ಮನೆಯಲ್ಲಿ ಸುಖ ಸಮೃದ್ಧಿಯಾಗಬೇಕಾದರೆ ಎಲ್ಲಿ ಮತ್ತು ಹೇಗೆ ಹಾಕಬೇಕು Wind Chime ಗೊತ್ತಿರಲಿ

ಮನೆಯ ಮುಖ್ಯ ದ್ವಾರದ ಬಳಿ ನಾಲ್ಕು ಕಡ್ಡಿಗಳ ವಿಂಡ್ ಚೈಮ್ ಹಾಕುವುದು ಅತ್ಯಂತ ಶುಭ ಎನ್ನಲಾಗಿದೆ. ಇದನ್ನು ಬಾಗಿಲಿನ ಪರದೆಯ ಜೊತೆ ನೇತು ಹಾಕಬಹುದು. 

Written by - Ranjitha R K | Last Updated : Aug 8, 2021, 01:35 PM IST
  • ಮನೆಯ ಅಲಂಕಾರಕ್ಕಾಗಿ ಅನೇಕ ವಸ್ತುಗಳನ್ನು ಬಳಸಲಾಗುತ್ತದೆ
  • ವಿಂಡ್ ಚೈಮ್ ಅನ್ನು ಸಂತೋಷ, ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ.
  • ವಿಂಡ್ ಚೈಮ್ ಎಲ್ಲಿ ಮತ್ತು ಹೇಗೆ ಹಾಕಬೇಕು ತಿಳಿದಿರಬೇಕು
ಮನೆಯಲ್ಲಿ ಸುಖ ಸಮೃದ್ಧಿಯಾಗಬೇಕಾದರೆ ಎಲ್ಲಿ ಮತ್ತು ಹೇಗೆ ಹಾಕಬೇಕು Wind Chime ಗೊತ್ತಿರಲಿ  title=
ವಿಂಡ್ ಚೈಮ್ ಅನ್ನು ಸಂತೋಷ, ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ. (photo india.com)

ನವದೆಹಲಿ : Wind Chime Vastu Tips: ಮನೆಯ ಅಲಂಕಾರಕ್ಕಾಗಿ ಅನೇಕ ವಸ್ತುಗಳನ್ನು ಬಳಸಲಾಗುತ್ತದೆ ಇದು ವಾಸ್ತುವಿನ ಪ್ರಕಾರ ನೋಡಿದರೆ, ಕೆಲವೊಂದು ಒಳ್ಳೆಯ ಪರಿಣಾಮಗಳನ್ನು ಬೀರುತ್ತದೆ. ಇನ್ನು ಅನೇಕ ಮನೆಗಳಲ್ಲಿ ವಿಂಡ್ ಚೈಮ್ (Wind chime) ಹಾಕಿರುವುದನ್ನು ನೋಡುತ್ತೇವೆ. ಇದು, ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ವಾಸ್ತು ಪ್ರಕಾರ ಕೂಡ ಉತ್ತಮ ಪರಿಣಾಮಗಳನ್ನು ಬೀರುತ್ತದೆ. ವಿಂಡ್ ಚೈಮ್ ಅನ್ನು ಸಂತೋಷ, ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ. ಆದರೆ, ಈ ವಿಂಡ್ ಚೈಮ್ ಅನ್ನು ಎಲ್ಲಿ ಮತ್ತು ಹೇಗೆ ಹಾಕಬೇಕು ಎಂಬುವುದು ಕೂಡ ತಿಳಿದಿರಬೇಕು.

ಮನೆಯ ಮುಖ್ಯ ದ್ವಾರದ (Main door) ಬಳಿ ನಾಲ್ಕು ಕಡ್ಡಿಗಳ ವಿಂಡ್ ಚೈಮ್ ಹಾಕುವುದು ಅತ್ಯಂತ ಶುಭ ಎನ್ನಲಾಗಿದೆ. ಇದನ್ನು ಬಾಗಿಲಿನ ಪರದೆಯ ಜೊತೆ ನೇತು ಹಾಕಬಹುದು.  ಇದರಿಂದ ಹೊರ ಬರುವ ಶಬ್ದವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ.

