Raksha Bandhan 2021: ರಕ್ಷಾಬಂಧನದಲ್ಲಿ ಸಹೋದರಿಯರು ರಾಶಿ ಪ್ರಕಾರ Rakhi ಕಟ್ಟಿದರೆ ಸಹೋದರನ ಅದೃಷ್ಟ ಬದಲಾಗುತ್ತಂತೆ!
ರಕ್ಷಾಬಂಧನದ (Rakshabandhan) ದಿನದಂದು ಸಹೋದರಿಯರು ತಮ್ಮ ಸಹೋದರರಿಗಾಗಿ ಸುಂದರ ರಾಖಿಯನ್ನು ಆರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಸಹೋದರನ ರಾಶಿಗೆ ಅನುಗುಣವಾಗಿ ರಾಖಿಯನ್ನು (Rakhi) ಆಯ್ಕೆ ಮಾಡಿದರೆ, ಅದು ಸಹೋದರನಿಗೆ ತುಂಬಾ ಶುಭಕರವಾಗಿರುತ್ತದೆ ಎಂದು ಹೇಳಲಾಗುತ್ತದೆ.
ನವದೆಹಲಿ: ಸಹೋದರ-ಸಹೋದರಿಯರ ಸಂಬಂಧವನ್ನು ಸಾರಿ ಹೇಳುವ ಹಬ್ಬವೇ ರಕ್ಷಾಬಂಧನ. ರಕ್ಷಾಬಂಧನದ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರರಿಗಾಗಿ ಸುಂದರವಾದ ರಾಖಿಗಳನ್ನು ಆರಿಸುವುದರಲ್ಲಿ ನಿರತರಾಗಿದ್ದಾರೆ, ಸಹೋದರರು ತಮ್ಮ ಪ್ರೀತಿಯ ಸಹೋದರಿಗಾಗಿ ಅತ್ಯುತ್ತಮ ಉಡುಗೊರೆಯನ್ನು ನೀಡಲು ತಯಾರಿ ನಡೆಸುತ್ತಿದ್ದಾರೆ. ರಕ್ಷಾಬಂಧನದ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರನ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ. ಈ ಬಾರಿ ರಾಖಿ ತೆಗೆದುಕೊಳ್ಳುವಾಗ ಈ ಒಂದು ವಿಷಯದ ಬಗ್ಗೆ ಗಮನ ಹರಿಸಿದರೆ, ಈ ರಕ್ಷಾಬಂಧನವು ತಮ್ಮ ಸಹೋದರನಿಗೆ ಅತ್ಯಂತ ಮಂಗಳಕರವೆಂದು ಸಾಬೀತುಪಡಿಸಬಹುದು. ಇದಕ್ಕಾಗಿ, ಸಹೋದರಿಯು ತನ್ನ ಸಹೋದರನ ರಾಶಿಗೆ (Zodiac Sign) ಅನುಗುಣವಾಗಿ ಸಹೋದರನಿಗೆ ರಾಖಿ ಕಟ್ಟಬೇಕು. ಆಗಸ್ಟ್ 22 ರ ರಕ್ಷಾಬಂಧನದ ದಿನದಂದು ನಿಮ್ಮ ಸಹೋದರನಿಗೆ ಯಾವ ರಾಖಿಯನ್ನು ಕಟ್ಟುವುದು ಉತ್ತಮ ಎಂದು ತಿಳಿಯಿರಿ.
ರಾಶಿಚಕ್ರದ ಪ್ರಕಾರ ರಾಖಿಯನ್ನು ಆರಿಸಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ರಾಶಿಗೆ (Zodiac Sign) ಅನುಗುಣವಾಗಿ ಮಂಗಳಕರ ಬಣ್ಣಗಳು, ದಿನಗಳು, ರತ್ನಗಳು ಇತ್ಯಾದಿಗಳನ್ನು ಹೇಳಲಾಗಿದೆ. ಆಯಾ ರಾಶಿಚಕ್ರದ ವ್ಯಕ್ತಿಯು ಆ ವಸ್ತುಗಳನ್ನು ಬಳಸುವುದರಿಂದ, ಅವನು ಅಪಾರ ಶಕ್ತಿಯನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಕುಂಡಲಿಯಲ್ಲಿರುವ ಗ್ರಹಗಳು ಪ್ರಬಲವಾಗಿರುವಾಗ ಇದು ಅವನ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸಹೋದರನಿಗೆ ತನ್ನ ರಾಶಿಚಕ್ರದ ಪ್ರಕಾರ ವಿಶೇಷ ಬಣ್ಣದ ರಾಖಿಯನ್ನು ಕಟ್ಟುವುದು ಅವನಿಗೆ ಅತ್ಯಂತ ಶುಭಕರವೆಂದು ಸಾಬೀತಾಗುತ್ತದೆ. ಆ ಬಣ್ಣದ ರಾಖಿ ಲಭ್ಯವಿಲ್ಲದಿದ್ದರೆ, ಕನಿಷ್ಠ ಆ ಬಣ್ಣದ ರಾಖಿಯ ಎಳೆಯನ್ನು ಕಟ್ಟುವುದರಿಂದಲೂ ಸಹೋದರ ಅದೃಷ್ಟ ಬದಲಾಗುತ್ತದೆ ಎಂದು ನಂಬಲಾಗಿದೆ.
