ಇಲಿಗಳಿಗೆ ವಿಷ ಹಾಕಿ ಪಾಪ ಕಟ್ಟಿಕೊಳ್ಳುವ ಬದಲು ಜಸ್ಟ ಹೀಗೆ ಮಾಡಿ..! ಒಂದು ಇಲಿ ಮನೆ ಹತ್ತಿರ ಬರಲ್ಲ
Rat problem in home : ಮನೆಯಿಂದ ಇಲಿಗಳನ್ನು ಹೊರಹಾಕಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲವೇ.. ನಿಮ್ಮ ಕಷ್ಟ ಏನು ಅಂತ ನಮಗೆ ಗೊತ್ತಾಗಿದೆ.. ಚಿಂತಿಸಬೇಡಿ.. ವಿಷವನ್ನು ಹಾಕಿ ಕೊಂದು ಪಾಪ ಕಟ್ಟಿಕೊಳ್ಳುವ ಬದಲು ಈ ಕೆಳಗೆ ನೀಡಿರುವ ಸರಳ ಉಪಾಯಗಳನ್ನು ಮಾಡಿ ನೋಡಿ..
Get Rid of Rats : ಕೆಲವರು ಇಲಿಗಳ ಹಾವಳಿಯಿಂದ ಬೇಸತ್ತಿದ್ದಾರೆ.. ಮನೆಯಿಂದ ಇವುಗಳನ್ನು ಹೊರ ಹಾಕಲು ಎಷ್ಟೇ ಪ್ರಯತ್ನ ಪಟ್ಟರೂ ಫಲ ನೀಡುತ್ತಿಲ್ಲ. ಇದರಿಂದಾಗಿ ಇಲಿಗಳನ್ನು ಹಿಡಿದು ಕೊಲ್ಲಲು ವಿಷವನ್ನು ಬಳಸುತ್ತಾರೆ. ಈ ರೀತಿಯ ಔಷಧಗಳ ಬಳಕೆಯು ಮಕ್ಕಳ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ, ಔಷಧಿಗಳನ್ನು ಬಳಸದೆಯೇ, ಮನೆಯಲ್ಲಿ ಕೆಲವು ಉತ್ಪನ್ನಗಳನ್ನು ಬಳಸಿಕೊಂಡು ಇಲಿಗಳನ್ನು ಸುಲಭವಾಗಿ ಓಡಿಸಬಹದು.
ಮಾತ್ರೆಗಳು : ನ್ಯಾಫ್ತಲೀನ್ ಮಾತ್ರೆಗಳಿಂದ ಬರುವ ವಾಸನೆಯನ್ನು ಇಲಿಗಳು ಇಷ್ಟಪಡುವುದಿಲ್ಲ. ಹಾಗಾಗಿ, ಇಲಿಗಳು ಓಡಾಡುವ ಜಾಗದಲ್ಲಿ ಇವುಗಳನ್ನು ನೇರವಾಗಿ ಇಡಿ. ಹಾಗಾಗದಿದ್ದಲ್ಲಿ ಅವುಗಳನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ ಮನೆಯ ಮೂಲೆಗಳಲ್ಲಿ ಸಿಂಪಡಿಸಿದರೆ ಹೆಗ್ಗಣಗಳು ಓಡಿಹೋಗುತ್ತವೆ.
ಇದನ್ನೂ ಓದಿ:ಅಕಾಲಿಕ ಬೂದು ಕೂದಲಿಗೆ ಬೆಸ್ಟ್ ಪರಿಹಾರ.. ಒಮ್ಮೆ ಪಾಲಿಸಿದ್ರೆ ವೃದ್ಧಾಪ್ಯದಲ್ಲೂ ಬಿಳಿಯಾಗಲ್ಲ!!
ಪುದೀನಾ ಎಣ್ಣೆ: ಮನೆಯ ಮೂಲೆಗಳಲ್ಲಿ ಪುದೀನಾ ಎಣ್ಣೆಯನ್ನು ಚಿಮುಕಿಸುವುದರಿಂದ, ಅದರಿಂದ ಹೊರಹೊಮ್ಮುವ ವಾಸನೆಯು ಇಲಿಗಳನ್ನು ಹಿಮ್ಮೆಟ್ಟಿಸುತ್ತದೆ. ಲವಂಗ ಮತ್ತು ಕಾಳುಮೆಣಸನ್ನು ಇಲಿಗಳು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಇಟ್ಟರೆ ಅದರಿಂದ ಬರುವ ಕ್ಷಾರೀಯ ವಾಸನೆಯು ಇಲಿಗಳನ್ನು ಹಿಮ್ಮೆಟ್ಟಿಸುತ್ತದೆ.
ಅಡಿಗೆ ಸೋಡಾ, ಪುದೀನಾ: ಇಲಿಗಳನ್ನು ಹಿಮ್ಮೆಟ್ಟಿಸಲು ಮತ್ತೊಂದು ಸುಲಭ ಮಾರ್ಗ ಅಡಿಗೆ ಸೋಡಾ ಮತ್ತು ಪುದೀನಾ. ಮೊದಲು ಒಂದು ಕಪ್ ಮೈದಾ ತೆಗೆದುಕೊಳ್ಳಿ. ಇದಕ್ಕೆ ಪುದೀನಾ ಎಣ್ಣೆ ಮತ್ತು ಅಡಿಗೆ ಸೋಡಾ ಸೇರಿಸಿ ಮಿಶ್ರಣ ಮಾಡಿ. ಈ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಮನೆಯಲ್ಲಿ ಇಲಿಗಳು ಬರುವ ಜಾಗಗಳಲ್ಲಿ ಇಟ್ಟರೆ ಆ ಜಾಗದಿಂದ ಇಲಿಗಳು ಓಡಿ ಹೋಗುತ್ತವೆ.
ಇದನ್ನೂ ಓದಿ:ಗೂಳಿ ಮಾತ್ರವಲ್ಲ.. ನಾಯಿಗೂ ಈ ಬಣ್ಣ ಕಂಡರೇ ಕೋಪ! ರಸ್ತೆಯಲ್ಲಿ ಓಡಾಡುವಾಗ ಹುಷಾರ್!!
ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ಪುಡಿಮಾಡಿ ಕುದಿಯುವ ನೀರಿಗೆ ಹಾಕಿ, ಉಪ್ಪು ಮತ್ತು ಟೆಟಾಲ್ ಸೇರಿಸಿ ಮತ್ತು ಮೂಲೆಯಲ್ಲಿ ನೀರನ್ನು ಚಿಮುಕಿಸಿ. ಇದು ಇಲಿಗಳನ್ನು ದೂರವಿಡುತ್ತದೆ. ಅಲ್ಲದೆ, ಈರುಳ್ಳಿಯನ್ನು ಅರ್ಧದಷ್ಟು ಕತ್ತರಿಸಿ ಇಡಿ, ಇಲಿಗಳು ಆ ಜಾಗಕ್ಕೆ ಬರುವುದೇ ಇಲ್ಲ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.