Holi 2023 ದಿನ ನಿಮ್ಮ ರಾಶಿಗೆ ಅನುಗುಣವಾಗಿ ಈ ಉಪಾಯ ಮಾಡಿ, ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ!
Holi 2023 ಆಗಮನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಹೋಳಿ ಹಬ್ಬದ ದಿನ ಕೆಲ ಉಪಾಯಗಳನ್ನು ಮಾಡಿದರೆ, ಅವು ಜೀವನದಲ್ಲಿ ಸುಖ ಸಮೃದ್ಧಿಗೆ ಕಾರಣವಾಗುತ್ತವೆ. ಈ ಉಪಾಯಗಳನ್ನು ನಿಮ್ಮ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಮಾಡಿದರೆ, ಅವು ಇನ್ನು ಹೆಚ್ಚಿನ ಫಲಗಳನ್ನು ನೀಡುತ್ತವೆ. ಬನ್ನಿ ಯಾವ ರಾಶಿಯ ಜನರು ಯಾವ ಉಪಾಯಗಳನ್ನು ಮಾಡಬೇಕು ತಿಳಿದುಕೊಳ್ಳೋಣ ಬನ್ನಿ,
Holi 2023 Remedies: ನೀವೂ ಕೂಡ ಹಣಕಾಸಿನ ಮುಗ್ಗಟ್ಟಿನಿಂದ ತೊಂದರೆಗೊಳಗಾಗಿದ್ದೀರಾ ಅಥವಾ ಒಂದರ ಮೇಲೊಂದರಂತೆ ಜೀವನದಲ್ಲಿ ಸಮಸ್ಯೆಗಳು ಬರುತ್ತಲೇ ಇದ್ದು, ಸಮಸ್ಯೆಗಳು ಅಂತ್ಯವಾಗುವ ಮಾತೆ ಎನ್ನುತ್ತಿಲ್ಲವೆ? ಹಾಗಾದರೆ, ಈ ಬಾರಿಯ ಹೋಳಿಹಬ್ಬದ ದಿನ ನೀವು ನಿಮ್ಮ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಕೆಲ ಪರಿಹಾರಗಳನ್ನು ಅನುಸರಿಸಿದರೆ, ನಿಮ್ಮ ಜೀವನದಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ತಾಯಿ ಲಕ್ಷ್ಮಿಯ ಕೃಪಾದೃಷ್ಟಿ ಸದಾ ನಿಮ್ಮಮೇಲಿರಲಿದೆ. ಮೊದಲು ಮೇಷ ರಾಶಿಯಿಂದ ಕನ್ಯಾ ರಾಶಿಯವರಿಗೆ ಜನರು ಅನುಸರಿಸಬೇಕಾದ ಉಪಾಯಗಳನ್ನು ತಿಳಿದುಕೊಳ್ಳೋಣ ಬನ್ನಿ.
ಮೇಷ ರಾಶಿ- ಈ ರಾಶಿಯವರು ಹೋಳಿ ದಹನದ ದಿನ ಹೋಳಿ ಭಸ್ಮವನ್ನು ಮತ್ತು 7 ಗೋಮತಿ ಚಕ್ರಗಳ ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಮುಂದಿನ ಹೋಳಿಯವರೆಗೆ ಪವಿತ್ರ ಸ್ಥಳದಲ್ಲಿ ಇರಿಸಬೇಕು, ಈ ಪರಿಹಾರವನ್ನು ಮಾಡುವುದರಿಂದ ಉದ್ಯೋಗ ಬಡ್ತಿ ಮತ್ತು ಮದುವೆಯಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
ವೃಷಭ ರಾಶಿ- ಹೋಳಿ ಹಬ್ಬದ ದಿನ ವೃಷಭ ರಾಶಿಯವರು ಹೋಳಿ ಭಸ್ಮ ಮತ್ತು ಬೆಳ್ಳಿಯ ನಾಣ್ಯವನ್ನು ಹೊಳೆಯುವ ಬಟ್ಟೆಯಲ್ಲಿ ಕಟ್ಟಿ ವ್ಯಾಪಾರ ನಡೆಸುವ ಸ್ಥಾನದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದವು ಸದಾ ನಿಮ್ಮ ಮೇಲೆ ಇರಲು ಪ್ರಾರಂಭಿಸುತ್ತದೆ.
