MarQ ಕಂಪನಿಯು ಬೇಸಿಗೆ ಆರಂಭಕ್ಕೂ ಮೊದಲೇ 4-ಇನ್-1 ಕನ್ವರ್ಟಬಲ್ ಏರ್ ಕಂಡಿಷನರ್‌ಗಳ ಹೊಸ ಶ್ರೇಣಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಉತ್ತಮ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿರುವ ಈ ಸ್ಪ್ಲಿಟ್ ಎಸಿ ಕಡಿಮೆ ವಿದ್ಯುತ್ ಬಳಸಿ ಕೆಲವೇ ನಿಮಿಷಗಳಲ್ಲಿ ಮನೆಯನ್ನು ತಂಪಾಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಯ ಬೆಲೆ, ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್...
MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿ ವೈಶಿಷ್ಟ್ಯಗಳು:
* MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಗಳು "ಇನ್ವರ್ಟರ್ ಟೆಕ್ನಾಲಜಿ" ಜೊತೆಗೆ ಇತ್ತೀಚಿನ BEE STAR ರೇಟಿಂಗ್‌ನೊಂದಿಗೆ ಬರುತ್ತದೆ.
* ಇದು ರೆಫ್ರಿಜರೆಂಟ್ (ಗ್ಯಾಸ್) ಹರಿವಿನ ಪ್ರಮಾಣವನ್ನು ನಿಯಂತ್ರಿಸಲು ಮತ್ತು ಕಡಿಮೆ ಶಕ್ತಿಯನ್ನು ಸೇವಿಸಲು ಸಂಕೋಚಕದ ವೇಗವನ್ನು ಸರಿಹೊಂದಿಸುತ್ತದೆ.
* ಮಾರ್ಕ್ಯೂ ಏರ್ ಕಂಡಿಷನರ್‌ಗಳು ವಿದ್ಯುತ್ ಏರಿಳಿತಗಳಿಂದ ರಕ್ಷಿಸಲು ಅಂತರ್ನಿರ್ಮಿತ ಸ್ಟೆಬಿಲೈಸರ್‌ಗಳನ್ನು ಮತ್ತು ಕೈಗಾರಿಕಾ ಹೊಗೆ, ಉಪ್ಪು, ಮರಳು ಮತ್ತು ಮಾಲಿನ್ಯಕಾರಕಗಳಿಂದ ರಕ್ಷಿಸುವ "ಬ್ಲೂ ಫಿನ್ ಕೋಟಿಂಗ್" ಅನ್ನು ಹೊಂದಿವೆ.
ಇದನ್ನೂ ಓದಿ- Smartphone Hacks: ನಿಮ್ಮ ಫೋನ್ ನಲ್ಲಿ ಆಗಾಗ್ಗೆ ಜಾಹೀರಾತುಗಳು ಬರುತ್ತಿವೆಯೇ? ಒಂದೇ ಕ್ಲಿಕ್ ನಲ್ಲಿ ನಿಲ್ಲಿಸಿ
MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಯ ವಿಶೇಷಣಗಳು:
MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಯು 'ಟರ್ಬೋ ಕೂಲ್ ಮೋಡ್' ಎಂಬ ಹೆಚ್ಚುವರಿ ಮೋಡ್ ನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಇದು ಕಡಿಮೆ ವಿದ್ಯುತ್ ಬಳಸುತ್ತದೆ. ಮಾತ್ರವಲ್ಲಿ ಕೆಲವೇ ನಿಮಿಷಗಳಲ್ಲಿ ಕೋಣೆಯನ್ನು ಹೆಚ್ಚು ತಂಪಾಗಿಸುತ್ತದೆ.
ಇದನ್ನೂ ಓದಿ- ಏರ್‌ಟೆಲ್ ಅಗ್ಗದ ಯೋಜನೆಯಲ್ಲಿ ಸಿಗುತ್ತಿದೆ ನಿತ್ಯ 2ಜಿಬಿ ಡಾಟಾ, ಅನ್ಲಿಮಿಟೆಡ್ ಕಾಲ್ ಜೊತೆಗೆ ಇನ್ನೂ ಹಲವು ಲಾಭ
MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿ ಬೆಲೆ:
MarQ ಕಂಪನಿಯು ಪ್ರಸ್ತುತ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಯ ಆರು ಮಾದರಿಗಳನ್ನು ಬಿಡುಗಡೆ ಮಾಡಿದೆ. ಅದರ ಬೆಲೆಗಳು ಕೆಳಕಂಡಂತಿವೆ:
* 1 ಟನ್ ಎಸಿ ಬೆಲೆ 26,499 ರೂ.
* 0.8 ಟನ್ ಎಸಿ ಬೆಲೆ 25,499 ರೂ.
* 1.5 ಟನ್ ಎಸಿ ಬೆಲೆ 32,999 ರೂ. ( 5 ಸ್ಟಾರ್ ರೇಟಿಂಗ್)
* 1.5 ಟನ್ ಎಸಿ ಬೆಲೆ 30,999 ರೂ. (4 ಸ್ಟಾರ್ ರೇಟಿಂಗ್)
* 1.5 ಟನ್ ಎಸಿ ಬೆಲೆ 29,999 ರೂ. (3 ಸ್ಟಾರ್ ರೇಟಿಂಗ್)
* 2 ಟನ್ ಎಸಿ ಬೆಲೆ 37,999 ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.