Shampoo for Scalp : ತಲೆ ಹೊಟ್ಟು ನಿವಾರಣೆಗೆ ಉತ್ತಮ ಶಾಂಪೂ ಆಯ್ಕೆ ಮಾಡುವುದು ಹೇಗೆ ಗೊತ್ತಾ?

ನೆತ್ತಿಗೆ ಕೂದಲಿನ ಶಾಂಪೂ ಆಯ್ಕೆ ಮಾಡುವಾಗ ನೀವು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ, ತಲೆಹೊಟ್ಟು ಎಂದಿಗೂ ಮರಳಿ ಬರುವುದಿಲ್ಲ.

Written by - Channabasava A Kashinakunti | Last Updated : Sep 5, 2021, 11:02 AM IST
  • ತಲೆಹೊಟ್ಟು ನಿವಾರಿಸುವುದು ತುಂಬಾ ಕಷ್ಟದ ಕೆಲಸ
  • ಲೆಹೊಟ್ಟು ತೆಗೆಯಲು ಶಾಂಪೂ ಆರಿಸುವಾಗ ಮತ್ತು ಬಳಸುವಾಗ
  • ವಾರಕ್ಕೆ ಎರಡು ಬಾರಿ ತಲೆಹೊಟ್ಟು ನಿವಾರಣಾ ಶಾಂಪೂ ಬಳಸಿ
Shampoo for Scalp : ತಲೆ ಹೊಟ್ಟು ನಿವಾರಣೆಗೆ ಉತ್ತಮ ಶಾಂಪೂ ಆಯ್ಕೆ ಮಾಡುವುದು ಹೇಗೆ ಗೊತ್ತಾ? title=

ನವದೆಹಲಿ : ತಲೆಹೊಟ್ಟು ನಿವಾರಿಸುವುದು ತುಂಬಾ ಕಷ್ಟದ ಕೆಲಸ. ಏಕೆಂದರೆ ಅದು ಮತ್ತೆ ಮತ್ತೆ ಬರುತ್ತಲೇ ಇರುತ್ತದೆ. ವಾಸ್ತವವಾಗಿ, ತಲೆಹೊಟ್ಟು ತೊಡೆದುಹಾಕಲು, ನೀವು ನಿಮ್ಮ ತಲೆಯ ನೆತ್ತಿಯನ್ನು ಆರೋಗ್ಯಕರವಾಗಿಸಬೇಕು. ಏಕೆಂದರೆ, ಸೋಂಕು ಅಥವಾ ಶುಷ್ಕತೆಯಿಂದಾಗಿ, ನೆತ್ತಿಯ ಜೀವಕೋಶಗಳು ಹಾನಿಯಾಗಿ ಹೊರಗೆ ಬರಲು ಪ್ರಾರಂಭಿಸುತ್ತವೆ. ಆದರೆ, ನೆತ್ತಿಗೆ ಕೂದಲಿನ ಶಾಂಪೂ ಆಯ್ಕೆ ಮಾಡುವಾಗ ನೀವು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ, ತಲೆಹೊಟ್ಟು ಎಂದಿಗೂ ಮರಳಿ ಬರುವುದಿಲ್ಲ.

ತಲೆಹೊಟ್ಟು ತೆಗೆಯಲು ಶಾಂಪೂ ಆರಿಸುವಾಗ ಮತ್ತು ಬಳಸುವಾಗ ಯಾವುದನ್ನು ನೆನಪಿನಲ್ಲಿಡಬೇಕು?

ತಡೆಗಟ್ಟುವಿಕೆ ಕುರಿತು ಮಾತನಾಡಿದ ಮೌಂಟ್ ಸಿನೈ ಆಸ್ಪತ್ರೆಯ ಚರ್ಮರೋಗ ತಜ್ಞ Dr. Joshua Zeichner ,ತಲೆಹೊಟ್ಟು ಹೋಗಲಾಡಿಸಲು, ನೆತ್ತಿ(Scalp)ಯ ಉರಿಯೂತ ಮತ್ತು ಶುಷ್ಕತೆಯನ್ನು ತೊಡೆದುಹಾಕುವ ಅಗತ್ಯವಿದೆ ಎಂದು ಹೇಳಿದರು. ಆದ್ದರಿಂದ, ಡ್ಯಾಂಡ್ರಫ್ ಶಾಂಪೂ ಆಯ್ಕೆಮಾಡುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ : Weight Loss:ಕರಿಮೆಣಸಿನ ಈ ಚಹಾ ತೂಕ ಇಳಿಕೆಗೆ ರಾಮಬಾಣ, ಈ ರೀತಿ ತಯಾರಿಸಿ

