ನವದೆಹಲಿ : ಈಗ ಯಾವ ವಸ್ತುವನ್ನು ಖರೀದಿಸಿದರೂ ಕಲಬೆರಕೆಯದ್ದೇ ಭಯ. ಎಣ್ಣೆ , ಮಸಾಲೆ, ಪ್ಯಾಕ್ಡ್ ಫುಡ್ ಎಲ್ಲದರಲ್ಲೂ ಕಲಬೆರೆಕೆಯ ಮಾತು ಕೇಳುತ್ತಿರುತ್ತದೆ. ಹೀಗಿರುವಾಗ ಮಾರುಕಟ್ಟೆಯಿಂದ ನೇ ತಂದರೂ ಇದರಲ್ಲಿ ಕಲಬೆರಕೆ ಇಬಹುದಾ ಎಂಬ ಪ್ರಶ್ನೆ ಕಾಡದೇ ಇರದು. ಮಸಾಲೆಗಳಲ್ಲಿನ ಕಲಬೆರಕೆಯನ್ನು ಕಂಡುಹಿಡಿಯುವ (how to check purity of masala) ವಿಧಾನಗಳು ನಿಮಗೆ ತಿಳಿದಿದೆಯೇ? ಇಲ್ಲ ಎಂದಾದರೆ, ಮನೆಯಲ್ಲಿ ಸುಲಭವಾಗಿ ಕಲಬೆರಕೆ ಹೇಗೆ ಕಂಡುಹಿಡಿಯಬಹುದು ಎನ್ನುವುದನ್ನು ನಾವು ಹೇಳುತ್ತೇವೆ.


COMMERCIAL BREAK
SCROLL TO CONTINUE READING

ಕೆಂಪು ಮೆಣಸಿನ ಪುಡಿಯಲ್ಲಿ ಕಲಬೆರಕೆ ಹೇಗೆ ಆಗಿರುತ್ತದೆ? 
ಕೆಂಪು ಮೆಣಸಿನಪುಡಿಯಲ್ಲಿ (Red chilli) ಯಾವ ರೀತಿ ಕಲಬೆರೆಕೆ ಮಾಡುತ್ತಾರೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಇದರಲ್ಲಿ, ಕೃತಕ ಬಣ್ಣಗಳನ್ನು ಬಳಸಲಾಗುತ್ತದೆ. ಇಟ್ಟಿಗೆ ಪುಡಿಯನ್ನು ಕೂಡಾ ಇದರಲ್ಲಿ ಬೆರೆಸುವವರೂ ಇದ್ದಾರೆ.  ಕೆಟ್ಟು ಹೋದ ಮೆಣಸಿನ ಕಾಯಿಗಳನ್ನು ಪ್ರತ್ಯೇಕವಾಗಿ ಪುಡಿ ಮಾಡಿ ಅದನ್ನೂ ಬೆರೆಸುತ್ತಾರೆ.


ಇದನ್ನೂ ಓದಿ : Badam Milk Benefits : ಪ್ರತಿದಿನ ಸೇವಿಸಿ ಬಾದಾಮಿ ಹಾಲು : ಇಲ್ಲಿದೆ ನೋಡಿ ಆರೋಗ್ಯ ಪ್ರಯೋಜನಗಳು!


ಕೆಂಪು ಮೆಣಸಿನ ಪುಡಿಯ ಶುದ್ಧತೆಯನ್ನು ಗುರುತಿಸುವುದು ಹೇಗೆ ?
ಸ್ವಲ್ಪ ಪುಡಿಯನ್ನು ನೆಲದ ಮೇಲೆ ಅಥವಾ ಸ್ವಚ್ಛವಾದ ಜಾಗದಲ್ಲಿ ಹಾಕಿ. ನೆನಪಿರಲಿ ಮೆಣಸಿನ ಪುಡಿ ಹಾಕುವ ಜಾಗ ಸ್ವಚ್ಛವಾಗಿರಬೇಕು. ಈಗ ಒಂದು ಸ್ಟೀಲ್ ಗ್ಲಾಸ್ (Steel glass) ತೆಗೆದುಕೊಳ್ಳಿ. ಮೆಣಸಿನ ಪುಡಿಯ ಮೇಲೆ  ಲೋಟವನ್ನು ರುಬ್ಬುವಂತೆ ಗಟ್ಟಿಯಾಗಿ ತಿರುಗಿಸಿ. ಹೀಗೆ ಮಾಡುವಾಗ ಲೋಟಕ್ಕೆ ಏನಾದರೂ ಸಿಕ್ಕಿದಂತೆ ಭಾವಿಸಿದರೆ, ಈ ಮೆಣಸಿನ ಪುಡಿಯಲ್ಲಿ ಕಲಬೆರಕೆಯಿದೆ ಎಂದರ್ಥ. 


ಮೆಣಸಿನ ಪುಡಿಯಲ್ಲಿ ಸ್ಟಾರ್ಚ್ ಇದೆಯೇ ಎಂದು ಪರೀಕ್ಷಿಸಲು, ನೀವು ಅರ್ಧ ಟೀ ಚಮಚ ಮೆಣಸಿನ ಪುಡಿಯನ್ನು (Chilly powder) ತೆಗೆದುಕೊಳ್ಳಬೇಕು. ಅದಕ್ಕೆ ಟಿಂಚರ್ ಅಯೋಡಿನ್ ಅಥವಾ ಅಯೋಡಿನ್ ದ್ರಾವಣದ ಹನಿಗಳನ್ನು ಸೇರಿಸಿ. ಪುಡಿಯ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದರೆ ಸ್ಟಾರ್ಚ್ ಬೆರೆಸಲಾಗಿದೆ ಎನ್ನುವುದು ಖಚಿತ. 


ಇದನ್ನೂ ಓದಿ : food for rainy days: ಆರೋಗ್ಯ ಚೆನ್ನಾಗಿರಬೇಕಾದರೆ ಮಳೆಗಾಲದಲ್ಲಿ ತಿಂಡಿ ತಿನಿಸು ಹೀಗಿರಬೇಕು


ಬಣ್ಣ ಕಲಬೆರಕೆಯಾಗಿದೆಯೆ ಅಥವಾ ಇಲ್ಲವೇ ಎಂದು ಪರೀಕ್ಷಿಸಲು, ಅರ್ಧ ಗ್ಲಾಸ್ ನೀರನ್ನು (water) ತೆಗೆದುಕೊಳ್ಳಿ. ಇದಕ್ಕೆ ಒಂದು ಟೀಚಮಚ ಕೆಂಪು ಮೆಣಸಿನ ಪುಡಿ ಸೇರಿಸಿ. ಮೆಣಸಿನ ಪುಡಿ ನೀರಿನಲ್ಲಿ ಕರಗಿ ನೀರು ಕಡು ಕೆಂಪು ಬಣ್ಣಕ್ಕೆ ಬಂದರೆ ಬಣ್ಣ ಕಲಬೆರಕೆಯಾಗುತ್ತದೆ. ತಿಳಿದಿರಲಿ ಮೆಣಸಿನಕಾಯಿ ಎಂದಿಗೂ ನೀರಿನಲ್ಲಿ ಸಂಪೂರ್ಣವಾಗಿ ಕರಗುವುದಿಲ್ಲ, ಆದರೆ ತೇಲುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.