ಬೆಂಗಳೂರು : ಸಂತೋಷ ಮತ್ತು ಯಶಸ್ವಿ ಜೀವನವನ್ನು ನಡೆಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಆಚಾರ್ಯ ಚಾಣಕ್ಯರು ಅನೇಕ ಪ್ರಮುಖ ವಿಷಯಗಳನ್ನು ಹೇಳಿದ್ದಾರೆ. ಈ ವಿಷಯಗಳನ್ನು ಅನುಸರಿಸುವ ಮೂಲಕ ವ್ಯಕ್ತಿಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಮುಕ್ತಿ ಹೊಂದುವುದು ಸಾಧ್ಯವಾಗುತ್ತದೆ. ವ್ಯಕ್ತಿಯ ಜೀವನದಲ್ಲಿ ಎದುರಾಗುವ ಸವಾಲುಗಳು ಅಥವಾ ಕೆಟ್ಟ ಸಮಯಗಳನ್ನು ದಿಟ್ಟತನದಿಂದ ಎದುರಿಸಲು ಈ ನೀತಿ ಸಹಾಯ ಮಾಡುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರ ಚಾಣಕ್ಯ ನೀತಿಯಲ್ಲಿ ಹೇಳುವ ಪ್ರಕಾರ, ಒಬ್ಬ ವ್ಯಕ್ತಿಯು ಕೆಟ್ಟ ಸಮಯದಲ್ಲೂ ಕೆಲವು ವಿಶೇಷ ಗುಣಗಳನ್ನು ಬಿಟ್ಟುಕೊಡಬಾರದು. ಹೀಗೆ ಮಾಡುವ ಮೂಲಕ ಬೆಟ್ಟದಂಥಹ ಸಮಸ್ಯೆಗಳು ಕರಗಿ ಹೋಗುವುದು.
ಕೆಟ್ಟ ಸಮಯವು ಈ ವಿಷಯಗಳೊಂದಿಗೆ ಕೊನೆಗೊಳ್ಳುತ್ತದೆ :
ಸಕಾರಾತ್ಮಕತೆ : ಚಾಣಕ್ಯ ನೀತಿಯ ಪ್ರಕಾರ, ವ್ಯಕ್ತಿಯ ಆಲೋಚನೆ ಸಕಾರಾತ್ಮಕವಾಗಿದ್ದರೆ, ಪ್ರತಿಕೂಲ ಸಮಯವನ್ನು ಕೂಡಾ ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವುದು ಸಾಧ್ಯವಾಗುತ್ತದೆ. ವ್ಯಕ್ತಿಯು ತನ್ನ ಸರಿಯಾದ ಚಿಂತನೆಯ ಆಧಾರದ ಮೇಲೆ ಒತ್ತಡ ಮತ್ತು ಖಿನ್ನತೆಯಿಂದ ಹೊರಬರಬಹುದು. ಸ್ವತಃ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಪ್ರಗತಿ ಹೊಂದುವುದು ಕೂಡಾ ಸಾಧ್ಯವಾಗುತ್ತದೆ.
ಇದನ್ನೂ ಓದಿ : Astro Tips: 5 ರೂ. ನಾಣ್ಯದಲ್ಲಿದೆ ಮ್ಯಾಜಿಕ್, ಈ ಟ್ರಿಕ್ನಿಂದ ರಾತ್ರೋರಾತ್ರಿ ಹೊಳೆಯುತ್ತೆ ನಿಮ್ಮ ಅದೃಷ್ಟ.!
ಗುರಿಯತ್ತ ಕೇಂದ್ರೀಕರಿಸಿ : ಸಮಯ ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ ನಿಮ್ಮ ಗುರಿಯಿಂದ ಎಂದಿಗೂ ವಿಮುಖರಾಗಬೇಡಿ. ನಿಮ್ಮ ಗುರಿಯತ್ತ ಗಮನವನ್ನು ಇಟ್ಟು, ಧನಾತ್ಮಕವಾಗಿ ಮುಂದುವರೆಯಿರಿ. ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ಕೆಟ್ಟ ಸಮಯದಲ್ಲೂ ಮೇಲೆದ್ದು ನಿಲ್ಲುವುದು ಸಾಧ್ಯವಾಗುತ್ತದೆ.
ಕಠಿಣ ಕೆಲಸ : ಒಳ್ಳೆಯ ಅಥವಾ ಕೆಟ್ಟ ಸಮಯದಲ್ಲೂ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ಬಿಡಬಾರದು. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯು ಯಶಸ್ಸಿನ ಕೀಲಿ ಕೈಗಳಾಗಿವೆ. ಇವೆರಡು ಜೊತೆಗಿದ್ದರೆ, ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ಸನ್ನು ಪಡೆಯುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : Surya Shani Yuti 2023: ಸೂರ್ಯ ಶನಿ ಯುತಿ, ಈ 3 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ!
ಸತತ ಪ್ರಯತ್ನ : ಪದೇ ಪದೇ ಸೋಲು ಕಂಡರೂ ಎದೆಗುಂದಬೇಡಿ. ನಿರಾಶೆ ಮತ್ತು ಹತಾಶೆ ಮನುಷ್ಯನ ದೊಡ್ಡ ಶತ್ರುಗಳು. ಆದ್ದರಿಂದ ಎಂದಿಗೂ ನಿರುತ್ಸಾಹಗೊಳ್ಳಬೇಡಿ ಮತ್ತು ಪ್ರಯತ್ನಿಸುತ್ತಲೇ ಇರಿ. ಕತ್ತಲು ಕಳೆದು ಬೆಳಕಾಗಲೇ ಬೇಕು ಎನ್ನುವ ಸತ್ಯ ಅರಿತು ಪ್ರಯತ್ನ ಮುಂದುವರೆಸುತ್ತಲೇ ಇರಿ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.