ಮೇಷ ರಾಶಿ:
ನಿಮ್ಮ ಸಹೋದರನ ರಾಶಿಯು ಮೇಷರಾಶಿಯಾಗಿದ್ದರೆ, ರಕ್ಷಾಬಂಧನದ ದಿನದಂದು ಅವನಿಗೆ ಕೆಂಪು ಬಣ್ಣದ ರಾಖಿಯನ್ನು ಕಟ್ಟುವುದು ಬಹಳ ಒಳ್ಳೆಯದು. ಇದು ನಿಮ್ಮ ಸಹೋದರನನ್ನು ಪವರ್ ಫುಲ್ ಆಗಿ ಮಾಡುವುದು ಮಾತ್ರವಲ್ಲ, ಅವರ ಜೀವನವು ಸದಾ ಸುಖ-ಶಾಂತಿ, ನೆಮ್ಮದಿಯಿಂದ ಇರುವಂತೆ ಮಾಡುತ್ತದೆ.
ವೃಷಭ ರಾಶಿ:
ಈ ರಾಶಿಯ ಜನರಿಗೆ ಬಿಳಿ ಬಣ್ಣದ ರಾಖಿ (Rakhi) ಕಟ್ಟುವುದು ತುಂಬಾ ಶುಭಕರವಾಗಿರುತ್ತದೆ. ಇದರೊಂದಿಗೆ, ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಅವರಿಗೆ ನೀಡುವುದು ತುಂಬಾ ಒಳ್ಳೆಯದು.
ಇದನ್ನೂ ಓದಿ- Mercury Transit 2021: ನಾಳೆ ಸಿಂಹ ರಾಶಿಯಲ್ಲಿ ಬುಧನ ಗೋಚರ, ಯಾರಿಗೆ ಲಾಭ?
ಮಿಥುನ ರಾಶಿ:
ನಿಮ್ಮ ಸಹೋದರ ಮಿಥುನ ರಾಶಿಯವರಾಗಿದ್ದರೆ, ಅವರಿಗೆ ಹಸಿರು ಬಣ್ಣದ ರಾಖಿಯನ್ನು ಆರಿಸಿ. ಇದು ಅವರನ್ನು ತೊಂದರೆಗಳಿಂದ ರಕ್ಷಿಸುತ್ತದೆ.
ಕರ್ಕ ರಾಶಿ:
ಕರ್ಕಾಟಕ ರಾಶಿಯವರಿಗೆ ಬಿಳಿ ಅಥವಾ ಹಳದಿ ಬಣ್ಣದ ರಾಖಿ ಕಟ್ಟುವುದು ಶುಭಕರವಾಗಿರುತ್ತದೆ. ಇದು ಅವರ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಕೆಂಪು ಅಥವಾ ಹಳದಿ ಬಣ್ಣದ ರಾಖಿ ಕಟ್ಟುವುದು ಶುಭಕರವಾಗಿರುತ್ತದೆ. ನಿಮ್ಮ ಸಹೋದರ ಸಿಂಹ ರಾಶಿಯವರಾಗಿದ್ದರೆ ಅವರಿಗೆ ಕೆಂಪು ಅಥವಾ ಹಳದಿ ಬಣ್ಣಗಳ ರಾಖಿ ಕಟ್ಟುವುದರಿಂದ ಅವರ ಅದೃಷ್ಟ ಬದಲಾಗುವುದು ಎಂಬ ನಂಬಿಕೆ ಇದೆ.