ಇದನ್ನೂ ಓದಿ :Vastu Tips : ನಿಮ್ಮ ಜೀವನದಲ್ಲಿ ಹಣ ಮತ್ತು ಸಂತೋಷ ಬಯಸಿದರೆ, ಇಂದಿನಿಂದ ಮನೆಯಲ್ಲಿ ಈ ಕೆಲಸ ಮಾಡಿ; ಲಕ್ಷ್ಮಿ ದೇವಿ ಸಂತೋಷವಾಗಿರುತ್ತಾಳೆ!

ಮಕ್ಕಳನ್ನು ಅಧ್ಯಯನದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಲು, ಸ್ಟಡಿ ರೂಂ ನಲ್ಲಿ (Study room vastu) ,  ವಿಂಡ್ ಚೈಮ್ ಹಾಕಿ. ಇದು ಓದು ಬರಹದಲ್ಲಿ ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಓದುಬರಹದಲ್ಲಿ ಮಕ್ಕಳಿಗೆ ಆಸಕ್ತಿ ಮೂಡುವಂತೆ ಮಾಡುತ್ತದೆ.   

ಕೆಲವು ಮನೆಯಲ್ಲಿ ಸಣ್ಣಸಣ್ಣ ಕಾರಣಗಳಿಗೂ ಜಗಳಗಳು ನಡೆಯುತ್ತಿರುತ್ತದೆ. ಇಂಥಹ ಸಂದರ್ಭದಲ್ಲಿ 9 ಸ್ಟಿಕ್‌ಗಳಿರುವ ವಿಂಡ್ ಚೈಮ್ ಅನ್ನು ಬಳಸಬೇಕು. ಈ ಕಾರಣದಿಂದಾಗಿ, ಪೋಸಿಟಿವ್ ಎನರ್ಜಿ (Positive energy) ಮನೆಯಲ್ಲಿ ಹರಡುತ್ತದೆ. ಜಗಳಗಳು ಕಡಿಮೆಯಾಗುತ್ತದೆ. 

ಕಚೇರಿ ಮತ್ತು ಕಾರ್ಯಕ್ಷೇತ್ರದಲ್ಲಿ ಎಂಟು ಸ್ಟಿಕ್ ನ ವಿಂಡ್ ಚೈಮ್ ಹಾಕ್ಬೇಕು. ಹೀಗೆ ಮಾಡುವುದರಿಂದ ಏಕಾಗ್ರತೆಯ ಶಕ್ತಿಯನ್ನು ಹೆಚ್ಚುತ್ತದೆ. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಯಶಸ್ಸಿನ ದಾರಿ ತೆರೆಯುತ್ತದೆ.

ಇದನ್ನೂ ಓದಿ : Astrology: ದಾರಿಯಲ್ಲಿ ನಿಮಗೆ ಈ ವಸ್ತುಗಳು ಸಿಕ್ಕರೆ ತುಂಬಾ ಅದೃಷ್ಟವಂತೆ! ಆದರೆ...

ಮನೆಯ ಡ್ರಾಯಿಂಗ್ ರೂಮಿನಲ್ಲಿ 6 ಸ್ಟಿಕ್ ವಿಂಡ್ ಚೈಮ್ ಹಾಕಿ. ವಾಸ್ತು ಪ್ರಕಾರ, ಅತಿಥಿಗಳು ನಿಮ್ಮ ಮನೆಯನ್ನು ಕೋಣೆಗೆ ಪ್ರವೇಶಿಸಿದಾಗ, ವಿಂಡ್ ಚೈಮ್ ಗೆ ತಾಕಿ ಕೇಳಿ ಬರುವ ಘಂಟೆಯ ಸದ್ದಿನ ಪರಿಣಾಮದಿಂದಾಗಿ ನಿಮ್ಮ ಮತ್ತು ಸಂಬಂಧಿಕರ ನಡುವಿನ ಬಾಂದವ್ಯ ವೃದ್ದಿಗೊಳ್ಳುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News