ಈ ಅಂಶಗಳು ಶಾಂಪೂದಲ್ಲಿರಬೇಕು

ಪೈರಿಥಿಯೋನ್ ಜಿಂಕ್, ಸೆಲೆನಿಯಮ್ ಸಲ್ಫೈಡ್, ಕೆಟೋಕೊನಜೋಲ್, ಸ್ಯಾಲಿಸಿಲಿಕ್ ಆಸಿಡ್ ಅಥವಾ ಕಲ್ಲಿದ್ದಲು ಟಾರ್(Selenium Sulfide, Ketoconazole, Salicylic Acid and Coal tar) ಹೊಂದಿರುವ ಶ್ಯಾಂಪೂಗಳು ತಲೆಹೊಟ್ಟು ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿ ಎಂದು ತಜ್ಞರು ಹೇಳಿದ್ದಾರೆ. ನಿಮ್ಮ ಚರ್ಮಕ್ಕೆ ಉತ್ತಮವಾದ ಶಾಂಪೂವನ್ನು ಕಂಡುಹಿಡಿಯಲು, ನೀವು ಈ ಅಂಶಗಳಿರುವ ಶಾಂಪೂಗಳನ್ನು ಪ್ರಯತ್ನಿಸಬೇಕು. ನೀವು ಶಾಂಪೂ ಖರೀದಿಸಿದಾಗಲೆಲ್ಲಾ, ಈ ಪದಾರ್ಥಗಳು ಅದರಲ್ಲಿ ಇದೆಯೇ ಎಂದು ನೋಡಲು ಅದರ ಪ್ಯಾಕೇಟ್‌ನ ಮೇಲ್ಭಾಗವನ್ನು ಪರೀಕ್ಷಿಸಿ.

ಕೂದಲಿನ ಪ್ರಕಾರವನ್ನು ನೆನಪಿನಲ್ಲಿಡಿ

ತಜ್ಞರ ಪ್ರಕಾರ, ಮೇಲೆ ತಿಳಿಸಿದ ಅಂಶಗಳು ತಲೆಹೊಟ್ಟು ತೆಗೆಯುವಲ್ಲಿ ಪರಿಣಾಮಕಾರಿ, ಆದರೆ ಕೆಲವೊಮ್ಮೆ ನೆತ್ತಿಯಿಂದ ಅಗತ್ಯವಿರುವ ತೇವಾಂಶವನ್ನು ಕಡಿಮೆ ಮಾಡಬಹುದು. ಹಾಗಾಗಿ ನಿಮ್ಮ ಕೂದಲು(Hair) ಒಣಗಿದ್ದರೆ, ಗುಂಗುರು ಅಥವಾ ಹೆಚ್ಚು ನೈಸರ್ಗಿಕ ತೇವಾಂಶ ಬೇಕಿದ್ದರೆ, ಶಾಂಪೂ ಆಯ್ಕೆ ಮಾಡುವಾಗ, ಅದರಲ್ಲಿ ಅಲೋವೆರಾ, ತೆಂಗಿನ ಎಣ್ಣೆ ಅಥವಾ ಶಿಯಾ ಬೆಣ್ಣೆಯಂತಹ ಪದಾರ್ಥಗಳು ಇದೆಯೇ ಎಂದು ಪರೀಕ್ಷಿಸಿ.

ಕೂದಲು ಮತ್ತು ನೆತ್ತಿಯನ್ನು ಚೆನ್ನಾಗಿ ತೊಳೆಯಿರಿ

ಉತ್ತಮ ಫಲಿತಾಂಶಗಳಿಗಾಗಿ, ಕೂದಲು ಮತ್ತು ನೆತ್ತಿಯನ್ನು ಚೆನ್ನಾಗಿ ತೊಳೆಯಬೇಕು(Scalp Washing). ಮೊದಲಿಗೆ, ಬೆರಳುಗಳ ಸಹಾಯದಿಂದ, ನಿಮ್ಮ ಶಾಂಪೂವನ್ನು ನೆತ್ತಿಯ ಮೇಲೆ ಉಜ್ಜಿಕೊಳ್ಳಿ. ಅದರ ನಂತರ ಶಾಂಪೂವನ್ನು ಕೂದಲಿನ ಮೇಲೆ ಸುಮಾರು 5 ನಿಮಿಷಗಳ ಕಾಲ ಬಿಡಿ. 5 ನಿಮಿಷಗಳ ನಂತರ, ಶಾಂಪೂವನ್ನು ಚೆನ್ನಾಗಿ ತೊಳೆದ ನಂತರ, ಆಂಟಿ-ಡ್ಯಾಂಡ್ರಫ್ ಕಂಡೀಷನರ್ ಬಳಸಿ.

ಇದನ್ನೂ ಓದಿ : Low Sodium Diet : ಕಡಿಮೆ ಉಪ್ಪು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ : ಯಾಕೆ ಇಲ್ಲಿದೆ ನೋಡಿ 

ವಾರದಲ್ಲಿ ಎಷ್ಟು ಸಲ ಶಾಂಪೂ ಉಪಯೋಗಿಸಬೇಕು?

ನೆತ್ತಿಯಿಂದ ತಲೆಹೊಟ್ಟು(Dandruff) ತೆಗೆದುಹಾಕಲು, ಆರಂಭದಲ್ಲಿ ವಾರಕ್ಕೆ ಎರಡು ಬಾರಿ ತಲೆಹೊಟ್ಟು ನಿವಾರಣಾ ಶಾಂಪೂ ಬಳಸಿ ಮತ್ತು ಫಲಿತಾಂಶಗಳು ಹೇಗೆ ಬರುತ್ತಿವೆ ಎಂದು ನೋಡಿ. ನೀವು ಫಲಿತಾಂಶ ಕಾಣದಿದ್ದರೆ, ನೀವು ವಾರಕ್ಕೆ ಮೂರು ಅಥವಾ ನಾಲ್ಕು ಬಾರಿ ಶಾಂಪೂ ಬಳಸಿ. ಇಲ್ಲದಿದ್ದರೆ, ವಾರಕ್ಕೆ ಎರಡು ಬಾರಿ ಶಾಂಪೂ ಹಾಕಿದರೆ ಸಾಕು.

ಇಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿರುವುದಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News