ಕನ್ಯಾ ರಾಶಿ:
ಈ ರಾಶಿಯ ಸಹೋದರನಿಗೆ ಕಿತ್ತಳೆ ಬಣ್ಣದ ರಾಖಿ ಅತ್ಯುತ್ತಮವಾಗಿರುತ್ತದೆ. ಇದು ಅವರ ಜೀವನದಲ್ಲಿ ಧೈರ್ಯ, ಉತ್ಸಾಹವನ್ನು ತುಂಬುತ್ತದೆ.
ತುಲಾ ರಾಶಿ:
ರಕ್ಷಾಬಂಧನದಲ್ಲಿ (Rakshabandhan) ತುಲಾ ರಾಶಿಯವರಿಗೆ ಬಿಳಿ ಬಣ್ಣದ ರಾಖಿ ಕಟ್ಟುವುದು ಮತ್ತು ಬಿಳಿ ಬಣ್ಣದ ಸಿಹಿತಿಂಡಿಗಳನ್ನು ನೀಡುವುದು ತುಂಬಾ ಒಳ್ಳೆಯದು.
ವೃಶ್ಚಿಕ ರಾಶಿ:
ಈ ರಾಶಿಯವರಿಗೆ ಅವರ ಸಹೋದರಿಯರು ಕೆಂಪು ಅಥವಾ ಗುಲಾಬಿ ಬಣ್ಣದ ರಾಖಿಯನ್ನು ಕಟ್ಟಿದರೆ ಅದು ಶುಭಕರವಾಗಿರುತ್ತದೆ.
ಇದನ್ನೂ ಓದಿ- Shravan Mas 2021: ಇಂದಿನಿಂದ ಶ್ರಾವಣ ಮಾಸ ಆರಂಭ, ಮೊದಲ ಸೋಮವಾರ ಶಿವನನ್ನು ಒಲಿಸಿಕೊಳ್ಳಲು ಈ ರೀತಿ ಪೂಜೆ ಸಲ್ಲಿಸಿ
ಧನು ರಾಶಿ:
ಧನು ರಾಶಿಯ ಸಹೋದರರಿಗೆ ಹಳದಿ ಅಥವಾ ಚಿನ್ನದ ಬಣ್ಣದ ರಾಖಿ ಕಟ್ಟಿಸಿ ಮತ್ತು ಅವರಿಗೆ ಹಳದಿ ಬಣ್ಣದ ಸಿಹಿತಿಂಡಿಗಳನ್ನು ತಿನ್ನಿಸಿ. ಇದು ಸಹೋದರನ ಸಂಪತ್ತನ್ನು ಹೆಚ್ಚಿಸುತ್ತದೆ.
ಮಕರ ರಾಶಿ:
ನಿಮ್ಮ ಸಹೋದರ ಮಕರ ರಾಶಿಯವರಾಗಿದ್ದರೆ ಅವರಿಗೆ ನೀಲಿ ಬಣ್ಣದ ರಾಖಿಯನ್ನು ಕಟ್ಟುವುದರಿಂದ ತುಂಬಾ ಒಳ್ಳೆಯದಾಗುತ್ತದೆ.
ಕುಂಭ ರಾಶಿ:
ಈ ರಾಶಿಯ ಜನರಿಗೆ, ಅವರ ಸಹೋದರಿಯರು ನೀಲಿ ಬಣ್ಣದ ರಾಖಿಯನ್ನು ಆರಿಸಿದರೆ, ನಿಮ್ಮ ಸಹೋದರನಿಗೆ ಎಂತಹದ್ದೇ ಕಷ್ಟ ಎದುರಾದರೂ ಜಯಶಾಲಿಯಾಗುತ್ತಾರೆ.
ಮೀನ ರಾಶಿ:
ಮೀನ ರಾಶಿಯ ಸಹೋದರರಿಗೆ ಹಳದಿ ಅಥವಾ ಚಿನ್ನದ ಬಣ್ಣದ ಸುಂದರ ರಾಖಿಯನ್ನು ಕಟ್ಟುವುದು ಶುಭಕರವಾಗಿರುತ್ತದೆ. ರಕ್ಷಾಬಂಧನದ ದಿನದಂದು ಸಹೋದರಿಯರು ಈ ಜನರಿಗೆ ಹಳದಿ ಬಣ್ಣದ ಸಿಹಿತಿಂಡಿಗಳನ್ನು ನೀಡುವುದು ಶುಭ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