ದುಬಾರಿ ಶಾಂಪೂ ಬಿಟ್ಟಾಕಿ! ಡ್ಯಾಂಡ್ರಫ್ನ್ನು ವಾರದಲ್ಲೇ ತೊಲಗಿಸುತ್ತೆ ಈ ತರಕಾರಿ ಹೇರ್ ಮಾಸ್ಕ್
Dandruff Home Remedies: ಮನುಷ್ಯನ ಆರೋಗ್ಯ ಮತ್ತು ಸೌಂದರ್ಯ ರಕ್ಷಣೆಯಷ್ಟೇ ಮುಖ್ಯವಾದುದೆಂದರೆ ಕೂದಲಿನ ಆರೈಕೆ. ಅನೇಕ ಜನರು ವಿವಿಧ ರೀತಿಯ ಕೂದಲು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
Dandruff treatment at home: ಇತ್ತೀಚೆಗೆ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕೂದಲು ಉದುರುವುದು, ಕೂದಲು ಬಿಳಿಯಾಗುವುದು, ತಲೆಹೊಟ್ಟು ಹೀಗೆ ಕೂದಲಿನ ಎಲ್ಲಾ ಸಮಸ್ಯೆಗಳು ಕಾಡಬಹುದು. ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬಗೆಯ ಶ್ಯಾಂಪೂಗಳು ಮತ್ತು ಹೇರ್ ಕ್ರೀಮ್ ಗಳನ್ನು ಬಳಸಿ ಹಲವರು ಸುಸ್ತಾಗುತ್ತಾರೆ.
ಅನೇಕ ಜನರು ಈ ಸಮಸ್ಯೆಯನ್ನು ಹೊಂದಿದ್ದಾರೆ. ಮಾಲಿನ್ಯ, ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಈ ಸಮಸ್ಯೆಗಳು ಸಾಮಾನ್ಯವಾಗಿದೆ. ಎಲ್ಲಕ್ಕಿಂತ ಸಾಮಾನ್ಯವಾದ ಸಮಸ್ಯೆ ಎಂದರೆ ತಲೆಹೊಟ್ಟು. ಡ್ಯಾಂಡ್ರಫ್ ಸಮಸ್ಯೆಯು ಕೂದಲು ಉದುರುವಿಕೆ, ಕೂದಲು ಶುಷ್ಕತೆ ಮತ್ತು ಕೂದಲಿನ ಹೊಳಪನ್ನು ಹಾಳು ಮಾಡುತ್ತದೆ. ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಲು ಅತ್ಯುತ್ತಮ ಮನೆಮದ್ದು ಇಲ್ಲಿದೆ. ಇದು ಈರುಳ್ಳಿ ಮತ್ತು ಶುಂಠಿಯ ಹೇರ್ ಮಾಸ್ಕ್ ಆಗಿದೆ. ಈ ಹೇರ್ ಮಾಸ್ಕ್ ಡ್ಯಾಂಡ್ರಫ್ ಸಮಸ್ಯೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಕೂದಲಿಗೆ ಸಂಪೂರ್ಣ ರಕ್ಷಣೆ ನೀಡುತ್ತದೆ.
ಇದನ್ನೂ ಓದಿ: ಇದೊಂದೇ ವಸ್ತು ಸಾಕು! ಹೇರ್ ಫಾಲ್ ಸೇರಿ ಕೂದಲಿನ ಈ ನಾಲ್ಕು ಸಮಸ್ಯೆಗಳಿಂದ ನೀಡುವುದು ಮುಕ್ತಿ
ಈರುಳ್ಳಿ ಮತ್ತು ಶುಂಠಿ ಎರಡರಲ್ಲೂ ಆ್ಯಂಟಿ ಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೇರಳವಾಗಿವೆ. ಅದಕ್ಕಾಗಿಯೇ ಈ ಎರಡರ ಮಿಶ್ರಣವು ತಲೆಹೊಟ್ಟು ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುತ್ತದೆ. ಶುಂಠಿಯಲ್ಲಿ ಜಿಂಜರಾಲ್ ಎಂಬ ಪೋಷಕಾಂಶವಿದೆ. ಇದು ನೆತ್ತಿಯ ಮೇಲಿನ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಈರುಳ್ಳಿಯಲ್ಲಿರುವ ಗಂಧಕವು ಕೂದಲಿನಲ್ಲಿ ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿಯೇ ಈರುಳ್ಳಿ-ಶುಂಠಿ ಹೇರ್ ಮಾಸ್ಕ್ ಬಳಸುವುದರಿಂದ ತಲೆಹೊಟ್ಟು ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ. ಅದೇ ಸಮಯದಲ್ಲಿ ಕೂದಲು ಸಂಪೂರ್ಣ ರಕ್ಷಣೆ ಪಡೆಯುತ್ತದೆ.
ಈರುಳ್ಳಿ ಶುಂಠಿ ಹೇರ್ ಮಾಸ್ಕ್ ಮಾಡಲು ಒಂದು ಈರುಳ್ಳಿ, ಸ್ವಲ್ಪ ಶುಂಠಿ ಮತ್ತು ಜೇನುತುಪ್ಪ ಬೇಕಾಗುತ್ತದೆ. ಮೊದಲು ಈರುಳ್ಳಿಯನ್ನು ಕತ್ತರಿಸಿ ಮಿಕ್ಸರ್‌ನಲ್ಲಿ ರುಬ್ಬಿ ರಸ ತೆಗೆಯಿರಿ. ಅದರ ನಂತರ ಶುಂಠಿ ರಸವನ್ನು ಸಹ ಅದೇ ರೀತಿಯಲ್ಲಿ ತೆಗೆಯಬೇಕು. ಎರಡನ್ನೂ ಒಂದು ಬಟ್ಟಲಿನಲ್ಲಿ ಮಿಶ್ರಣ ಮಾಡಿ. ಅದರ ನಂತರ ಜೇನುತುಪ್ಪ ಸೇರಿಸಿ. ಈರುಳ್ಳಿ - ಶುಂಠಿ ಹೇರ್ ಮಾಸ್ಕ್ ರೆಡಿ ಮಾಡಿ.
ಈರುಳ್ಳಿ - ಶುಂಠಿ ಹೇರ್ ಮಾಸ್ಕ್ ಅನ್ನು ಹತ್ತಿಯ ಸಹಾಯದಿಂದ ಕೂದಲಿನ ಬೇರಗಳಿಗೆ ಅನ್ವಯಿಸಬೇಕು. ಅದರ ನಂತರ ಇಡೀ ಕೂದಲಿಗೆ ಅನ್ವಯಿಸಿ. ಪೂರ್ತಿ ತಲೆಗೆ ಹಚ್ಚಿದ ನಂತರ 20-30 ನಿಮಿಷ ಹಾಗೆ ಇಡಿ. ನಂತರ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ 2-3 ಬಾರಿ ಈ ಹೀಗೆ ಮಾಡಿ. ತಲೆಹೊಟ್ಟು ಸಮಸ್ಯೆ ಸುಲಭವಾಗಿ ಕಡಿಮೆಯಾಗುತ್ತದೆ.
ಇದನ್ನೂ ಓದಿ: Hair Care: ಹೇರ್ ಪ್ಯಾಕ್, ಡೈ ಏನೂ ಬೇಡ! ಈ 6 ದೇಶೀಯ ಆಹಾರ ಸೇವಿಸಿ.. ಕೂದಲು ಕಪ್ಪಾಗಿ, ದಟ್ಟವಾಗಿ ಬೆಳೆಯುತ್ತೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.