How to get black hair naturally: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಜನರು ಗೋರಂಟಿ ಬಳಸುತ್ತಾರೆ. ಆದರೆ ಗೋರಂಟಿ ಬಣ್ಣವು ತಮ್ಮ ಕೂದಲಿನಿಂದ ಬೇಗನೆ ಮಾಸುತ್ತದೆ. ಜೊತೆಗೆ ಬಹಳ ಬೇಗ ಬಿಳಿ ಕೂದಲು ಮತ್ತೆ ಕಾಣಲು ಆರಂಭಿಸುತ್ತದೆ. ಆದರೆ ನೀವು ಗೋರಂಟಿ ಜೊತೆಗೆ ಈ ವಿಶೇಷ ವಸ್ತುವನ್ನು ಬೆರೆಸಿ ಹಚ್ಚಿದರೆ ಕೂದಲು ದೀರ್ಘಕಾಲದವರೆಗೆ ಕಪ್ಪಾಗಿ ಕಾಣುತ್ತದೆ. ವಿಶೇಷವೆಂದರೆ ಇದರಿಂದ ಕೂದಲಿಗೆ ಯಾವುದೇ ರೀತಿಯ ಹಾನಿಯೂ ಆಗುವುದಿಲ್ಲ.


COMMERCIAL BREAK
SCROLL TO CONTINUE READING

ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಗೋರಂಟಿಯಲ್ಲಿ ಏನು ಬೆರೆಸಬಹುದು ಎಂಬುದನ್ನು ತಿಳಿಯೋಣ...


ಇದನ್ನೂ ಓದಿ- Hair Care Tips: ಕೂದಲು ಉದುರುವಿಕೆಗೆ ಪರಿಹಾರ ಪಡೆಯಲು ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ


ನೈಸರ್ಗಿಕವಾಗಿ ಕಪ್ಪು ಕೂದಲನ್ನು ಪಡೆಯಲು ಸಿಂಪಲ್ ಸಲಹೆಗಳು:
ಮೆಹಂದಿಯಲ್ಲಿ (Mehandi) ಕಾಫಿಯನ್ನು ಬೆರೆಸಿ ಹಚ್ಚುವುದರಿಂದ ಕೂದಲು ಗಾಢ ಕಪ್ಪು ಬಣ್ಣವನ್ನು ಪಡೆಯುತ್ತದೆ. ಇದಕ್ಕಾಗಿ ನೀವು ಗೋರಂಟಿಗೆ ಕಾಫಿ ಪುಡಿಯನ್ನು ಈ ರೀತಿ ಬೆರೆಸಿ. 
>>  ಮೊದಲಿಗೆ ಪಾತ್ರೆಯಲ್ಲಿ  ಒಂದು ಕಪ್ ನೀರಿನ್ನು ಹಾಕಿ ಅದಕ್ಕೆ ಒಂದು ಚಮಚ ಕಾಫಿ ಪುಡಿಯನ್ನು ಬೆರೆಸಿ ಕುದಿಸಿ. ನೀರು ಚೆನ್ನಾಗಿ ಕುದ್ದ ಬಳಿಕ ಪಾತ್ರೆಯನ್ನು ಕೆಳಗಿಳಿಸಿ ತಣ್ಣಗಾಗಲು ಬಿಡಿ.  
>> ಬಳಿಕ ಆ ನೀರಿಗೆ 4-5 ಚಮಚ ಗೋರಂಟಿ ಪುಡಿಯನ್ನು ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ. 
>> ಈ ಗೋರಂಟಿಯನ್ನು ಕೂದಲಿಗೆ ಹಚ್ಚಿ. 
>> 3-4 ಗಂಟೆಗಳ ಕಾಲ ಬಿಟ್ಟು ನಂತರ ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ. >> ವಾರಕ್ಕೆ ಎರಡು ಬಾರಿ ಇದನ್ನು ಮಾಡಿ.


ಇದನ್ನೂ ಓದಿ- Hair Care: ಕೂದಲನ್ನು ನೈಸರ್ಗಿಕವಾಗಿ ಆರೋಗ್ಯವಾಗಿರಿಸಲು ಶಾಂಪೂ ಮಾಡುವ ಮೊದಲು ಈ ಸಣ್ಣ ವಿಧಾನವನ್ನು ಅನುಸರಿಸಿ


ಕೂದಲನ್ನು ಕಪ್ಪಾಗಿಸಲು, ಗೋರಂಟಿಯಲ್ಲಿ ಬಾಳೆಹಣ್ಣನ್ನು ಮಿಶ್ರಣ ಮಾಡಿ:
ಗೋರಂಟಿಯಲ್ಲಿ ಬಾಳೆಹಣ್ಣನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚುವುದರಿಂದ, ಕೂದಲು (Hair) ದಪ್ಪವಾಗುವುದರ ಜೊತೆಗೆ ಕಪ್ಪಾಗುತ್ತದೆ. 
* ಇದಕ್ಕಾಗಿ 2 ಚಮಚ ಗೋರಂಟಿ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ರಾತ್ರಿಯಿಡಿ ಬಿಡಿ. * ಬೆಳಿಗ್ಗೆ ಮಾಗಿದ ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಗೋರಂಟಿಯೊಂದಿಗೆ ಬೆರೆಸಿ ಹೇರ್ ಪ್ಯಾಕ್ ಮಾಡಿ. 
* ಈ ಹೇರ್ ಪ್ಯಾಕ್ ಅನ್ನು ಅನ್ವಯಿಸಿದ ಬಳಿಕ 10 ನಿಮಿಷಗಳ ಕಾಲ ಒಣಗಲು ಬಿಡಿ.
* ಇದರ ನಂತರ, ಕೂದಲನ್ನು ಸೌಮ್ಯವಾದ ಶಾಂಪೂವಿನಿಂದ ತೊಳೆಯಿರಿ 
* ಸಾಮಾನ್ಯ ನೀರಿನಿಂದ ಕೂದಲನ್ನು ವಾಶ್ ಮಾಡಿ. ವಾರಕ್ಕೊಮ್ಮೆ ಈ ಕೆಲಸ ಮಾಡುವುದರಿಂದ ನೈಸರ್ಗಿಕ ಕಪ್ಪು ಕೂದಲನ್ನು ಪಡೆಯಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