ಆರು ಶತಮಾನಗಳ ಬಳಿಕ 3 ರಾಜಯೋಗಳ ಅಪರೂಪದ ಸಂಯೋಜನೆ, ಈ ರಾಶಿಗಳ ಜನರಿಗೆ ಭಾರಿ ಧನಾಗಮನ ಯೋಗ!

Conjunction Of Rajyogas: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, 617 ವರ್ಷಗಳ ಬಳಿಕ ಗ್ರಹಗಳ ಅದ್ಭುತ ಸಂಯೋಜನೆಯಿಂದ 3 ರಾಜಯೋಗಗಳು ರೂಪುಗೊಳ್ಳುತ್ತಿದೆ. ಇದರಿಂದ ಒಟ್ಟು 4 ರಾಶಿಗಳ ಜಾತಕದವರ ಒಳ್ಳೆಯ ದಿನಗಳು ಆರಂಭವಾಗಲಿದ್ದು, ಅವರಿಗೆ ಆಕಸ್ಮಿಕ ಧನಲಾಭದ ಜೊತೆಗೆ ಭಾಗ್ಯೋದಯದ ಪ್ರಬಲ ಯೋಗ ರೂಪುಗೊಳ್ಳಲಿದೆ. ಆ ನಾಲ್ಕು ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.  
 

Auspicious Rajyog: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಬದಲಾಯಿಸುತ್ತವೆ, ಅವುಗಳ  ಪರಿಣಾಮವು ಮಾನವ ಜೀವನ ಮತ್ತು ಭೂಮಿಯ ಮೇಲೆ ಕಂಡುಬರುತ್ತದೆ. ಇದರೊಂದಿಗೆ ಗ್ರಹಗಳು ಕಾಲಕಾಲಕ್ಕೆ ರಾಜಯೋಗವನ್ನೂ ಕೂಡ ರೂಪಿಸುತ್ತವೆ. ಗುರುವು ತನ್ನ ರಾಶಿಯಾಗಿರುವ ಮೀನ ರಾಶಿಯಲ್ಲಿದೆ. ಶನಿಯು ತನ್ನ ಕುಂಭ ರಾಶಿಯಲ್ಲಿ ಸೂರ್ಯನೊಂದಿಗೆ ಇದ್ದಾನೆ. ಗುರುವಿನ ಜೊತೆಗೆ ಮೀನ ರಾಶಿಯಲ್ಲಿ ಶುಕ್ರನು ಉತ್ಕೃಷ್ಟನಾಗಿದ್ದಾನೆ. ಇದರಿಂದಾಗಿ ಸೂರ್ಯ, ಗುರು, ಶುಕ್ರ ಮತ್ತು ಶನಿಯ ಅಪರೂಪದ ಸಂಯೋಜನೆಯು 617 ವರ್ಷಗಳ ನಂತರ ರೂಪುಗೊಂಡಿದೆ. ಇದೇ ವೇಳೆ ಈ ಗ್ರಹಗಳ ಸಂಯೋಗದಿಂದ ಶಶ, ಮಾಲವ್ಯ ಮತ್ತು ಹಂಸರಾಜ ಯೋಗವೂ ರೂಪುಗೊಳ್ಳುತ್ತಿದೆ. ಇವುಗಳ ಪ್ರಭಾವವು ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಕಂಡುಬರಲಿದ್ದು, 4 ರಾಶಿಗಳ ಜನರಿಗೆ, ಈ ಅವಧಿಯಲ್ಲಿ ಲಾಭ ಮತ್ತು ಪ್ರಗತಿಯ ಸಾಧ್ಯತೆಗಳು ರೂಪುಗೊಳ್ಳುತ್ತಿವೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Budh Gochar 2023: ಶನಿಯ ಮನೆಗೆ ಬುಧನ ಪ್ರವೇಶ, 3 ರಾಶಿಗಳ ಜನರ ಧನ-ಸಂಪತ್ತು ಮತ್ತು ಆದಾಯದಲ್ಲಿ ಅಪಾರ ಹೆಚ್ಚಳ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /4

ಮಿಥುನ ರಾಶಿ- ಗುರು ಮತ್ತು ಶುಕ್ರನ ಪ್ರಭಾವದಿಂದಾಗಿ ನಿಮ್ಮ ಸಂಕ್ರಮಣ ಜಾತಕದಲ್ಲಿ ಹಂಸ ಮತ್ತು ಮಾಲವ್ಯ ಎಂಬ ಎರಡು ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದರೊಂದಿಗೆ, ಶುಕ್ರ ನಿಮ್ಮ ಸಂಕ್ರಮಣ ಜಾತಕದ ಕರ್ಮ ಭಾವದಲ್ಲಿ ಉತ್ಕೃಷ್ಟ ಸ್ಥಿತಿಯಲ್ಲಿರಲಿದ್ದಾನೆ   ಮತ್ತು ಗುರು ಸಹ ಅದರೊಂದಿಗೆ ಇರಲಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ಕೆಲಸ-ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬಹುದು. ಮತ್ತೊಂದೆಡೆ, ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಪ್ರಸ್ತಾಪ ಬರುವ ಎಲ್ಲಾ ಸಾಧ್ಯತೆಗಳಿವೆ. ಭವಿಷ್ಯದ ಯೋಜನೆಯಲ್ಲಿ ಸಹ ಕೆಲಸ ಮಾಡಬಹುದು. ಉದ್ಯಮಿಗಳು ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಇನ್ನೊಂದೆಡೆ ಉದ್ಯೋಗಿಗಳ ಬಡ್ತಿ ಮತ್ತು ಹೆಚ್ಚಳದ ಮಾತುಗಳು ಕೂಡ ಕೇಳಿಬರಲಿವೆ.  

