Ice Beauty Tips: ಮುಖಕ್ಕೆ ಐಸ್ ಮಸಾಜ್ ಮಾಡುವಾಗ ಮರೆತು ಕೂಡ ಈ ತಪ್ಪುಗಳನ್ನು ಮಾಡಬೇಡಿ
Ice Beauty Tips: ಚರ್ಮದ ಮೇಲೆ ಐಸ್ ಅನ್ನು ಬಳಸುವಾಗ ಯಾವ ರೀತಿ ಮುನ್ನೆಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಯೋಣ...
Ice Beauty Tips: ಮುಖಕ್ಕೆ ಐಸ್ ಹಚ್ಚುವುದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಮೇಕಪ್ ಮಾಡುವ ಮುನ್ನ ಫೇಸ್ ಐಸಿಂಗ್ ಮಾಡುವುದರಿಂದ ಮೇಕಪ್ ದೀರ್ಘಕಾಲ ಉಳಿಯುತ್ತದೆ. ಇದಲ್ಲದೇ, ಮುಖಕ್ಕೆ ಐಸ್ ಹಚ್ಚುವುದರಿಂದ ಚರ್ಮದ ಮೇಲೆ ಹೊಳಪು ಬರುತ್ತದೆ. ಆದರೆ ಮಂಜುಗಡ್ಡೆಯನ್ನು ಚರ್ಮದ ಮೇಲೆ ಹಚ್ಚುವಾಗ ಮಾಡುವ ಕೆಲವು ತಪ್ಪುಗಳು ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ. ತ್ವಚೆಯ ಆರೈಕೆಗಾಗಿ ಐಸ್ ಅನ್ನು ಯಾವ ರೀತಿ ಬಳಸಬೇಕು ಎಂದು ತಿಳಿಯೋಣ...
ಮುಖಕ್ಕೆ ಐಸ್ ಹಚ್ಚುವ ಮುನ್ನ (How To Use Ice For Skin), ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಮುಖದಲ್ಲಿರುವ ಕೊಳೆ ಮತ್ತು ಜಿಡ್ಡು ನಿವಾರಣೆ ಆಗುತ್ತದೆ. ಯಾವಾಗಲೂ ಸ್ವಚ್ಛವಾದ ಚರ್ಮದ ಮೇಲೆ ಐಸ್ ತುಂಡುಗಳನ್ನು ಬಳಸಿದರೆ ತ್ವಚೆಗೆ ಒಳ್ಳೆಯದು.
ಇದನ್ನೂ ಓದಿ - Beauty Tips: ಮುಖದ ಮೇಲಿನ ಜಿಡ್ಡಿನಂಶ ತೊಲಗಿಸಲು ಇಲ್ಲಿದೆ ಒಂದು ಅದ್ಭುತ ಮನೆಮದ್ದು
>> ಐಸ್ ಅನ್ನು ನೇರವಾಗಿ ಚರ್ಮದ ಮೇಲೆ ಹಚ್ಚಬೇಡಿ:
ಮಂಜುಗಡ್ಡೆಯನ್ನು ಮುಖದ ಮೇಲೆ ನೇರವಾಗಿ ಹಚ್ಚುವುದರಿಂದ ಉರಿಯ ಅನುಭವವಾಗುತ್ತದೆ. ಹಾಗಾಗಿ ಮುಖಕ್ಕೆ ಐಸ್ ಹಚ್ಚುವ ಮೊದಲು, ಹತ್ತಿಯ ಕರವಸ್ತ್ರದಲ್ಲಿ ಐಸ್ ತುಂಡುಗಳನ್ನು ಕಟ್ಟಿಕೊಳ್ಳಿ ಮತ್ತು ನಂತರ ಆ ಬಟ್ಟೆಯ ಸಹಾಯದಿಂದ ಮುಖವನ್ನು ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಆಹ್ಲಾದಕರ ಅನುಭವದ ಜೊತೆಗೆ ಚರ್ಮಕ್ಕೂ (Ice For Skin) ಪ್ರಯೋಜನಕಾರಿಯಾಗಿದೆ.
>> ಒಣ ಚರ್ಮ ಹೊಂದಿರುವ ಜನರು ವಾರಕ್ಕೆ ಎರಡು ಬಾರಿ ಮಂಜುಗಡ್ಡೆಯಿಂದ ಮುಖಕ್ಕೆ ಮಸಾಜ್ ಮಾಡುವುದು ಒಳ್ಳೆಯದು.
ಇದನ್ನೂ ಓದಿ- Hair Wash Tips: ವಾರಕ್ಕೆ ಎಷ್ಟು ಸಲ ಕೂದಲನ್ನು ಶಾಂಪೂ ಮಾಡಬೇಕು?
>> ಸೂಕ್ಷ್ಮ ಚರ್ಮ ಹೊಂದಿರುವ ಜನರು ಮುಖಕ್ಕೆ ಮಂಜುಗಡ್ಡೆ ಬಳಸುವುದರಿಂದ ಐಸ್ ತುಂಡುಗಳ ಅತಿಯಾದ ಶೀತವು ನಿಮ್ಮನ್ನು ತೊಂದರೆಗೊಳಿಸಬಹುದು ಎಂಬುದನ್ನು ನೆನಪಿನಲ್ಲಿಡಿ.
>> ಚರ್ಮದ ಮೇಲೆ ಐಸ್ ಅನ್ನು ಅನ್ವಯಿಸುವಾಗ, ಐಸ್ ಅನ್ನು ವೇಗವಾಗಿ ಉಜ್ಜಬೇಡಿ. ಇದು ಚರ್ಮದ ರ್ಯಾಶಸ್ ಗೆ ಕಾರಣವಾಗಬಹುದು. ಹಾಗಾಗಿ ಐಸ್ ಕ್ಯೂಬ್ ಸಹಾಯದಿಂದ ನಿಮ್ಮ ಚರ್ಮದ ಮೇಲೆ ನಿಧಾನವಾಗಿ ಮಸಾಜ್ ಮಾಡಿದರೆ ಒಳ್ಳೆಯದು.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ. ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