ನವದೆಹಲಿ: ಶನಿಯ ಸಾಡೇ ಸಾತಿ ಹಾಗೂ ಶನಿ ದೆಸೆಯ ಕೋಪವನ್ನು ತಪ್ಪಿಸಲು ಕಬ್ಬಿಣದ ಉಂಗುರವನ್ನು ಧರಿಸಲಾಗುತ್ತದೆ(Iron Ring Wearing Rules). ಇದರೊಂದಿಗೆ ರಾಹು ಮತ್ತು ಕೇತುಗಳ ದುಷ್ಪರಿಣಾಮಗಳನ್ನು ತಪ್ಪಿಸಲು ಈ ಉಂಗುರವನ್ನು ಧರಿಸಲಾಗುತ್ತದೆ. ಆದರೆ ಕಬ್ಬಿಣದ ಉಂಗುರವು ಎಲ್ಲರಿಗೂ ಪ್ರಯೋಜನಕಾರಿಯಾಗಿರುವುದಿಲ್ಲ. ಕೆಲವು ಜನರಿಗೆ ಕಬ್ಬಿಣದ ಉಂಗುರವು ಪ್ರಯೋಜನಕ್ಕೆ ಬದಲಾಗಿ ಹಾನಿಯನ್ನು ಉಂಟುಮಾಡುತ್ತದೆ. ಜ್ಯೋತಿಷ್ಯ ತಜ್ಞರು ಇದನ್ನು ನಂಬುತ್ತಾರೆ. ಯಾವ ಸಂದರ್ಭಗಳಲ್ಲಿ ಕಬ್ಬಿಣದ ಉಂಗುರವನ್ನು ಧರಿಸಬಾರದು ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಕಬ್ಬಿಣದ ಉಂಗುರವನ್ನು ಏಕೆ ಮತ್ತು ಹೇಗೆ ಧರಿಸಬೇಕು?


ರಾಹು-ಕೇತು ಮತ್ತು ಶನಿಯ ಕೆಟ್ಟ ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಜ್ಯೋತಿಷಿಗಳು ಕಬ್ಬಿಣದ ಉಂಗುರ(Iron Ring Benefits)ವನ್ನು ಧರಿಸಲು ಶಿಫಾರಸು ಮಾಡುತ್ತಾರೆ. ಮನುಷ್ಯನು ತನ್ನ ಬಲಗೈಯ ಮಧ್ಯದ ಬೆರಳಿಗೆ ಕಬ್ಬಿಣದ ಉಂಗುರವನ್ನು ಧರಿಸಬೇಕು. ಏಕೆಂದರೆ ಶನಿಯ ಪ್ರದೇಶವು ಮಧ್ಯದ ಬೆರಳಿನ ಅಡಿಯಲ್ಲಿದೆ. ಆದಾಗ್ಯೂ ವಿಶೇಷ ಸಂದರ್ಭಗಳಲ್ಲಿ ಇದನ್ನು ಎಡಗೈಯ ಮಧ್ಯದ ಬೆರಳಿಗೆ ಸಹ ಧರಿಸಬಹುದು. ಇದಲ್ಲದೇ ಶನಿವಾರ ಸಂಜೆ ಕಬ್ಬಿಣದ ಉಂಗುರವನ್ನು ಧರಿಸುವುದು ಯಾವಾಗಲೂ ಮಂಗಳಕರ. ರೋಹಿಣಿ, ಪುಷ್ಯ, ಅನುರಾಧ ಮತ್ತು ಉತ್ತರ ಭಾದ್ರಪದ ನಕ್ಷತ್ರಗಳಲ್ಲಿ ಕಬ್ಬಿಣದ ಉಂಗುರವನ್ನು ಧರಿಸುವುದು ಸಹ ಮಂಗಳಕರವೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ: Work From Home ಅವಧಿಯಲ್ಲಿ ಉತ್ತಮ ಪರ್ಫಾರ್ಮೆನ್ಸ್ ಗಾಗಿ ಈ ವಾಸ್ತು ಸಲಹೆಗಳನ್ನು ಅನುಸರಿಸಿ


ಜಾತಕದಲ್ಲಿ ಶನಿ ಸ್ಥಿತನಿದ್ದರೆ. ಅಲ್ಲದೆ ಬುಧ, ಶುಕ್ರ ಮತ್ತು ಸೂರ್ಯ ಒಟ್ಟಿಗೆ ಇದ್ದರೆ ಕಬ್ಬಿಣದ ಉಂಗುರ(Benefits Of Iron Ring)ವನ್ನು ಧರಿಸುವುದು ಹಾನಿಕಾರಕವೆಂದು ಸಾಬೀತುಪಡಿಸುತ್ತದೆ. ಈ ರೀತಿ ಬೆಳ್ಳಿಯ ಉಂಗುರವನ್ನು ಮಾತ್ರ ಧರಿಸುವುದು ಶುಭ. ಮತ್ತೊಂದೆಡೆ ಜಾತಕದಲ್ಲಿ ರಾಹು ಮತ್ತು ಬುಧ ಪ್ರಬಲ ಸ್ಥಾನದಲ್ಲಿದ್ದರೆ ಕಬ್ಬಿಣದ ಉಂಗುರವನ್ನು ಧರಿಸುವುದು ಮಂಗಳಕರವಾಗಿದೆ.


ಜಾತಕದ 12ನೇ ಮನೆಯಲ್ಲಿ ಬುಧ ಮತ್ತು ರಾಹು ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ದುರ್ಬಲವಾಗಿದ್ದರೆ ಉಂಗುರ(Iron Ring)ದ ಬದಲು ಕಬ್ಬಿಣದ ಗಟ್ಟಿಯನ್ನು ಕೈಯಲ್ಲಿ ಧರಿಸಬೇಕು. ಜಾತಕದ 12ನೇ ಮನೆ ರಾಹುಗೆ ಸೇರಿದರೆ ಅಂತಹ ಪರಿಸ್ಥಿತಿಯಲ್ಲಿ ರಾಹುವಿನ ಮಂಗಳಕರ ಫಲಿತಾಂಶಗಳಿಗಾಗಿ ಕಬ್ಬಿಣದ ಉಂಗುರವನ್ನು ಧರಿಸಬಹುದು.


ಇದನ್ನೂ ಓದಿ: ಈ ದೇವಾಲಯದಲ್ಲಿ ಶೂ-ಚಪ್ಪಲಿ ಅರ್ಪಿಸುವುದರಿಂದ ವ್ರತಗಳು ನೆರವೇರುತ್ತವೆ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.