೋಜನಕಾರಿಯಾಗಲಿದೆ. ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಜೀವನ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ, ಇದು ಸಂಬಂಧದಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ. 


ಇದನ್ನೂ ಓದಿ- Gold Ring: ಗುರುಗ್ರಹವನ್ನು ಬಲಪಡಿಸಿ ರಾಜಯೋಗ ದಯಪಾಲಿಸುತ್ತದೆ ಚಿನ್ನ, ಈ ರಾಶಿಯವರು ಚಿನ್ನ ಧರಿಸುವುದನ್ನು ತಪ್ಪಿಸಬೇಕು


ವೃಶ್ಚಿಕ ರಾಶಿ:
ಈ ಸಮಯವು ವೃಶ್ಚಿಕ ರಾಶಿಯವರಿಗೆ ಬಡ್ತಿ-ಹೆಚ್ಚಳವನ್ನು ನೀಡುತ್ತದೆ. ಕೆಲವರಿಗೆ ಹೊಸ ಕೆಲಸ ಅಥವಾ ವರ್ಗಾವಣೆ ಸಿಗಬಹುದು. ಕುಟುಂಬ ಜೀವನಕ್ಕೂ ಸಮಯ ಉತ್ತಮವಾಗಿರುತ್ತದೆ. 


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.