Home Hacks: ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದ್ರೆ ಈ ರೀತಿ ಮಾಡಿ
Home remedies for cockroaches: ಜಿರಳೆ ಮುಟ್ಟಿದ ಆಹಾರ ಸೇವಿಸಿದರೆ ಅಲರ್ಜಿ, ದದ್ದು, ಕಣ್ಣಿನಲ್ಲಿ ನೀರು ಬರುವುದು ಮುಂತಾದ ಸಮಸ್ಯೆ ಎದುರಾಗಬಹುದು. ಇದಕ್ಕೆ ಜಿರಳೆಯ ಲಾಲಾರಸದಲ್ಲಿರುವ ವೈರಸ್ ಕಾರಣ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಅದನ್ನು ತೊಡೆದುಹಾಕಲು ಕ್ರಮ ತೆಗೆದುಕೊಳ್ಳಬೇಕು.
Home remedies for cockroaches: ಮನೆಯಲ್ಲಿ ಜಿರಳೆಗಳ ಕಾಟದಿಂದ ಅನೇಕರು ಬೇಸತ್ತು ಹೋಗಿರುತ್ತಾರೆ. ಅಡುಗೆ ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳ ಕಾಟ ತಪ್ಪಿದ್ದಲ್ಲ. ಅತ್ತಿಂದಿತ್ತ ಜಿರಳೆಗಳು ಓಡಾಡುತ್ತಿದ್ದರೆ ಅನೇಕರಿಗೆ ಊಟವೇ ಹೋಗುವುದಿಲ್ಲ. ಈ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಹಲವಾರು ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಆ ಸ್ಪ್ರೇಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳನ್ನು ಬಳಸುವುದರಿಂದ ನಿಮಗೆ ಜಿರಳೆಗಳಿಂದ ತಾತ್ಕಾಲಿಕ ಪರಿಹಾರ ಸಿಕ್ಕರೂ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾದ್ರೆ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯುವುದು ಹೇಗೆ..? ಇದಕ್ಕೆ ಉತ್ತರ ಇಲ್ಲಿದೆ ನೋಡಿ...
ಜಿರಳೆಗಳು ಆಹಾರಕ್ಕೆ ವಿಷದ ಅಪಾಯವನ್ನುಂಟು ಮಾಡುತ್ತದೆ. ಅಡುಗೆಮನೆಯಲ್ಲಿಟ್ಟ ಆಹಾರದ ಮೇಲೆಲ್ಲ ಜಿರಳೆ ಓಡಾಡುತ್ತವೆ. ಆ ಆಹಾರ ಸೇವಿಸಿದರೆ ಟೈಫಾಯಿಡ್ಗೆ ಕಾರಣವಾಗಬಹುದು. ಜಿರಳೆ ಮುಟ್ಟಿದ ಆಹಾರ ಸೇವಿಸಿದರೆ ಅಲರ್ಜಿ, ದದ್ದು, ಕಣ್ಣಿನಲ್ಲಿ ನೀರು ಬರುವುದು ಮುಂತಾದ ಸಮಸ್ಯೆ ಎದುರಾಗಬಹುದು. ಇದಕ್ಕೆ ಜಿರಳೆಯ ಲಾಲಾರಸದಲ್ಲಿರುವ ವೈರಸ್ ಕಾರಣ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಅದನ್ನು ತೊಡೆದುಹಾಕಲು ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಕೆಲವು ಮನೆಮದ್ದುಗಳು ಪರಿಹಾರ ನೀಡುತ್ತವೆ.
