Work From Home ಅವಧಿಯಲ್ಲಿ ಉತ್ತಮ ಪರ್ಫಾರ್ಮೆನ್ಸ್ ಗಾಗಿ ಈ ವಾಸ್ತು ಸಲಹೆಗಳನ್ನು ಅನುಸರಿಸಿ

Work From Home Vastu Tips: ಮನೆಯಿಂದ ಕೆಲಸದ ಬಗ್ಗೆ, ಅನೇಕ ವೃತ್ತಿಪರರು ಮನೆಯಿಂದ ಕೆಲಸ ಮಾಡುವುದರಿಂದ ಉತ್ಪಾದಕತೆಯ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ನಂಬುತ್ತಾರೆ.ಇಂತಹ ಪರಿಸ್ಥಿತಿಯಲ್ಲಿ, ವಾಸ್ತುವಿನ ಕೆಲವು ವಿಶೇಷ ಸಲಹೆಗಳ ಕುರಿತು ಕಾಳಜಿ ವಹಿಸಬೇಕು.

Written by - Nitin Tabib | Last Updated : Jan 8, 2022, 07:24 PM IST

    ವರ್ಕ್ ಫ್ರಮ್ ಹೋಮ್ ಗಾಗಿ ಈ ವಾಸ್ತು ಸಲಹೆಗಳನ್ನು ಅನುಸರಿಸಿ.

    ವರ್ಕ್ ಪರ್ಫಾರ್ಮೆನ್ಸ್ ಉತ್ತಮವಾಗಿರಲಿದೆ.

    ವರ್ಕ್ ಫ್ರಮ್ ಹೋಮ್ ಅವಧಿಯಲ್ಲಿ ಕಾರ್ಯ ಸ್ಥಳ ಈ ರೀತಿ ಇರಬೇಕು.

Work From Home ಅವಧಿಯಲ್ಲಿ ಉತ್ತಮ ಪರ್ಫಾರ್ಮೆನ್ಸ್ ಗಾಗಿ ಈ ವಾಸ್ತು ಸಲಹೆಗಳನ್ನು ಅನುಸರಿಸಿ title=
Work From Home Vastu Tips

Vastu Tips For Work From Home: ಕೊರೊನಾ ವೈರಸ್ ನ ಹೊಸ ರೂಪಾಂತರಿ ಓಮಿಕ್ರಾನ್ ವೇಗವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸಲಹೆ ನೀಡುತ್ತಿವೆ. ಮನೆಯಿಂದ ಕೆಲಸದ ಸಮಯದಲ್ಲಿ, ಹೆಚ್ಚಿನ ಜನರು ಮಲಗುವ ಕೋಣೆ, ಬಾಲ್ಕನಿ ಅಥವಾ ಡೈನಿಂಗ್ ಟೇಬಲ್ ಅನ್ನು ಕೆಲಸದ ಸ್ಥಳವನ್ನಾಗಿ ಆರಿಸಿಕೊಳ್ಳುತ್ತಾರೆ. ವಾಸ್ತುವಿನ ದೃಷ್ಟಿಯಿಂದ ಇದು ಸರಿಯಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮನೆಯಿಂದ ಕೆಲಸದ ಸಮಯದಲ್ಲಿ ಯಾವ ವಾಸ್ತು ಸಲಹೆಗಳನ್ನು (Home Office Vastu Tips) ಅನುಸರಿಸಬೇಕು ತಿಳಿದುಕೊಳ್ಳೋಣ ಬನ್ನಿ.

>> ವಾಸ್ತು ಶಾಸ್ತ್ರದ (Vastu Tips In Kannada) ಪ್ರಕಾರ, ಮನೆಯ ಪಶ್ಚಿಮ ಅಥವಾ ನೈಋತ್ಯ ಮೂಲೆಯಲ್ಲಿ ಮನೆಯಿಂದ ಕೆಲಸ ಮಾಡುವುದು ಮಂಗಳಕರವಾಗಿದೆ. ಏಕೆಂದರೆ ಈ ದಿಕ್ಕುಗಳು ಉದ್ಯೋಗ ಅಥವಾ ವ್ಯಾಪಾರ ಸಂಬಂಧಿತ ಕೆಲಸಗಳಿಗೆ ಒಳ್ಳೆಯ ದಿಕ್ಕುಗಳಾಗಿವೆ.

ಇದನ್ನೂ ಓದಿ-Astro Tips: ನೀವು ಹಾಕಿಕೊಳ್ಳುವ ಶೂ-ಚಪ್ಪಲಿ ಕೂಡ ನಿಮ್ಮ ಭಾಗ್ಯದ ಮೇಲೆ ನೇರ ಪ್ರಭಾವ ಬೀರುತ್ತವೆ ಗೊತ್ತಾ?

>> ವಾಸ್ತು ಪ್ರಕಾರ, ಮನೆಯಲ್ಲಿ ಕೆಲಸ ಮಾಡಲು ಕುರ್ಚಿ ಆರಾಮದಾಯಕ ಮತ್ತು ಬಲವಾಗಿರಬೇಕು. ಇದರಿಂದ ಕೆಲಸದ ಮಧ್ಯದಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಇದಲ್ಲದೇ ನೈಋತ್ಯ ದಿಕ್ಕಿನಲ್ಲಿ ವರ್ಕ್ ಡೆಸ್ಕ್ ಇಡುವುದು ಶುಭಕರವಾಗಿರುತ್ತದೆ.

ಇದನ್ನೂ ಓದಿ-ಸೂರ್ಯ-ಬುಧ ಮತ್ತು ಶುಕ್ರನ ಚಲನೆಯಲ್ಲಿ ಬದಲಾವಣೆ: ಈ ರಾಶಿಯವರ ಭವಿಷ್ಯವು ಬದಲಾಗಲಿದೆ

>> ಕೆಲಸಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಇರಿಸಿ. ವಾರ್ಡ್‌ರೋಬ್‌ಗಳು ಅಥವಾ ಡ್ರಾಯರ್‌ಗಳನ್ನು ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ತೆರೆಯಬೇಕು ಎಂಬುದನ್ನು ನೆನಪಿನಲ್ಲಿಡಿ. ಯಾವುದೇ ಕೋಣೆಯ ಬಾಗಿಲು, ಕಿಟಕಿ ಅಥವಾ ಬಾಲ್ಕನಿಯಲ್ಲಿ ಕುಳಿತುಕೊಳ್ಳಬೇಡಿ. ಇದಲ್ಲದೆ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಿಂದ ಕೆಲಸ ಮಾಡುತ್ತಿದ್ದರೆ, ಅದನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಿಕೊಂಡು ಕೆಲಸ ಮಾಡಿ.

ಇದನ್ನೂ ಓದಿ-ಜ.14ರಿಂದ ಈ 4 ರಾಶಿಯವರಿಗೆ ಒಳ್ಳೆಯ ದಿನಗಳು ಬರಲಿವೆ: ಇವರಿಗೆ ಸರ್ಕಾರಿ ಕೆಲಸ ಸಿಗಬಹುದು!

(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News