Hair Wash Tips: ವಾರಕ್ಕೆ ಎಷ್ಟು ಸಲ ಕೂದಲನ್ನು ಶಾಂಪೂ ಮಾಡಬೇಕು?

Hair Wash Tips: ಕೂದಲನ್ನು ದುರ್ಬಲ, ಶುಷ್ಕ ಮತ್ತು ನಿರ್ಜೀವವಾಗದಂತೆ ತಡೆಯಲು ಕೂದಲನ್ನು ಸರಿಯಾಗಿ ತೊಳೆಯುವುದು ಬಹಳ ಮುಖ್ಯ.

Written by - Yashaswini V | Last Updated : Aug 25, 2021, 12:10 PM IST
  • ಕೂದಲನ್ನು ತೊಳೆಯಲು ಸರಿಯಾದ ಮಾರ್ಗ ಯಾವುದು?
  • ವಾರಕ್ಕೆ ಎಷ್ಟು ಬಾರಿ ಕೂದಲು ತೊಳೆಯಬೇಕು?
  • ಕೂದಲನ್ನು ಶಾಂಪೂ ಮಾಡುವುದು ಹೇಗೆ ಎಂದು ತಿಳಿಯಿರಿ
Hair Wash Tips: ವಾರಕ್ಕೆ ಎಷ್ಟು ಸಲ ಕೂದಲನ್ನು ಶಾಂಪೂ ಮಾಡಬೇಕು? title=
Hair Wash Tips

Hair Wash Tips: ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಕೂದಲಿನ ಸಮಸ್ಯೆಗಳನ್ನು ತಪ್ಪಿಸಲು ಸರಿಯಾದ ಕೂದಲಿನ ಆರೈಕೆ ಬಹಳ ಮುಖ್ಯ. ಇಲ್ಲದಿದ್ದರೆ, ಕೂದಲು ಉದುರುವಿಕೆ ಮತ್ತು ನಿರ್ಜೀವ ಮತ್ತು ಒಣ ಕೂದಲಿನ ಸಮಸ್ಯೆ ಎದುರಾಗಬಹುದು. ಕೂದಲಿನ ಆರೈಕೆ ಬಗ್ಗೆ ಯೋಚಿಸುವಾಗ ಅನೇಕ ಪ್ರಶ್ನೆಗಳು ಮನಸ್ಸಿಗೆ ಬರುತ್ತವೆ, ಕೂದಲನ್ನು ಎಷ್ಟು ಸಲ ಶಾಂಪೂ ಮಾಡಬೇಕು ಅಥವಾ ಕೂದಲನ್ನು ಸ್ವಚ್ಛಗೊಳಿಸಲು ಸರಿಯಾದ ಮಾರ್ಗ ಯಾವುದು ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತವೆ. ಈ ಲೇಖನದಲ್ಲಿ ಕೂದಲು ತೊಳೆಯುವ ಸರಿಯಾದ ಮಾರ್ಗದ ಬಗ್ಗೆ ಕೆಲವು ಮಾಹಿತಿ ಹಂಚಿಕೊಳ್ಳಲಾಗಿದೆ.

ಕೂದಲನ್ನು ತೊಳೆಯಲು ಸರಿಯಾದ ಮಾರ್ಗ ಯಾವುದು? (How to wash hair):
ಕೂದಲನ್ನು ಯಾವಾಗಲೂ ಆರೋಗ್ಯವಾಗಿಡಲು ಮತ್ತು ದುರ್ಬಲ ಮತ್ತು ಕೂದಲು ಉದುರುವ ಸಮಸ್ಯೆಯನ್ನು (Hair Fall Problem) ತಪ್ಪಿಸಲು, ನೀವು ನಿಯಮಿತವಾಗಿ ಕೂದಲ ರಕ್ಷಣೆಯ ಸಲಹೆಗಳನ್ನು ಪಾಲಿಸಬೇಕು.

ಇದನ್ನೂ ಓದಿ- Hair Care Tips: ನಯವಾದ, ರೇಷ್ಮೆಯಂತಹ ಕೂದಲು ನಿಮ್ಮದಾಗಬೇಕೆ! ಹಾಲಿನ ಕೆನೆಯನ್ನು ಈ ರೀತಿ ಬಳಸಿ

ವಾರಕ್ಕೆ ಎಷ್ಟು ಬಾರಿ ಕೂದಲು ತೊಳೆಯಬೇಕು?
ಅಗತ್ಯಕ್ಕಿಂತ ಹೆಚ್ಚು ಶಾಂಪೂ ಮಾಡುವುದು ಅಥವಾ ಕೂದಲನ್ನು ತೊಳೆಯುವುದು ಕೂಡ ಹಾನಿಕಾರಕವಾಗಿದೆ. ಈ ಕಾರಣದಿಂದ ನೆತ್ತಿಯ ನೈಸರ್ಗಿಕ ಎಣ್ಣೆ ಕಳಚಿ ಕೂದಲು ದುರ್ಬಲವಾಗಲು ಆರಂಭವಾಗುತ್ತದೆ. ಹೆಲ್ತ್‌ಲೈನ್ ಪ್ರಕಾರ, ಒಣ ಕೂದಲಿಗೆ (Dry Hair) ವಾರಕ್ಕೆ ಎರಡು ಬಾರಿ, ಎಣ್ಣೆಯುಕ್ತ ಕೂದಲಿಗೆ ವಾರಕ್ಕೆ ಮೂರು ಬಾರಿ ಮತ್ತು ಸಾಮಾನ್ಯ ಕೂದಲಿಗೆ ಅಗತ್ಯವಿರುವಂತೆ ಶಾಂಪೂ ಮಾಡಬಹುದು.

