ಅಕಾಲಿಕ ಬೂದು ಕೂದಲಿಗೆ ಬೆಸ್ಟ್‌ ಪರಿಹಾರ.. ಒಮ್ಮೆ ಪಾಲಿಸಿದ್ರೆ ವೃದ್ಧಾಪ್ಯದಲ್ಲೂ ಬಿಳಿಯಾಗಲ್ಲ!!

Best White Hair Remedy: ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗಲು ಪ್ರಾರಂಭಿಸಿದ್ದರೆ, ಅವುಗಳನ್ನು ಕಪ್ಪಾಗಿಸಲು ರಾಸಾಯನಿಕ ಬಣ್ಣಗಳನ್ನು ಬಳಸುವ ಬದಲು, ಈ ಮನೆಮದ್ದುಗಳನ್ನು ಬಳಸಿ. 
 

1 /7

ಕೂದಲು ಬಿಳಿಯಾಗುವುದು ಬರೀ ವಯಸ್ಸಾದವರ ಸಮಸ್ಯೆಯಲ್ಲ.. ಹದಿಹರೆಯದವರಲ್ಲಿಯೂ ಸಮಸ್ಯೆ ಕಾಡುತ್ತಿದೆ.. ಇದಕ್ಕೆ ಪರಿಹಾರವಾಗಿ ದೇಸಿ ತುಪ್ಪ, ಆಮ್ಲಾ, ಭೃಂಗರಾಜ, ಬ್ರಾಹ್ಮಿ ಮುಂತಾದ ನೈಸರ್ಗಿಕ ಗಿಡಮೂಲಿಕೆಗಳನ್ನು ಬಳಸಲು ಪ್ರಾರಂಭಿಸಿ. ಇದರಿಂದ ನಿಮ್ಮ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದಿಲ್ಲ...   

2 /7

ಆಮ್ಲಾ, ಭೃಂಗರಾಜ್, ಬ್ರಾಹ್ಮಿ ಮತ್ತು ಕರಿಬೇವಿನ ಎಲೆಗಳು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ಗುಣಪಡಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳನ್ನು 1 ಚಮಚ ತುಪ್ಪದೊಂದಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಸೇವಿಸಿ.. ಅಲ್ಲದೇ ಮಲಗುವಾಗ ಹೊಂಕಳಿಗೆ ತುಪ್ಪ ಹಾಕಿಕೊಂಡರೇ ಕೂದಲು ಉತ್ತಮವಾಗಿ ಬೆಳೆಯುತ್ತದೆ..   

3 /7

ನಿಮ್ಮ ಕೂದಲನ್ನು ನಿಯಮಿತವಾಗಿ ಬಾಚಿಕೊಳ್ಳಿ.. ಕೂದಲಿಗೆ ಪೋಷಣೆಯನ್ನು ಒದಗಿಸಲು ಹರ್ಬಲ್ ಹೇರ್ ಮಾಸ್ಕ್‌ಗಳನ್ನು ಬಳಸಿ. ದಾಸವಾಳ, ಕರಿಬೇವಿನ ಸೊಪ್ಪು, ಬೇವು, ಆಮ್ಲಾ, ಬ್ರಾಹ್ಮಿ ಮುಂತಾದ ಪದಾರ್ಥಗಳನ್ನು ಒಳಗೊಂಡಿರುವ ಇಂತಹ ಹೇರ್ ಆಯಿಲ್ ಬಳಸುವುದು ಉತ್ತಮ.. ವಾರಕ್ಕೆ ಒಂದು-ಎರಡು-ಮೂರು ಬಾರಿ ನಿಮ್ಮ ಕೂದಲಿಗೆ ಎಣ್ಣೆಯನ್ನು ಹಚ್ಚಿಕೊಂಡರೇ ಇನ್ನೂ ಒಳ್ಳೆಯದು..   

4 /7

ಎಣ್ಣೆ ಹಚ್ಚುವುದು ನಿಮಗೆ ಸರಿಹೊಂದುವುದಿಲ್ಲವಾದರೆ, ನಿಮ್ಮ ಹೇರ್‌ಮಾಸ್ಕ್‌ನಲ್ಲಿ ದಾಸವಾಳ, ಬೇವು, ಯಸ್ತಿಮಧು, ಬ್ರಾಹ್ಮಿ, ಆಮ್ಲಾ ಮತ್ತು ಭೃಂಗರಾಜದಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ..    

5 /7

ನಿಮ್ಮ ಆಹಾರಕ್ರಮವನ್ನು ಸುಧಾರಿಸಿ. ನಿಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳು, ಎಳ್ಳು, ಆಮ್ಲಾ, ಹಾಗಲಕಾಯಿ ಮತ್ತು ಹಸುವಿನ ತುಪ್ಪದಂತಹ ಪೋಷಕಾಂಶಗಳನ್ನು ಸೇರಿಸಿ.   

6 /7

ಬೇಗನೆ ಮಲಗುವುದು ಬಹಳ ಮುಖ್ಯ. ರಾತ್ರಿ 10 ಗಂಟೆಗೆ ಮಲಗಲು ಪ್ರಯತ್ನಿಸಿ. ಇದು ನಿಮ್ಮ ಕೂದಲಿನ ಬೆಳವಣಿಗೆಗೆ ಸಹಕಾರಿ... ಪ್ರಾಣಾಯಾಮ ಮಾಡಿದರೂ ಕೂದಲು ಬೂದು ಬಣ್ಣಕ್ಕೆ ಬರುವುದಿಲ್ಲ, ಆದ್ದರಿಂದ ಪ್ರತಿದಿನ ಬೆಳಿಗ್ಗೆ ಮತ್ತು ಮಲಗುವ ಸಮಯದಲ್ಲಿ ಪ್ರಾಣಾಯಾಮ ಮಾಡಿ.  

7 /7

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.