spider web: ಇಲಿ, ನೊಣ, ಸೊಳ್ಳೆ ಬಿಡಿ ಇವುಗಳ ನಂತರ ಮನೆಯಲ್ಲಿ ಗೂಡು ಕಟ್ಟುತ್ತಾ ತಲೆ ನೋವು ಹೆಚ್ಚು ಮಾಡೋದು ಜೇಡದ ಹುಳು. ಎಷ್ಟೇ ಭಾರಿ ನಾಶ ಮಾಡಿದರೂ, ಈ ಹುಳುಗಳು ಪದೇ ಪದೇ ಗೂಡು ಕಟ್ಟುತ್ತಲೇ ಇರುತ್ತವೆ. ಹಾಗಾದರೆ ಈ ಜೇಡಗಳನ್ನು ತಡೆಯುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಸಿಂಪಲ್‌ ಟಿಪ್ಸ್‌


COMMERCIAL BREAK
SCROLL TO CONTINUE READING

ಕಷ್ಟ ಪಟ್ಟು ಗೃಹಿಣಿಯರು ಮನೆಯನ್ನು ಸ್ವಚ್ಛಮಾಡುತ್ತಾರೆ. ಆದರೆ ಕ್ಷಣರ್ಧದಲ್ಲಿ ಮತ್ತೆ ಈ ಜೇಡಗಳು ಗೂಡು ಕಟ್ಟಿ ವಾಸಿಸಲು ಆರಂಭಿಸುತ್ತವೆ.


ಈ ಸಮಸ್ಯಗೆ ಪರಿಹಾರ ಇದೆ. ಈ ರೀತಿ ಮಾಡುವುದರಿಂದ ಜೇಡಗಳು ಮತ್ತೊಮ್ಮೆ ನಿಮ್ಮ ಮನೆಯಲ್ಲಿ ಬಲೇ ಕಟ್ಟದಂತೆ ತಡೆಯ ಬಹುದು. ಅದು ಹೇಗೆ ಮುಂದೆ ಓದಿ...


ಈಗಾಗಲೆ ನಿಮ್ಮ ಮನೆಯಲ್ಲಿ ಜೇಡ ಬಲೆ ಎಣೆದಿದ್ದರೆ, ಮೊದಲು ಒಂದು ಪೊರಕೆಯ ಸಹಾಯದಿಂದ ಅ ಗೂಡನ್ನು ನಾಶ ಮಾಡಿ ಸ್ಥಳವನ್ನು ಸ್ವಚ್ಛಗೊಳಿಸಿಡಿ. ನಂತರ ಬೌಲ್‌ನಲ್ಲಿ ಚೂರು ವೈಟ್‌ ವಿನೆಗರ್‌ ಹಾಕಿ ಅದಕ್ಕೆ ಚೂರು ನೀರು ಬೆರೆಸಿ.


ಇದನ್ನೂ ಓದಿ: Split ends: ಸೀಳಿದ ತುದಿಯ ಕಾರಣ ಕೂದಲು ಬೆಳೆಯುತ್ತಿಲ್ಲವೇ? ಈ ಟಿಪ್ಸ್‌ ಬಳಸಿ ಹಾವಿನಂತಹ ಜಡೆ ನಿಮ್ಮದಾಗುತ್ತೆ


ಈ ಮಿಶ್ರಣವನ್ನು ಸ್ವಲ್ಪ ಸಮಯದ ವರೆಗೆ ಹಾಗೆಯ ಇಡಿ, ಈ ಎರಡು ಪದಾರ್ಥಗಳು ಕೂಡ ಚಿನ್ನಾಗಿ ಮಿಕ್ಸ್‌ ಆಗಬೇಕು. ನಂತರ ಈ ಮಿಶ್ಣದ ಬೌಲ್‌ನಲ್ಲಿ ಒಂದು ಬಟ್ಟೆಯನ್ನು ಅದ್ದಿ ಒಂದು ಉದ್ದವಾದ ಕೋಲು ಅಥವಾ ಪೊರಕೆಗೆ ಇದನ್ನು ಕಟ್ಟಿ ತುದಿಯಿಂದ ಗೋಡೆಯನ್ನು ಒರೆಸಿಕೊಳ್ಳಿ. 


ಇದು ಜೇಡಗಳು ಮತ್ತೆ ಆ ಸ್ಥಳದಲ್ಲಿ ಬಲೆ ಎಣೆಯದಂತೆ ತಡೆಯಲು ಸಹಾಯ ಮಾಡುತ್ತದೆ.


ಕೇವಲ ವೈಟ್‌ ವಿನೆಗರ್‌ ಅಷ್ಟೆ ಅಲ್ಲ ಬೆಳ್ಳುಳ್ಳಿ ಹಾಗೂ ಚಕ್ಕೆಯ ಮಿಶ್ರಣ ಕೂಡ ಈ ಜೇಡಗಳು ಬಲೆ ಎಣೆಯದಂತೆ ತಡೆಯಲು ಸಹಾಯ ಮಾಡುತ್ತದೆ. ಒಂದು ಜಾರ್‌ನಲ್ಲಿ ಬೆಳ್ಳುಳ್ಳಿ ಹಾಗೂ ಚಕ್ಕೆಯ ತುಂಡುಗಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ಸ್ವಾಲ್ಪ ನೀರು ಸೇರಿಸಿ ಸೋಸಿಕೊಳ್ಳಿ. ಮನೆ ಒರೆಸುವ ಮೋಪ್‌ನಲ್ಲಿ ಈ ರಸವನ್ನು ಅದ್ದಿಕೊಂಡು ಮನೆಯ ಗೋಡೆಯ ಮೂಲೆಗಳು ಹಾಗೂ ಜೇಡ ಬಲೆ ಎಣೆಯುವ ಜಾಗಗಳಲ್ಲಿ ಇದನ್ನು ಒರೆಸಿ. ಇದು ಜೇಡ ಆ ಸ್ಥಳದಲ್ಲಿ ಬಲೆ ಎಣೆಯದಂತೆ ತಡೆಯುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 


  



ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.