ಕೂದಲನ್ನು ತೊಳೆಯುವ ಸರಿಯಾದ ವಿಧಾನ: ಮೊದಲು ಎಣ್ಣೆಯನ್ನು ಹಚ್ಚಿ
ಕೂದಲಿಗೆ ಎಣ್ಣೆ (Hair Oiling) ಹಚ್ಚುವುದು ಬಹಳ ಮುಖ್ಯ. ಕೂದಲಿಗೆ ಎಣ್ಣೆ ಹಚ್ಚದಿದ್ದರೆ ಕೂದಲು ದುರ್ಬಲವಾಗಿ ಉದುರಲು ಆರಂಭವಾಗುತ್ತದೆ. ಶಾಂಪೂ ಹಾಕುವ 30 ನಿಮಿಷಗಳ ಮೊದಲು ಕೂದಲಿಗೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ. ಕೂದಲಿಗೆ ಹಗುರವಾಗಿ ಮಸಾಜ್ ಮಾಡಿರಿ. ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆಯಿಂದ ಮಸಾಜ್ ಮಾಡುವುದು ಪ್ರಯೋಜನಕಾರಿ.

ಕೂದಲನ್ನು ಶಾಂಪೂ ಮಾಡುವುದು ಹೇಗೆ: ಶಾಂಪೂ ಆಯ್ಕೆ ಮುಖ್ಯ
ಕೂದಲಿಗೆ ಶಾಂಪೂ ಮಾಡುವುದು ಕೂಡ ಬಹಳ ಮುಖ್ಯ. ಆದರೆ ಸಿಕ್ಕ ಸಿಕ್ಕ ಶಾಂಪೂಗಳನ್ನು ಬಳಸುವ ಬದಲಿಗೆ ಶಾಂಪೂ ಆಯ್ಕೆಯ ಮೇಲೆ ಗಮನ ನೀಡಿ. ಮೊದಲನೆಯದಾಗಿ, ಶಾಂಪೂ ಸೌಮ್ಯವಾಗಿರಬೇಕು (ತುಂಬಾ ರಾಸಾಯನಿಕ ಅಥವಾ ನೊರೆ ಅಲ್ಲ) ಎಂಬುದನ್ನು ನೆನಪಿನಲ್ಲಿಡಿ. ಅದೇ ಸಮಯದಲ್ಲಿ, ಇದು ನಿಮ್ಮ ಕೂದಲಿನ ಪ್ರಕಾರಕ್ಕೆ ಅನುಗುಣವಾಗಿರಬೇಕು. ಏಕೆಂದರೆ ಒಣ, ಎಣ್ಣೆಯುಕ್ತ ಮತ್ತು ಸಾಮಾನ್ಯ ಕೂದಲಿಗೆ ವಿವಿಧ ಶ್ಯಾಂಪೂಗಳಿವೆ. ಇದನ್ನು ಹೊರತುಪಡಿಸಿ, ಕೂದಲನ್ನು ಮೊದಲು ಒದ್ದೆ ಮಾಡಬೇಕು ಮತ್ತು ನಂತರ ಶಾಂಪೂವನ್ನು ಕೂದಲಿಗೆ ಬಳಸಬೇಕು.

ಇದನ್ನೂ ಓದಿ- How To Make Milk Conditioner: ಕೂದಲಿನ ಆರೈಕೆಗಾಗಿ ಹಾಲಿನಿಂದ ಮನೆಯಲ್ಲೇ ತಯಾರಿಸಿ ಹೇರ್ ಕಂಡಿಷನರ್

ಕಂಡಿಷನರ್ ಅನ್ನು ಸಹ ಅನ್ವಯಿಸಿ:
ಶಾಂಪೂ ಹಚ್ಚಿದ ನಂತರ 1-2 ನಿಮಿಷಗಳ ಕಾಲ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ. ಇದರ ನಂತರ, ಕೂದಲಿಗೆ ಕಂಡೀಷನರ್ ಹಚ್ಚಿ, ಇದು ಕೂದಲಿನ ತೇವಾಂಶವನ್ನು ಕಾಪಾಡಿಕೊಳ್ಳಲು ಮತ್ತು ಪೋಷಿಸಲು ಕೆಲಸ ಮಾಡುತ್ತದೆ. ಕಂಡಿಷನರ್ ಅನ್ನು 5 ನಿಮಿಷಗಳ ಕಾಲ ಕೂದಲಿನಲ್ಲಿ ಇರಿಸಿ ನಂತರ ಮತ್ತೆ ಕೂದಲನ್ನು ಚೆನ್ನಾಗಿ ತೊಳೆದು ಒಣಗಿಸಿ.

ಕೂದಲು ತೊಳೆಯಲು ನೀರನ್ನು ಹೇಗೆ ಬಳಸುವುದು?
ನೀವು ಕೂದಲನ್ನು ತೊಳೆಯುವುದು ಹೇಗೆ ಎಂದು ಕಲಿತಿದ್ದೀರಿ, ಆದರೆ ಕೂದಲನ್ನು ತೊಳೆಯಲು ತುಂಬಾ ಬಿಸಿನೀರನ್ನು ಬಳಸಬಾರದು ಎಂಬುದನ್ನು ನೆನಪಿನಲ್ಲಿಡಿ. ಈ ಕಾರಣದಿಂದಾಗಿ ಕೂದಲಿನ ನೈಸರ್ಗಿಕ ಎಣ್ಣೆಯ ಅಂಶ ಕಡಿಮೆಯಾಗುತ್ತದೆ. ಸಾಧ್ಯವಾದಷ್ಟು ಯಾವಾಗಲೂ ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯುವುದು ಕೂದಲಿನ ರಕ್ಷಣೆಗೆ ಒಳ್ಳೆಯದು ಎನ್ನಲಾಗಿದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News