ಬೆಂಗಳೂರು : ದಿನ ನಿತ್ಯ ನಮ್ಮ ಸುತ್ತ ಏನಾದರೊಂದು ಘಟನೆಗಳು ಘಟಿಸುತ್ತಲೇ ಇರುತ್ತವೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಇವುಗಳಲ್ಲಿ ಕೆಲವನ್ನು ಶುಭ ಎಂದು ಪರಿಗಣಿಸಿದರೆ ಇನ್ನು ಕೆಲವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಕೆಲವು ಸಂಕೇತಗಳು ಲಕ್ಷ್ಮೀ (Godess Laxmi) ಕಟಾಕ್ಷವನ್ನು ಸೂಚಿಸಿದರೆ ಇನ್ನು ಕೆಲವು ಏನೋ ಕೆಟ್ಟ ಶಕುನದ ಸಂಕೇತ ಎನ್ನಲಾಗುತ್ತದೆ.  ನಂಬಿಕೆ, ಶಕುನಗಳ ಪ್ರಕಾರ ಯಾವೆಲ್ಲಾ ವಸ್ತುಗಳು ಧನ ಪ್ರಾಪ್ತಿಯ ಸಂಕೇತ ನೋಡೋಣ.. 


COMMERCIAL BREAK
SCROLL TO CONTINUE READING

ಮನೆಯ ಮುಂದೆ ಹಸು ಕೂಗುತ್ತಿದ್ದರೆ  :
ಹಿಂದೂ (Hindu) ಧರ್ಮದಲ್ಲಿ ಹಸುವಿಗೆ ವಿಶೇಷ ಸ್ಥಾನಮಾನವಿದೆ. ಹಸುವನ್ನು (Cow) ಪೂಜಿಸಲಾಗುತ್ತದೆ. ಮನೆಯ ಮುಂದೆ ಹಸು ಅಳುತ್ತಿದ್ದರೆ, ಭವಿಷ್ಯದಲ್ಲಿ ಧನ ಲಾಭವಾಗಲಿದೆ ಎಂದರ್ಥ. ನೀವು ಲಕ್ಷ್ಮಿ ದೇವಿಯ (Godess Laxmi) ಕೃಪೆಗೆ ಪಾತ್ರರಾಗಲಿದ್ದೀರಿ ಎಂಬುದರ ಸಂಕೇತವನ್ನು ಸೂಚಿಸುತ್ತದೆ ಎನ್ನಲಾಗಿದೆ. ಮನೆಯ ಮುಂದೆ ಹಸು ಕೂಗುತ್ತಿದ್ದರೆ ಅದು ಅತ್ಯಂತ ಶುಭ ಎನ್ನುತ್ತಾರೆ ಶಕುನ ಬಲ್ಲವರು . 


ಇದನ್ನೂ ಓದಿ : Relationship: ತಾಯಿ ಹಾಗೂ ಪತ್ನಿಯ ನಡುವೆ ಪುರುಷನ ಮೇಲೆ ಯಾರ ಹಕ್ಕು ಜಾಸ್ತಿ?


ಕಪ್ಪು ಇರುವೆಗಳು ಅಕ್ಕಿ ಒಯ್ಯುವುದು : 
ಕಪ್ಪು ಇರುವೆ ಬಾಯಿಯಲ್ಲಿ ಅಕ್ಕಿಯನ್ನು (Rice) ಹೊತ್ತುಕೊಂಡು ಹೋಗುವುದನ್ನು ನೋಡಿದರೆ, ಅದು  ಶುಭ ಸೂಚಕವಂತೆ.  ಇದರರ್ಥ ತಾಯಿ ಲಕ್ಷ್ಮಿಯ ಆಶೀರ್ವಾದ ಶೀಘ್ರದಲ್ಲೇ ನಿಮ್ಮ ಮೇಲೆ ಬೀಳಲಿದೆ ಎಂದು. 


 ಮನೆಗೆ ಗಿಳಿ ಬಂದರೆ :
ಗಿಳಿ (Parrot) ತಾನಾಗಿಯೇ ಮನೆಗೆ ಬಂದರೆ, ಅದನ್ನು ಬಹಳ ಶುಭ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಗಿಳಿ ಕೂಗುವುದು ಅಥವ  ರೆಕ್ಕೆಗಳನ್ನು ಬಡಿಯುವುದು ಬಹಳ ಶುಭ ಕ್ಷಣದ ಸಂಕೇತವಂತೆ. 


ಇದನ್ನೂ ಓದಿ : Jupiter Transit: 13 ತಿಂಗಳ ನಂತರ ಗುರು ರಾಶಿ ಪರಿವರ್ತನೆ, ಯಾವ ರಾಶಿಗೆ ಅದೃಷ್ಟ


ದೇಹದ ಭಾಗಗಳು ಒಡೆಯುವುದು : 
ದೇಹದ ಕೆಲವು ಭಾಗಗಳು ಒಡೆಯುವುದು ಶುಭವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಗಡ್ಡ ಅಥವಾ ತೋಳಿನ ಮಧ್ಯ ಭಾಗದಲ್ಲಿ ಸೀಳು ಕಂಡು ಬಂದರೆ ಅದು ಹಣ ಸಿಗುವ ಸಂಕೇತವಂತೆ. 


ಹಣೆಯ ಮೇಲೆ ಹಲ್ಲಿಯ ಬೀಳುವುದು : 
ಹಲ್ಲಿ (Lizard) ಹಣೆಯ ಮೇಲೆ  ಬಿದ್ದರೆ, ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಸಂಪತ್ತು ಎದುರಾಗುತ್ತದೆಯಂತೆ . 


ಇದನ್ನೂ ಓದಿ : Beard Can Also Change Luck: ಗಡ್ಡದಲ್ಲಿಯೂ ಕೂಡ ನಿಮ್ಮ ಅದೃಷ್ಟ ಅಡಗಿದೆ ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.