ಈ ಸಮಸ್ಯೆಗಳಿದ್ದರೆ ಕಲ್ಲಂಗಡಿ ಹಣ್ಣನ್ನು ಸೇವಿಸಬಾರದು, ಸಮಸ್ಯೆಗಳು ಉಲ್ಬಣಿಸಬಹುದು
ಆರೋಗ್ಯಕ್ಕೆ ಅತ್ಯುತ್ತಮ ಹಣ್ಣು ಎಂದು ಪರಿಗಣಿಸಲ್ಪಟ್ಟ ಈ ಹಣ್ಣನ್ನು ಎಲ್ಲರೂ ತಿನ್ನಲು ಸಾಧ್ಯವಿಲ್ಲ (Side effects of watermelon). ಏಕೆಂದರೆ ಕಲ್ಲಂಗಡಿ ಕೆಲವು ಜನರಿಗೆ ಹಾನಿ ಮಾಡುತ್ತದೆ.
ಬೆಂಗಳೂರು : ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಹೆಚ್ಚು ಸೇವಿಸಲಾಗುತ್ತದೆ. ಏಕೆಂದರೆ ಇದು ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡುವುದಿಲ್ಲ. ಜೊತೆಗೆ ಈ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು ಕೂಡಾ ಕಂಡು ಬರುತ್ತವೆ (Benefits of watermelon). ಖನಿಜಗಳು, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿ ಕಂಡುಬರುತ್ತವೆ. ಈ ಹಣ್ಣು ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಆರೋಗ್ಯಕ್ಕೆ ಅತ್ಯುತ್ತಮ ಹಣ್ಣು ಎಂದು ಪರಿಗಣಿಸಲ್ಪಟ್ಟ ಈ ಹಣ್ಣನ್ನು ಎಲ್ಲರೂ ತಿನ್ನಲು ಸಾಧ್ಯವಿಲ್ಲ (Side effects of watermelon). ಏಕೆಂದರೆ ಕಲ್ಲಂಗಡಿ ಕೆಲವು ಜನರಿಗೆ ಹಾನಿ ಮಾಡುತ್ತದೆ.
ಯಾರು ಕಲ್ಲಂಗಡಿ ಹಣ್ಣಿನಿಂದ ಅಂತರ ಕಾಯ್ದುಕೊಳ್ಳಬೇಕು ?
1. ಹೃದಯ ರೋಗಿಗಳು :
ಕಲ್ಲಂಗಡಿ ಹಣ್ಣಿನಲ್ಲಿ ಪೊಟ್ಯಾಸಿ ಸಮೃದ್ಧವಾಗಿರುತ್ತದೆ (Watermelon benefits). ಈ ಅಂಶವು ದೇಹದಲ್ಲಿ ಹೆಚ್ಚಾದರೆ, ಹೃದಯ ಬಡಿತ ಹೆಚ್ಚಳ ಮತ್ತು ದುರ್ಬಲ ನಾಡಿ ಬಡಿತದಂತಹ ಸಮಸ್ಯೆಗಳು ಎದುರಾಗುತ್ತದೆ.
ಇದನ್ನೂ ಓದಿ : Kidney Stone ಸಮಸ್ಯೆಯಿಂದ ದೂರ ಉಳಿಯಲು ಪ್ರತಿನಿತ್ಯ ಈ ಮೂರು ಜ್ಯೂಸ್ ಬಳಸಿ
2. ಶೀತ ಮತ್ತು ಕೆಮ್ಮು ಇರುವವರು :
ನೀವು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ, ಕಲ್ಲಂಗಡಿ ಹಣ್ಣಿನ ಸೇವನೆಯಿಂದ ದೂರ ಉಳಿಯಬೇಕು (Cough And Cold Patient). ಏಕೆಂದರೆ ಈ ಹಣ್ಣು ತಣ್ಣನೆಯ ಪರಿಣಾಮವನ್ನು ಹೊಂದಿರುತ್ತದೆ. ಆದ್ದರಿಂದ ಶೀತ ಕೆಮ್ಮು ಇರುವಾಗ ಅದನ್ನು ತಿನ್ನಬಾರದು.
3. ಮಧುಮೇಹ ರೋಗಿಗಳು :
ಕಲ್ಲಂಗಡಿ ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹಣ್ಣು. ಇದನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚುತ್ತದೆ. ಆದ್ದರಿಂದ, ಮಧುಮೇಹಿಗಳು (Diabetes Patient) ಇದನ್ನು ತಿನ್ನಬಾರದು.
ಇದನ್ನೂ ಓದಿ : Neem Flower Tea: ತೂಕ ಇಳಿಕೆಗೆ ಬೇವಿನ ಹೂವಿನ ಟೀ ತುಂಬಾ ಸಹಕಾರಿ, ಈ ರೀತಿ ಬಳಸಿ
4. ಸಂಧಿವಾತ ರೋಗಿಗಳು :
ಸಂಧಿವಾತ ಹೊಂದಿರುವ (Arthritis) ರೋಗಿಗಳು ಕಲ್ಲಂಗಡಿ ಹಣ್ಣನ್ನು ಸೇವಿಸಬಾರದು . ಏಕೆಂದರೆ ಅವರಿಗೆ ಊತ ಅಥವಾ ನೋವಿನ ಸಮಸ್ಯೆಗಳು ಹೆಚ್ಚಾಗಬಹುದು.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)