2 /4

ಕನ್ಯಾ ರಾಶಿ- ಮಾಲವ್ಯ ರಾಜಯೋಗವು ನಿಮಗೆ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಸಪ್ತಮೇಷ ಭಾವದಲ್ಲಿ ಈ ಯೋಗವು ರೂಪುಗೊಳ್ಳುತ್ತದೆ. ಹೀಗಾಗಿ, ಈ ಅವಧಿಯಲ್ಲಿ, ನಿಮಗೆ ನೀವು ಹಿಂದೆ ಮಾಡಿದ ಕೆಲಸದ ಪ್ರಯೋಜನ ಕೂಡ ಸಿಗಲಿದೆ. ಆರ್ಥಿಕ ವಿಷಯಗಳಲ್ಲಿ ಮತ್ತು ವ್ಯವಹಾರದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಪಡೆಯಬಹುದು. ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ವ್ಯಾಪಾರ ಒಪ್ಪಂದವೂ ಕುದುರುವ ಸಾದ್ಯತೆ ಇದೆ. ಈ ಅವಧಿಯಲ್ಲಿ ನೀವು ಪಾರ್ಟನರ್ಷಿಪ್ ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುವಿರಿ.   

3 /4

ಧನು ರಾಶಿ- ಶುಕ್ರನ ಪ್ರಭಾವದಿಂದ ನಿಮ್ಮ ಸಂಕ್ರಮಣದ ಜಾತಕದ ನಾಲ್ಕನೇ ಭಾವದಲ್ಲಿ ಮಾಲವ್ಯ ರಾಜಯೋಗವು ರೂಪುಗೊಳ್ಳುತ್ತಿದೆ. ಅದಕ್ಕಾಗಿಯೇ ಈ ಅವಧಿಯಲ್ಲಿ ನಿಮ್ಮ ದೈಹಿಕ ಸಂತೋಷಗಳು ಹೆಚ್ಚಾಗಬಹುದು. ಅಲ್ಲದೆ, ನೀವು ವಾಹನ ಮತ್ತು ಆಸ್ತಿಯನ್ನು ಪಡೆಯಬಹುದು. ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆಗಳೂ ಇವೆ. ಹಣಕಾಸಿನ ವಿಷಯಗಳಲ್ಲಿ ನೀವು ಪ್ರಗತಿ ಸಾಧಿಸುವಿರಿ. ನೀವು ಕಾಲಕಾಲಕ್ಕೆ ಹಣಕಾಸಿನ ಪ್ರಯೋಜನಗಳನ್ನು ಸಹ ಪಡೆಯಬಹುದು. ಈ ಅವಧಿಯಲ್ಲಿ, ತಾಯಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ನೀವು ರಾಜಕೀಯದೊಂದಿಗೆ ಸಂಬಂಧ ಹೊಂದಿದ್ದರೆ, ನಿಮಗೆ ಯಾವುದಾದರೊಂದು ಹುದ್ದೆ ಸಿಗುವ ಸಾಧ್ಯತೆ ಇದೆ.  

4 /4

ಕುಂಭ ರಾಶಿ- ಶಶ ಎಂಬ ರಾಜಯೋಗವು ನಿಮಗೆ ಪ್ರಯೋಜನಕಾರಿ ಸಾಬೀತಾಗಲಿದೆ. ಏಕೆಂದರೆ ಶನಿದೇವನು ನಿಮ್ಮ ಸಂಕ್ರಮಣದ ಜಾತಕದ ಲಗ್ನ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆರೋಗ್ಯವು ಸುಧಾರಿಸಬಹುದು. ಜೊತೆಗೆ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಧುರತೆ ಇರಲಿದೆ. ಸಂಗಾತಿಯಿಂದ ಮಾಡಿದ ಹೂಡಿಕೆ ಲಾಭ ನಿಮಗಾಗಲಿದೆ. ಕೆಲಸದ ಸ್ಥಳದ ಬಗ್ಗೆ ಹೇಳುವುದಾದರೆ, ಅಧಿಕಾರಿಗಳೊಂದಿಗೆ ಸಮನ್ವಯತೆ ಉತ್ತಮವಾಗಿರಲಿದೆ. ಭವಿಷ್ಯದ ಯೋಜನೆಯಲ್ಲಿ ಕೆಲಸ ಮಾಡಬಹುದು. ವ್ಯಾಪಾರದಲ್ಲಿ ಹಠಾತ್ ಧನ ಲಾಭವೂ ಆಗುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)