ಮಿಥುನ ರಾಶಿ- ಹೋಳಿ ದಹನದ ನಂತರದ ಎರಡನೇ ದಿನ ಸೂರ್ಯೋದಯದ ಸಮಯದಲ್ಲಿ ಗಣೇಶನಿಗೆ ಅರ್ಪಿಸಲಾಗುವ ಹಸಿರು ಕರಿಕೆ ಮತ್ತು ಹೋಲಿ ದಹನದ ಸ್ವಲ್ಪ ಬೂದಿಯನ್ನು ಹಸಿರು ಬಟ್ಟೆಯಲ್ಲಿ ಕಟ್ಟಿ ಮನೆ ಮತ್ತು ಅಂಗಡಿಯಲ್ಲಿ ಸುರಕ್ಷಿತವಾಗಿರಿಸಿದರೆ ಆರ್ಥಿಕ ಸ್ಥಿತಿಯು ಸುಧಾರಿಸಲು ಪ್ರಾರಂಭವಾಗುತ್ತದೆ.
ಕರ್ಕ ರಾಶಿ- ಕರ್ಕ ರಾಶಿಯ ಜನರು ಹೋಳಿ ದಹನದ ಭಸ್ಮ ಮತ್ತು ಚಿನ್ನ ಅಥವಾ ಬೆಳ್ಳಿಯ ನಾಣ್ಯಗಳನ್ನು ಹೋಳಿ ದಿನದಂದು ಬ್ರಹ್ಮ ಮುಹೂರ್ತದಲ್ಲಿ ಬಿಳಿ ಮಸ್ಲಿನ್ ಬಟ್ಟೆಯಲ್ಲಿ ಕಟ್ಟಬೇಕು ಮತ್ತು ಅವುಗಳನ್ನು ತಿಜೋರಿಯಲ್ಲಿ ಇಡಬೇಕು. ಈ ದೋಷರಹಿತ ಪರಿಹಾರವನ್ನು ಮಾಡುವುದರಿಂದ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಇದನ್ನೂ ಓದಿ-ಸುದೀರ್ಘ 12 ವರ್ಷಗಳ ಬಳಿಕ ಹೋಳಿ ಹಬ್ಬದ ದಿನ ಗ್ರಹಗಳ ವಿಶೇಷ ಕಾಕತಾಳೀಯ, ಈ ರಾಶಿಗಳ ಭಾಗ್ಯ ಸೂರ್ಯನಂತೆ ಹೊಳೆಯಲಿದೆ!
ಸಿಂಹ ರಾಶಿ- ಸಿಂಹ ರಾಶಿಯ ಜನರು ಹೋಳಿ ಪೂಜೆಯ ಮಾರನೆಯ ದಿನ, ಹೋಳಿ ದಹನದ ಭಸ್ಮವನ್ನು ಒಂದು ಚಿನ್ನದ ಬಣ್ಣದ ಬಟ್ಟೆಯಲ್ಲಿ ಅರಿಶಿನ, ತಾಮ್ರ ಅಥವಾ ಹಿತ್ತಾಳೆ ನಾಣ್ಯಗಳಿಂದ ಕಟ್ಟಿ ಮನೆಯ ಪವಿತ್ರ ಸ್ಥಳದಲ್ಲಿ ಮತ್ತು ಕಚೇರಿಯ ತಿಜೋರಿಯಲ್ಲಿ ಇಡಬೇಕು. ಈ ಉಪಾಯ ಅಂಗಡಿಯಲ್ಲಿ ವ್ಯಾಪಾರ ಮತ್ತು ಮನೆಯಲ್ಲಿ ಆಯುರಾರೋಗ್ಯವನ್ನು ತರುತ್ತದೆ.
ಇದನ್ನೂ ಓದಿ-ಆರು ಶತಮಾನಗಳ ಬಳಿಕ 3 ರಾಜಯೋಗಳ ಅಪರೂಪದ ಸಂಯೋಜನೆ, ಈ ರಾಶಿಗಳ ಜನರಿಗೆ ಭಾರಿ ಧನಾಗಮನ ಯೋಗ!
ಕನ್ಯಾ ರಾಶಿ- ಹೋಳಿ ಹಬ್ಬದ ದಿನ ಬೆಳಗ್ಗೆ ಹೋಳಿ ಭಸ್ಮ, ವೀಳ್ಯದೆಲೆ ಮತ್ತು ಏಳು ತಾಮ್ರದ ನಾಣ್ಯಗಳನ್ನು ಹಸಿರು ಬಟ್ಟೆಯಲ್ಲಿ ಕಟ್ಟಿ ತಿಜೋರಿಯಲ್ಲಿರಿಸಿ. ಹೀಗೆ ಮಾಡಿದರೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಾಣಲಿದೆ.
ಇದನ್ನೂ ಓದಿ-ಮಾರ್ಚ್ ತಿಂಗಳಿನಲ್ಲಿ ನಿರ್ಮಾಣಗೊಳ್ಳುತ್ತಿದೆ ಲಕ್ಷ್ಮಿ ನಾರಾಯಣ ಯೋಗ, 3 ರಾಶಿಗಳ ಜನರಿಗೆ ಭಾರಿ ಧನಲಾಭ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.