ಇದನ್ನೂ ಓದಿ: ನಿಂಬೆರಸಕ್ಕೆ ಈ ಎಣ್ಣೆ ಬೆರೆಸಿ ಹಚ್ಚಿದರೆ ಮತ್ತೆಂದೂ ಬಾರದಂತೆ ಕಪ್ಪಾಗುವುದು ಬಿಳಿಕೂದಲು! ತಿಂಗಳುಗಟ್ಟಲೇ ಹಾಗೇ ಇರುತ್ತೆ
ಬೇವು ಕೀಟನಾಶಕ ಗುಣಗಳನ್ನು ಹೊಂದಿದೆ. ಜಿರಳೆಗಳನ್ನು ತೊಡೆದುಹಾಕಲು ಇದರ ಬಳಕೆ ನಿಮಗೆ ಪ್ರಯೋಜನಕಾರಿ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಬೇವಿನ ಪುಡಿ ಅಥವಾ ಅದರ ಎಣ್ಣೆಯನ್ನು ಜಿರಳೆಗಳು ಅಡಗಿರುವ ಜಾಗಕ್ಕೆ ಉದುರಿಸಬೇಕು. ಜಿರಳೆಗಳು ಅದರ ವಾಸನೆಯಿಂದ ಶಾಶ್ವತವಾಗಿ ಓಡಿಹೋಗುತ್ತವೆ.
ಮನೆಯಲ್ಲಿ ಹೆಚ್ಚು ಜಿರಳೆಗಳಿದ್ದರೆ ಅವುಗಳನ್ನು ಓಡಿಸಲು ಅಡಿಗೆ ಸೋಡಾ ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಒಂದು ಚಮಚ ಅಡಿಗೆ ಸೋಡಾದಲ್ಲಿ ಅರ್ಧ ಚಮಚ ಸಕ್ಕರೆ ಬೆರೆಸಬೇಕು. ಅದನ್ನು ಜಿರಳೆಗಳು ಪ್ರವೇಶಿಸುವ ಬಿರುಕುಗಳಿಗೆ ಹಾಕಬೇಕು. ಹೀಗೆ ಮಾಡುವುದರಿಂದ ಎಲ್ಲಾ ಜಿರಳೆಗಳು ಸಕ್ಕರೆಯಿಂದ ಆಕರ್ಷಿತವಾಗುತ್ತವೆ. ಬಳಿಕ ಅಡಿಗೆ ಸೋಡಾವನ್ನು ತಿಂದ ನಂತರ ಹೊರಬಂದು ಸಾಯುತ್ತವೆ.
ಜಿರಳೆಗಳಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ಬೇ ಎಲೆಯು ಪರಿಣಾಮಕಾರಿ. ಇದಕ್ಕೆ ಬೇ ಎಲೆಗಳನ್ನು ರುಬ್ಬುವ ಮೂಲಕ ಪುಡಿ ಮಾಡಿ ಅಥವಾ ಬಿಸಿ ನೀರಿನಲ್ಲಿ ಕುದಿಸಿ. ಜಿರಳೆಗಳು ಓಡಾಡುವ ಸ್ಥಳಗಳಲ್ಲಿ ಅದನ್ನು ಸಿಂಪಡಿಸಬೇಕು.
ಲವಂಗದ ಸುವಾಸನೆ ತುಂಬಾ ಪ್ರಬಲವಾಗಿದೆ. ಇದರಿಂದ ಕೀಟಗಳು ಅದರ ಹತ್ತಿರ ಬರುವುದಿಲ್ಲ. ಜಿರಳೆಗಳು ನಿಮ್ಮ ಮನೆಯಲ್ಲಿ ಭಯ ಉಂಟುಮಾಡುತ್ತಿದ್ದರೆ, ನೀವು ಲವಂಗ ಬಳಸಬಹುದು. ಕೆಲವು ಲವಂಗಗಳನ್ನು ನೀವು ಜಿರಳೆಗಳು ಓಡಾಡುವ ಸ್ಥಳಗಳಲ್ಲಿ ಇಡಬೇಕು.
ಇದನ್ನೂ ಓದಿ: ತೆಂಗಿನೆಣ್ಣೆಯಲ್ಲಿ ಇದೊಂದು ಪದಾರ್ಥ ಬೆರೆಸಿ ಹಚ್ಚಿ ಬಿಳಿ ಕೂದಲು ಬುಡದಿಂದಲೂ ಕಪ್ಪಾಗಿ ಮಾರುದ್ದ ಬೆಳೆಯುತ್ತೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.