Relationship Tips: ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನ, ತಿಂಗಳ ಪ್ರಮುಖ ದಿನಾಂಕಗಳು, ಉಪವಾಸ ಮತ್ತು ಹಬ್ಬಗಳಿಗೆ ಕೆಲವು ನಿಯಮಗಳನ್ನು ನೀಡಲಾಗಿದೆ. ಈ ದಿನದಂದು, ಮಹಿಳೆಯರು ಮತ್ತು ಪುರುಷರು ಕೆಲವು ವಿಷಯಗಳನ್ನು ಅನುಸರಿಸಬೇಕು. ಇದರಿಂದಾಗಿ ದೇವರು ಮತ್ತು ದೇವತೆಗಳ ಆಶೀರ್ವಾದವೂ ಸಿಗುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.


COMMERCIAL BREAK
SCROLL TO CONTINUE READING

ಧಾರ್ಮಿಕ ಗ್ರಂಥಗಳಲ್ಲಿ, ಮಹಿಳೆಯರು ಮತ್ತು ಪುರುಷರು ಕೆಲವು ವಿಶೇಷ ದಿನಗಳಲ್ಲಿ ಬ್ರಹ್ಮಚರ್ಯವನ್ನು ಆಚರಿಸಲು ಸಲಹೆ ನೀಡುತ್ತಾರೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಈ ದಿನಗಳಲ್ಲಿ ಗಂಡ ಮತ್ತು ಹೆಂಡತಿ ಸಂಬಂಧ ಬೆಳೆಸಿ, ಮಗು ಜನಿಸಿದರೆ, ಆ ಮಗು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾವ ದಿನಗಳಲ್ಲಿ ಪತಿ-ಪತ್ನಿ ಸಂಬಂಧದಿಂದ ದೂರವಿರಬೇಕು ಎಂದು ತಿಳಿಯೋಣ.


ಇದನ್ನೂ ಓದಿ: ಕಠಿಣ ಪರಿಸ್ಥಿತಿಯಲ್ಲಿಯೂ ಈ ವಿಚಾರಗಳು ಜೊತೆಗಿರಲಿ, ಕಳೆದು ಹೋಗುವುದು ಕಷ್ಟ ಕಾಲ 


ಧಾರ್ಮಿಕ ಗ್ರಂಥಗಳ ಪ್ರಕಾರ, ಈ ದಿನಗಳಲ್ಲಿ ದೈಹಿಕ ಸಂಬಂಧಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪರಿಗಣಿಸಲಾಗಿದೆ.


ನವರಾತ್ರಿ ಹಬ್ಬವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಸಮಯವನ್ನು ಮಾತೃದೇವತೆಯ ಆರಾಧನೆಯಲ್ಲಿ ಕಳೆಯಬೇಕು. ಇದರೊಂದಿಗೆ ಸಾತ್ವಿಕ ಆಹಾರವನ್ನು ಸೇವಿಸಬೇಕು ಮತ್ತು ಒಳ್ಳೆಯ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅದಕ್ಕಾಗಿಯೇ ಈ ಸಮಯದಲ್ಲಿ ದೈಹಿಕ ಸಂಬಂಧಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.


ಅಮಾವಾಸ್ಯೆಯ ದಿನದಂದು ಗಂಡ-ಹೆಂಡತಿ ಎಂದಿಗೂ ಸೆಕ್ಸ್ ಮಾಡಬಾರದು. ಹಾಗೆ ಮಾಡುವುದರಿಂದ ಅವರ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜೊತೆಗೆ ಜನಿಸಿದ ಮಗುವಿನ ಭವಿಷ್ಯವು ಕೆಟ್ಟದಾಗಿರುತ್ತದೆ.


ಹುಣ್ಣಿಮೆಯಂದು ಸಹ ಪತಿ-ಪತ್ನಿ ದೈಹಿಕ ಸಂಬಂಧ ಮಾಡಬಾರದು. ಈ ದಿನ ದುಷ್ಟ ಶಕ್ತಿಗಳು ಸಕ್ರಿಯವಾಗಿರುತ್ತವೆ.


ಇನ್ನು ಸೂರ್ಯ ಗೋಚರವನ್ನು ಸೂರ್ಯ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನದಂದು ಸಹ ಸೆಕ್ಸ್ ಮಾಡಿದರೆ ಜೀವನಪೂರ್ತಿ ಸಂಕಷ್ಟ ಅನುಭವಿಸಬೇಕಾಗುತ್ತದೆ.


ಇದರ ಜೊತೆಗೆ ಪ್ರತೀ ತಿಂಗಳ ಚತುರ್ಥಿ ಮತ್ತು ಅಷ್ಟಮಿ ದಿನಾಂಕದಂದೂ ಸಹ ಪತಿ-ಪತ್ನಿ ಒಂದಾಗಬಾರದು.


ಪಿತೃ ಪಕ್ಷದ 15 ದಿನಗಳಲ್ಲಿ ಎಂದಿಗೂ ದೈಹಿಕ ಸಂಪರ್ಕ ಮಾಡಬೇಡಿ. ಹೀಗೆ ಮಾಡುವುದರಿಂದ ಪೂರ್ವಜರು ಕೋಪಗೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.


ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ದಿನವೂ ಸೆಕ್ಸ್ ಮಾಡಬಾರದು. ಈ ವೇಳೆ ಹುಟ್ಟಿದ ಮಗು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.


ನೀವು ಯಾವಾಗ ಉಪವಾಸ ಮಾಡುತ್ತೀರೋ ಆ ದಿನ ಸಹ ಸೆಕ್ಸ್ ಮಾಡುವಂತಿಲ್ಲ. ಒಂದು ವೇಳೆ ಹೀಗೆ ಮಾಡಿದರೆ ನಿಮಗೆ ಉಪವಾಸದ ಫಲ ಸಿಗುವುದಿಲ್ಲ. ಉಪವಾಸದ ಸಮಯದಲ್ಲಿ ವ್ಯಕ್ತಿಯ ದೇಹ ಮತ್ತು ಮನಸ್ಸಿನ ಶುದ್ಧತೆಯನ್ನು ಹೊಂದಿರುವುದು ಅವಶ್ಯಕ.


ಇದನ್ನೂ ಓದಿ: ಬೇಸಿಗೆಗೂ ಮೊದಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಅಗ್ಗದ Split AC


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.