White Hair Remedies: ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಅರಿಶಿನವನ್ನು ಬಳಸಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
White Hair Treatment At Home: ಅರಿಶಿನ ಹಾಗೂ ತೆಂಗಿನೆಣ್ಣೆಯ ಸರಿಯಾದ ಬಳಕೆಯಿಂದ ಬಿಳಿ ಕೂದಲು ಸೇರಿದಂತೆ ಕೂದಲುದುರುವಿಕೆ, ಡ್ಯಾಂಡ್ರಫ್ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬದಲಾದ ಋತು, ಒತ್ತಡಭರಿತ ಜೀವನ ಶೈಲಿಯಿಂದಾಗಿ ಕೂದಲುದುರುವಿಕೆ, ಡ್ಯಾಂಡ್ರಫ್, ಬಿಳಿ ಕೂದಲಿನ ಸಮಸ್ಯೆಗಳು ಸಾಮಾನ್ಯವಾಗಿವೆ. ಆದರೆ, ನಿಮ್ಮ ಅಡುಗೆ ಮನೆಯಲ್ಲಿರುವ ಒಂದೇ ಒಂದು ಪದಾರ್ಥ ಕೂದಲಿನ ಸಂಬಂಧಿತ ನಿಮ್ಮೆಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲದ
ಕೂದಲಿನ ಸಮಸ್ಯೆಗಳಿಗೆ ಮನೆಮದ್ದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು: * ಅರಿಶಿನ 5-6ಚಮಚ * ತೆಂಗಿನೆಣ್ಣೆ - 2 ಚಮಚ
ಅರಿಶಿನವು ದೇಹದಲ್ಲಿ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಜೊತೆಗೆ ಕೂದಲುದುರುವಿಕೆ, ಡ್ಯಾಂಡ್ರಫ್ ಸಮಸ್ಯೆಗಳಿಂದಲೂ ಕೂದಲನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ, ಇದು ಬಿಳಿ ಕೂದಲನ್ನು ಕಪ್ಪಾಗಿಸುವಲ್ಲೂ ಪ್ರಯೋಜನಕಾರಿ ಆಗಿದೆ.
ಯಾವುದೇ ರಾಸಾಯನಿಕಗಳಿಲ್ಲದೆ ತಯಾರಿಸಲ್ಪಟ್ಟಿರುವ ತೆಂಗಿನೆಣ್ಣೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕೂದಲಿಗೆ ನಿಯಮಿತವಾಗಿ ತೆಂಗಿನೆಣ್ಣೆ ಬಳಸುವುದರಿಂದ ಕೂದಲಿನ ಎಲ್ಲಾ ರೀತಿಯ ಸಮಸ್ಯೆಗಳಿಂದಲೂ ದೂರ ಉಳಿಯಬಹುದು.
ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮೊದಲು ಒಂದು ಬಾಣಲೆಗೆ ನಾಲ್ಕೈದು ಸ್ಪೂನ್ ಅರಿಶಿನ ಹಾಕಿ ಸಣ್ಣ ಉರಿಯಲ್ಲಿ ಉರಿಯಿರಿ. ಅರಿಶಿನ ಕಪ್ಪು ಬಣ್ಣಕ್ಕೆ ತಿರುಗಿದ ಬಳಿಕ ಒಂದೆರಡು ಚಮಚ ಪುಡಿಯನ್ನು ಬೇರೆ ಬಟ್ಟಲಿಗೆ ಹಾಕಿ ಇದಕ್ಕೆ ಅಷ್ಟೇ ಪ್ರಮಾಣದ ತೆಂಗಿನೆಣ್ಣೆ ಹಾಕಿ ಚೆನ್ನಾಗಿ ಬೆರೆಸಿ.
ಅರಿಶಿನ ಕೊಬ್ಬರಿ ಎಣ್ಣೆಯಿಂದ ತಯಾರಿಸಿದ ಈ ಹೋಂ ಮೇಡ್ ಹೇರ್ ಡೈ ಅನ್ನು ಕೂದಲಿನ ಬುಡದಿಂದಲೂ ತುದಿಯವರೆಗೂ ಹಚ್ಚಿ. ಎರಡು ಗಂಟೆಗಳ ಕಾಲ ಹಾಗೆ ಬಿಡಿ.
ಮನೆಯಲ್ಲಿ ತಯಾರಿಸಿದ ಈ ಹೇರ್ ಡೈ ಅನ್ನು ಕೂದಲಿಗೆ ಹಚ್ಚಿದ ಎರಡು ಗಂಟೆಗಳ ಬಳಿಕ ಬೆಚ್ಚಗಿನ ನೀರಿನಿಂದ ವಾಶ್ ಮಾಡಿ. ಈ ವೇಳೆ ಯಾವುದೇ ಶಾಂಪೂ ಅಥವಾ ಸೀಗೆಕಾಯಿಯನ್ನು ಬಳಸಬೇಡಿ. ಈ ಹೇರ್ ಡೈ ಹಚ್ಚಿದ ಎರಡು ದಿನಗಳ ಬಳಿಕ ನೀವು ಶಾಂಪೂ ಬಳಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.